ಕಾಸರಗೋಡು: ಭಕ್ತಿ ಶ್ರದ್ಧೆಯಿಂದ ಭಾವನಾತ್ಮಕ ಚಿಂತನೆಯಲ್ಲಿ ನಾವು ಹಮ್ಮಿಕೊಳ್ಳುವ ಚಟುವಟಿಕೆಗಳು ಭಗವಂತನ ಆರಾಧನೆಯ ಮಹತ್ವ ಪಡೆದುಕೊಳ್ಳುತ್ತದೆ ಎಂದು ಸಾಹಿತಿ ಕವಿ ರಾಧಾಕೃಷ್ಣ ಉಳಿಯತಡ್ಕ ಹೇಳಿದರು.
ಅವರು ಕಾಸರಗೋಡು ಗುಡ್ಡೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಶ್ರೀ ರಾಘವೇಂದ್ರ ಸೇವಾ ಟ್ರಸ್ಟ್ ಕೂಡ್ಲು ಇವರ 353ನೇ ಗುರು ಶ್ರೀ ರಾಘವೇಂದ್ರ ಸ್ವಾಮಿಗಳ ಆರಾಧನಾ ಮಹೋತ್ಸವದ ಅಂಗವಗಿ ಆಯೋಜಿಸಲಾಗಿದ್ದ ಧಾರ್ಮಿಕ ಸಭೆಯಲ್ಲಿ ಮಾತನಾಡಿದರು. ಉತ್ಸವಗಳಲ್ಲಿ ದೇವರ ಪೂಜಾ ವಿಧಿ ವಿಧಾನಗಳೊಂದಿಗೆ ಕಲೆ ಸಾಹಿತ್ಯ ಸಂಸ್ಕøತಿಗಳ ತಿಳುವಳಿಕೆಯಿಂದಲೂ ಧರ್ಮ ಜಾಗೃತಿ ಮೂಡಿಸುವ ಪ್ರಯತ್ನವಾಗಬೇಕು ಎಂದು ತಿಳಿಸಿದರು.
ಟ್ರಸ್ಟಿನ ಪ್ರಧಾನ ಸಂಚಾಲಕರು ಕೆ. ಮಹಾಬಲ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಹರಿದಾಸ, ಭಜನಾ ಗುರು ಜಯಾನಂದಕುಮಾರ್ ಹೊಸದುರ್ಗ ಅವರಿಗೆ ಶ್ರೀ ರಾಘವೇಂದ್ರ ಅನುಗ್ರಹ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು. ಕೂಡ್ಲು ಬಂಟರ ಸಂಘದ ಅಧ್ಯಕ್ಷ ಕೆ.ಎಸ್ ರಾಮಕೃಷ್ಣ ಆಳ್ವ, ಮಹಾಲಿಂಗೇಶ್ವರ ದೇವಸ್ಥಾನದ ಅನುವಂಶಿಕ ಮುಕ್ತೇಸರ ಸುಧಾಕರ ಕೋಟೆ ಕುಂಜತ್ತಾಯ, ನಿವೃತ್ತ ಬ್ಯಾಂಕ್ ಮ್ಯಾನೇಜರ್ ಟಿ.ಕೆ ಕಾಸರಗೋಡು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಹರಿದಾಸ ತೋನ್ಸೆ ಪುಷ್ಕಳ ಕುಮಾರ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಗಾಯಕ ವಿಠ್ಠಲ್ ಶೆಟ್ಟಿ ವಂದಿಸಿದರು. ಭಜನೆ, ಹರಿಕಥೆ, ತಾಳಮದ್ದಳೆ, ಭಕ್ತಿ ಸಂಗೀತ ಸೇರಿದಂತೆ ದಿನಪೂರ್ತಿ ಕಾರ್ಯಖ್ರಮ ಜರುಗಿತು.