ಮಂಜೇಶ್ವರ: ಸಂತಡ್ಕ ಶ್ರೀಅರಸು ಸಂಕಲ ದೈವಕ್ಷೇತ್ರದ ವಠಾರದಲ್ಲಿ ವಿಜಯ ಫ್ರೆಂಡ್ಸ್ ಕ್ಲಬ್ ಸಂತಡ್ಕ ಮತ್ತು ಟೀಮ್ ಗರುಡ ಸಂತಡ್ಕ ಇದರ ಜಂಟಿ ಆಶ್ರಯದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಮೊಸರು ಕುಡಿಕೆ ಉತ್ಸವ ನಡೆಯಿತು. ಕ್ಷೇತ್ರ ಆಡಳಿತ ಸಮಿತಿ ಅಧ್ಯಕ್ಷ ಡಾ. ಶ್ರೀಧರ ಭಟ್ ಉದ್ಘಾಟಿಸಿ ಶುಭಹಾರೈಸಿದರು.
. ಈ ಸಂದರ್ಭ ಸಮಿತಿ ಉಪಾಧ್ಯಕ್ಷ ಅರವಿಂದಕ್ಷ ಭಂಡಾರಿ ದಡ್ಡಂಗಡಿ, ರಮೇಶ್ ಎಂ. ಸಂತಡ್ಕ ಹಾಗು ಇತರ ಪದಾಧಿಕಾರಿಗಳು, ಸದಸ್ಯರು, ಟೀಮ್ ಗರುಡದ ಸದಸ್ಯರು, ಅರಸು ಸಂಕಲ ಸ್ವಯಂ ಸೇವಕರು ಉಪಸ್ಥಿತರಿದ್ದರು.