ಮುಳ್ಳೇರಿಯ: ಆದೂರು ಪೊಲೀಸ್ ಠಾಣೆ ವ್ಯಾಪ್ತಿಯ ಮಲ್ಲಂಪಾರೆಯ ವ್ಯಕ್ತಿಯೊಬ್ಬರ ಹಿತ್ತಿಲಲ್ಲಿ ಉರುಳಿಗೆ ಸಿಲುಕಿ ಮೃತಪಟ್ಟ ಚಿರತೆ ಕಳೇಬರ ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು, ಕುಣಿಕೆ ಇರಿಸಿದವರಿಗಾಗಿ ಪೊಲೀಸ್ ಹಾಗೂ ಅರಣ್ಯಾಧಿಕಾರಿಗಳು ಹುಡುಕಾಟ ಆರಂಭಿಸಿದ್ದಾರೆ.
ಕಳೆದ ಶುಕ್ರವಾರ ಮಲ್ಲಂಪಾರೆಯ ವ್ಯಕ್ತಿಯೊಬ್ಬರ ಹಿತ್ತಿಲಲ್ಲಿ ಹೊಟ್ಟೆ ಭಾಗಕ್ಕೆ ಕುಣಿಕೆ ಬಿಗಿದ ಸ್ಥಿತಿಯಲ್ಲಿ ಚಿರತೆ ಪತ್ತೆಯಾಗಿದ್ದು, ಕಾರ್ಯಾಚರಣೆ ಮಧ್ಯೆ ಸಾವನ್ನಪ್ಪಿತ್ತು. ಆಸುಪಾಸಿನವರು ಹಂದಿಗಾಗಿ ಇರಿಸಿದ ಕುಣಿಕೆಗೆ ಚಿರತೆ ಸಿಲುಕಿರಬೇಕೆಂದು ಸಂಶಯಿಸಲಾಗಿದ್ದು, ಕುಣಿಕೆ ಇರಿಸಿದವರ ಪತ್ತೆಗೆ ಅರನ್ಯ ಇಲಾಖೆ ಹಾಗೂ ಪೊಲೀಸರು ಹುಡುಕಾಟ ಆರಂಭಿಸಿದ್ದಾರೆ.