ಜನಪ್ರಿಯ ಟೆಲಿಗ್ರಾಮ್ (Telegram) ಅಪ್ಲಿಕೇಶನ್ ಈಗ ಮತ್ತೊಂದು ದೊಡ್ಡ ತಲೆನೋವಿನ ಸುಳಿಗೆ ಸಿಲುಕಿಕೊಂಡಿದೆ. ಈ ತನಿಖೆಯ ಸಂಶೋಧನೆಗಳ ಆಧಾರದ ಮೇಲೆ ಒಂದು ವೇಳೆ ಇದರ ಮೇಲಿರುವ ಈ ಆರೋಪಗಳು ನಿಜವಾದರೆ ಭಾರತದಲ್ಲಿ ಟೆಲಿಗ್ರಾಮ್ ಅಪ್ಲಿಕೇಶನ್ ಬ್ಯಾನ್ ಆಗೋದು ಪಕ್ಕ ಖಚಿತವಾಗಲಿದೆ. ಏನಪ್ಪಾ ಆ ಆರೋಪಗಳು ಅಂಥ ನೋಡುವುದಾದರೆ ಈ ಟೆಲಿಗ್ರಾಮ್ (Telegram Ban) ಅಪ್ಲಿಕೇಶನ್ ಸುಲಿಗೆ ಮತ್ತು ಜೂಜಾಟದಂತಹ ಕ್ರಿಮಿನಲ್ ಚಟುವಟಿಕೆಗಳಲ್ಲಿ ಮುಖ್ಯ ವಾಹಿನಿಯಾಗಿದ್ದು ಇದರ ದುರ್ಬಳಕೆ ಮಾಡಿಕೊಂಡಿರುವುದಾಗಿ ಆರೋಪಿಸಲಾಗಿದೆ. ಅಲ್ಲದೆ ಈ ರೀತಿಯ ಚಟುವಟಿಕೆಗಳ ಬಗ್ಗೆ ಎಲ್ಲ ಮಾಹಿತಿಯನ್ನು ಹೊಂದಿದ್ದ ಅಪ್ಲಿಕೇಶನ್ ಯಾವುದೇ ಕ್ರಮ ಕೈಕೊಂಡಿಲ್ಲದ ಹಿಂದೆ ತಾನೇ ಸ್ವತಃ ನಿಂತು ಬೆಂಬಲ ನೀಡುತ್ತಿರುವುದಾಗಿ ಆರೋಪಿಸಲಾಗಿದೆ.
Telegram ಸ್ಥಾಪಕನನ್ನು ಬಂಧಿಸಿರುವ ಪ್ಯಾರಿಸ್ ಫ್ರೆಂಚ್ ಅಧಿಕಾರಿಗಳು
ಈ ವಿಷಯ ಹರಡುತ್ತಿದ್ದಂತೆ ಟೆಲಿಗ್ರಾಮ್‌ನ ಸ್ಥಾಪಕ ಮತ್ತು ಸಿಇಒ ಆಗಿರುವ 39 ವರ್ಷದ ಪಾವೆಲ್ ಡುರೊವ್ (Pavel Durov) ಅವರನ್ನು ಮೂರೂ ದಿನಗಲ್ ಹಿಂದೆ ಅಂದ್ರೆ 24ನೇ ಆಗಸ್ಟ್ 2024 ರಂದು ಪ್ಯಾರಿಸ್‌ನಲ್ಲಿ ಫ್ರೆಂಚ್ ಅಧಿಕಾರಿಗಳು ಅಪ್ಲಿಕೇಶನ್‌ನ ಮಾಡರೇಶನ್ ನೀತಿಗಳ ಮೇಲೆ ಬಂಧಿಸಿದ ದಿನಗಳ ನಂತರ ಈ ಬೆಳವಣಿಗೆಯು ವೇಗವಾಗಿ ಹರಡಿದೆ. ಇವರನ್ನು ಟೆಲಿಗ್ರಾಮ್ (Telegram) ಆ್ಯಪ್‌ನಲ್ಲಿ ಅಪರಾಧ ಚಟುವಟಿಕೆಗಳನ್ನು ತಡೆಯುವಲ್ಲಿ ವಿಫಲರಾದ ಕಾರಣ ಅವರನ್ನು ಬಂಧಿಸಲಾಗಿದೆ. ಇದರೊಂದಿಗೆ ಭಾರತದಲ್ಲಿ ಗೃಹ ವ್ಯವಹಾರಗಳ ಸಚಿವಾಲಯ ಮತ್ತು ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ (MeitY) ನಡೆಸಿದ ತನಿಖೆಯು ನಿರ್ದಿಷ್ಟವಾಗಿ ಸುಲಿಗೆ ಮತ್ತು ಜೂಜಾಟದಂತಹ ಅಪರಾಧ ಚಟುವಟಿಕೆಗಳನ್ನು ಪರಿಶೀಲಿಸುತ್ತಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.
