ವಯನಾಡು: ಭೂಕುಸಿತದಲ್ಲಿ ಹೆತ್ತವರನ್ನು ಕಳೆದುಕೊಂಡ ಮಕ್ಕಳಿಗೆ ಹಾಲುಣಿಸಲು ಭಾವನಾ, ಆಕೆಯ ಪತಿ ಸಜಿನ್ ಹಾಗೂ ಇಬ್ಬರು ಮಕ್ಕಳು ಇಡುಕ್ಕಿ ಉಪ್ಪುತಾರದಿಂದ ವಯನಾಡಿಗೆ ಆಗಮಿಸಿದ್ದಾರೆ. ಅವರು ಶುಕ್ರವಾರ ವಯನಾಡಿಗೆ ಬಂದು ತಲುಪಿಸಿದರು.
ದುರಂತದಲ್ಲಿ ತಂದೆ-ತಾಯಿಯನ್ನು ಕಳೆದುಕೊಂಡ ಅನೇಕ ಮಕ್ಕಳಿದ್ದಾರೆ ಎಂಬ ಮಾಹಿತಿ ಭಾವನಾ ಅವರನ್ನು ಪ್ರೇರೇಪಿಸಿತು. ಅನಾಥ ಶಿಶುಗಳಿಗೆ ಎದೆಹಾಲು ನೀಡಲು ಸಿದ್ಧ ಎಂದು ಭಾವನಾ ಸಾಮಾಜಿಕ ಜಾಲತಾಣಗಳ ಮೂಲಕ ಪ್ರಕಟಿಸಿದ್ದರು.
ಪುಟ್ಟ ಮಕ್ಕಳಿಗೆ ಎದೆಹಾಲು ಬೇಕಾದರೆ ನನ್ನ ಪತ್ನಿ ಸಿದ್ಧ ಎಂದು ಇಡುಕ್ಕಿ ಮೂಲದ ಸಜಿನ್ ಸಾಮಾಜಿಕ ಜಾಲತಾಣಗಳ ಮೂಲಕ ಮಾಹಿತಿ ನೀಡಿದ್ದರು. ಇದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದು, ಅವಶ್ಯಕತೆ ಇದೆ ಎಂದು ಕರೆ ಬಂದ ಬಳಿಕ ಸಜಿನ್ ತನ್ನ ಪತ್ನಿ ಹಾಗೂ ಇಬ್ಬರು ಮಕ್ಕಳೊಂದಿಗೆ ವಯನಾಡಿಗೆ ಬಂದು ಎದೆಹಾಲು ಪೂರೈಸಿದ್ದಾರೆ.
ಭಾವನಾ ಅವರು ಎರಡು ಮಕ್ಕಳ ತಾಯಿಯಾಗಿದ್ದು, ತಾಯಿ ಇಲ್ಲದ ಮಕ್ಕಳ ಸ್ಥಿತಿ ನನಗೆ ತಿಳಿದಿದೆ ಎಂದಿರುವ ಭಾವನಾ ನಾಲ್ಕು ವರ್ಷ ಹಾಗೂ ನಾಲ್ಕು ತಿಂಗಳ ವಯಸ್ಸಿನ ಎರಡು ಮಕ್ಕಳ ತಾಯಿಯಾಗಿದ್ದಾರೆ.