ತಿರುವನಂತಪುರಂ: ಹೈಕೋರ್ಟ್ ತೀರ್ಪಿನ ನಂತರ ಸಾರ್ವಜನಿಕ ಸ್ಥಳಗಳಲ್ಲಿ ಶೌಚಾಲಯ ತ್ಯಾಜ್ಯವನ್ನು ಎಸೆಯುವವರ ವಿರುದ್ಧ ಕ್ರಮಗಳನ್ನು ಕಠಿಣಗೊಳಿಸಲಾಗಿದೆ.
ಕಸ ಸುರಿಯುವ ಪ್ರಕರಣಗಳಲ್ಲಿ ಕಸ ತುಂಬಿದ ವಾಹನವನ್ನು ಬ್ಯಾಂಕ್ ಗ್ಯಾರಂಟಿಯೊಂದಿಗೆ ಮಾತ್ರ ಬಿಡುಗಡೆ ಮಾಡಬೇಕು ಎಂದು ಹೈಕೋರ್ಟ್ ನಿರ್ದೇಶನ ನೀಡಿತ್ತು. ನಂಬರ್ ಪ್ಲೇಟ್, ಲೈಟ್ ಇಲ್ಲದೇ ರಾತ್ರಿ ವೇಳೆ ಶೌಚಾಲಯ ತ್ಯಾಜ್ಯ ತಂದು ನಿರ್ಜನ ಪ್ರದೇಶಗಳಲ್ಲಿ ಬಿಸಾಡುತ್ತಾರೆ. ದರೋಡೆಕೋರರ ಪಟ್ಟಿಯಲ್ಲಿರುವ ಸಮಾಜವಿರೋಧಿಗಳು ಮತ್ತು ಇತರರು ಇದರ ನೇತೃತ್ವ ವಹಿಸಿದ್ದಾರೆ. ಕಸ ಸುರಿಯುವವರು ತಮ್ಮ ಸಮಾಜ ವಿರೋಧಿ ಚಟುವಟಿಕೆಗಳಿಗೆ ಹಣ ಪಡೆಯಲು ಸುಲಭ ಮಾರ್ಗವಾಗಿ ಈ ದಾರಿ ಹಿಡಿಯುತ್ತಿದ್ದಾರೆ ಎಂದು ಪೆÇಲೀಸ್ ಮುಖ್ಯಸ್ಥರು ಮೊನ್ನೆ ಹೇಳಿದ್ದರು.
ರಾತ್ರಿಯ ವಾಹನಗಳು ಹೆಚ್ಚಾಗಿ ಸಿಸಿಟಿವಿಯಲ್ಲಿ ಸೆರೆಯಾಗುವುದಿಲ್ಲ. ಪೋಲೀಸರ ಗಸ್ತು ನಿಷ್ಫಲವಾದ ಕಾರಣ ಅಂಥವರನ್ನು ಹಿಡಿಯುವುದು ಸುಲಭವಾಗಿರಲಿಲ್ಲ. ಒಂದೊಮ್ಮೆ ಸಿಕ್ಕಿಬಿದ್ದರೆ ಆರೋಪಿಗಳು ಕಾನೂನಿನ ಲೋಪದೋಷಗಳನ್ನು ಬಳಸಿ ತಪ್ಪಿಸಿಕೊಳ್ಳುತ್ತಿದ್ದರು. ಆದರೆ ವಾಹನ ಬಿಡುಗಡೆಗೆ ಸಂಬಂಧಿಸಿದಂತೆ ಹೈಕೋರ್ಟ್ ಕಟ್ಟುನಿಟ್ಟಿನ ಷರತ್ತುಗಳನ್ನು ಮುಂದಿಟ್ಟ ನಂತರ ಪೆÇಲೀಸರೂ ಮಧ್ಯಪ್ರವೇಶಿಸದೇ ಇಂತಹ ಕ್ರಮಗಳು ಕಡಿಮೆಯಾಗಲಿದೆ. ಇದರಿಂದ ಅಕ್ರಮ ತ್ಯಾಜ್ಯ ವಿಲೇವಾರಿ ಕಡಿಮೆಯಾಗಲಿದೆ ಎಂದೂ ಪೋಲೀಸರು ತೀರ್ಮಾನಿಸಿದ್ದಾರೆ.