ಮುಳ್ಳೇರಿಯ: ಕಾರಡ್ಕ ವಲಯದ ಶ್ರೀಧರ್ಮಸ್ಥಳ ಶೌರ್ಯ ವಿಪತ್ತು ನಿರ್ವಹಣಾ ಘಟಕದ ಮವ್ವಾರು ಘಟಕದ ಉದ್ಘಾಟನಾ ಸಮಾರಂಭ ಮವ್ವಾರು ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಸೋಮವಾರ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಲಯ ಜನ ಜಾಗೃತಿ ವೇದಿಕೆಯ ಅಧ್ಯಕ್ಷ ಸಂಜೀವ ಶೆಟ್ಟಿ ವಹಿಸಿದ್ದರು. ತಾಲ್ಲೂಕು ಜನಜಾಗೃತಿ ವೇದಿಕೆಯ ಅಧ್ಯಕ್ಷ ಅಖಿಲೇಶ್ ನಗುಮುಗಂ ಉದ್ಘಾಟಿಸಿ ಮಾತನಾಡಿ, ಶೌರ್ಯ ವಿಪತ್ತು ನಿರ್ವಹಣಾ ಘಟಕದ ಸಮಾಜ ಮುಖಿ ಸೇವೆಗಳ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿ ಶುಭ ಹಾರೈಸಿದರು.
ಜನಜಾಗೃತಿ ವೇದಿಕೆಯ ಯೋಜನಾಧಿಕಾರಿ ಗಣೇಶ್ ಆಚಾರ್ಯ ಮಾತನಾಡಿ, ರಾಜ್ಯವ್ಯಾಪಿ ಶೌರ್ಯ ವಿಪತ್ತು ನಿರ್ವಹಣಾ ತಂಡದ ಸಾಧನೆ ಬಗ್ಗೆ ತಿಳಿಸುತ್ತಾ ಘಟಕದ ಸದಸ್ಯರ ಜವಾಬ್ದಾರಿ ಮತ್ತು ನಿರ್ವಹಿಸಬೇಕಾದ ಕರ್ತವ್ಯದ ಬಗ್ಗೆ ಸಮಗ್ರ ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ತಾಲ್ಲೂಕು ಯೋಜನಾಧಿಕಾರಿಗಳು ಘಟಕದ ಉತ್ತಮ ನಿರ್ವಹಣೆಗೆ ಶುಭ ಹಾರೈಸಿದರು. ಜನಜಾಗೃತಿ ವೇದಿಕೆಯ ಯೋಜನಾಧಿಕಾರಿಗಳು ಘಟಕ ಸದಸ್ಯರಿಗೆ ದಾಖಲಾತಿ ಹಸ್ತಾಂತರಿಸಿದರು. ವಲಯ ಒಕ್ಕೂಟದ ಅಧ್ಯಕ್ಷ ಸುರೇಶ್ ಯಾದವ್, ಜನಜಾಗೃತಿ ವೇದಿಕೆಯ ಸದಸ್ಯ ಬಾಲಕೃಷ್ಣ ರೈ ಮವ್ವಾರು, ಒಕ್ಕೂಟದ ಅಧ್ಯಕ್ಷ ದಾಕ್ಷಾಯಿಣಿ ನಿಕಟಪೂರ್ವ ಅಧ್ಯಕ್ಷ ಕೊರಗಪ್ಪ, ವಲಯ ಮೇಲ್ವಿಚಾರಕ ಸುರೇಶ್, ಘಟಕ ಸಂಯೋಜಕಿ ರಾಜೇಶ್ವರಿ, ಘಟಕ ಪ್ರತಿನಿಧಿ ಪದ್ಮನಾಭ ಉಪಸ್ಥಿತರಿದ್ದರು. ಸಿಂಧೂ ಕಾರ್ಯಕ್ರಮ ನಿರೂಪಿಸಿದರು ರಾಜೇಶ್ವರಿ ಸ್ವಾಗತಿಸಿ, ಶಶಿಧರ ವಂದಿಸಿದರು.