ಆರೋಪಗಳು ನಿಜವಾದರೆ ಭಾರತದಲ್ಲಿ ಟೆಲಿಗ್ರಾಮ್ ಅಪ್ಲಿಕೇಶನ್ ಬ್ಯಾನ್
ಭಾರತದಲ್ಲಿ 5 ಮಿಲಿಯನ್‌ಗಿಂತಲೂ ಹೆಚ್ಚು ನೋಂದಾಯಿತ ಬಳಕೆದಾರರನ್ನು ಹೊಂದಿರುವ ಪ್ಲಾಟ್‌ಫಾರ್ಮ್ ಅನ್ನು ನಿರ್ಬಂಧಿಸಲಾಗಿದೆ ಎಂದು ಅಧಿಕಾರಿ ತಳ್ಳಿಹಾಕಲಿಲ್ಲ ಆದರೆ ತನಿಖೆಯು ಏನನ್ನು ಎಸೆಯುತ್ತದೆ ಎಂಬುದರ ಆಧಾರದ ಮೇಲೆ ನಿರ್ಧಾರವಾಗುತ್ತದೆ ಎಂದು ಹೇಳಿದರು. ಭಾರತದಲ್ಲಿ ಟೆಲಿಗ್ರಾಮ್ ಪರಿಶೀಲನೆಯನ್ನು ಎದುರಿಸುತ್ತಿರುವುದು ಇದೇ ಮೊದಲಲ್ಲ. ಇದಕ್ಕೂ ಮೊದಲು ಈ ಅಪ್ಲಿಕೇಶನ್ ಶಾಲೆ, ಮಾಲ್ ಮತ್ತು ವಿಮಾನ ನಿಲ್ದಾಣಗಳಿಗೆ ಸುಳ್ಳು ಬಾಂಬ್ ಬೆದರಿಕೆಗಳನ್ನು ಕಳುಹಿಸಲು ದುರುಪಯೋಗಪಡಿಸಿಕೊಳ್ಳಲಾಗಿತ್ತು.
ಅಲ್ಲದೆ UGC-NEET ವಿವಾದಕ್ಕೆ ಸಂಬಂಧಿಸಿದಂತೆ ಈ ಟೆಲಿಗ್ರಾಮ್ ಇತ್ತೀಚೆಗೆ ಸುದ್ದಿಯಲ್ಲಿತ್ತು ಇದು ವಿದ್ಯಾರ್ಥಿಗಳ ಪ್ರತಿಭಟನೆಗೆ ಕಾರಣವಾಯಿತು ಮತ್ತು ಸುಪ್ರೀಂ ಕೋರ್ಟ್ ಮಧ್ಯಪ್ರವೇಶಿಸಲು ಒತ್ತಾಯಿಸಿತು. ವೈದ್ಯಕೀಯ ಪ್ರವೇಶ ಪರೀಕ್ಷೆಯ ಪ್ರಶ್ನೆಪತ್ರಿಕೆ ಸೋರಿಕೆಯಾಗಿದೆ ಮತ್ತು ಎನ್‌ಕ್ರಿಪ್ಟ್ ಮಾಡಿದ ಸಂದೇಶ ಕಳುಹಿಸುವ ಅಪ್ಲಿಕೇಶನ್ ಟೆಲಿಗ್ರಾಮ್‌ನಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗಿದೆ ಎಂದು ಆರೋಪಿಸಲಾಗಿದೆ. ಇವೆಲ್ಲವನ್ನು ಗಮನಟ್ಟುಕೊಂಡು ನೋಡುವುದಾದರೆ ಈ ಬಾರಿ ಭಾರತದಲ್ಲಿ ಟೆಲಿಗ್ರಾಮ್ ಅಪ್ಲಿಕೇಶನ್ ಬ್ಯಾನ್ ಆಗುವ ನಿರೀಕ್ಷೆಗಳಿವೆ. ಇದರ ಬಗ್ಗೆ ನಿಮ್ಮ ಅನಿಸಿಕೆಗಳೇನು ಎನ್ನುವುದನ್ನು ಈ ಕೆಳಗೆ ಕಮೆಂಟ್ ಮಾಡಿ ತಿಳಿಸಿ.