HEALTH TIPS

ಹೊಟ್ಟೆ ಉಬ್ಬರ ನಿತ್ಯ ಕಾಡುತ್ತಾ!?, ಗ್ಯಾಸ್ಟ್ರಿಕ್‌ ಸಮಸ್ಯೆಗೆ ಈ ಸರಳ ಮನೆಮದ್ದು ಟ್ರೈ ಮಾಡಿ!

 ತ್ತೀಚೆಗೆ ಬಹಳಷ್ಟು ಮಂದಿ ಹೊಟ್ಟೆ ಉಬ್ಬರ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಹೊಟ್ಟೆ ಊದಿಕೊಂಡಾಗ ಗ್ಯಾಸ್‌ ತುಂಬಿದಂತಾಗಿ ಬಹಳ ಕಷ್ಟಪಡಬೇಕಾಗುತ್ತದೆ. ಹೊಟ್ಟೆ ಉಬ್ಬರ ಸಮಸ್ಯೆ ಉಂಟಾದಾಗ ನಿಮ್ಮ ಹೊಟ್ಟೆಯು ದೊಡ್ಡದಾಗಿ ಕಾಣಿಸಬಹುದು. ಹೊಟ್ಟೆ ತುಂಬಿದ ಅನುಭವ ಆಗಬಹುದು ಅಥವಾ ನಿಮ್ಮ ಬಟ್ಟೆಗಳು ಬಿಗಿಯಾಗಬಹುದು.

ಇದಕ್ಕೆ ನಿಮ್ಮ ಆಹಾರ ಪದ್ಧತಿ, ವೈದ್ಯಕೀಯ ಸಮಸ್ಯೆಗಳು ಕೂಡಾ ಕಾರಣವಿರಬಹುದು. ಕೆಲವೊಮ್ಮೆ ಅತಿಯಾಗಿ ತಿನ್ನುವುದರಿಂದ, ಬೀನ್ಸ್ ಅಥವಾ ಎಲೆಕೋಸಿನಂಥ ತರಕಾರಿಗಳನ್ನು ಸೇವಿಸುವುದರಿಂದ ನಿಮ್ಮ ದೇಹಕ್ಕೆ ಜೀರ್ಣಿಸಿಕೊಳ್ಳಲು ಕಷ್ಟವಾಗಬಹುದು. ನೀವು ತುಂಬಾ ಒತ್ತಡ ಅಥವಾ ಆತಂಕದಲ್ಲಿರುವಾಗ ಸಹ ಹೊಟ್ಟೆ ಉಬ್ಬರ ಸಮಸ್ಯೆ ಉಂಟಾಗಬಹುದು.

ಹೊಟ್ಟೆ ಉಬ್ಬರವು ಸಾಮಾನ್ಯವಾಗಿ ಜಠರಗರುಳಿನ ನಾಳದಲ್ಲಿ ಅನಿಲದ ನಿರ್ಮಾಣದಿಂದಾಗಿ ಸಂಭವಿಸುತ್ತದೆ. ಆದ್ದರಿಂದ ಇದು ಆಹಾರ, ಪಾನೀಯಗಳು, ಜೀರ್ಣಕಾರಿ ಸಮಸ್ಯೆಗಳು ಅಥವಾ ಹಾರ್ಮೋನುಗಳ ಬದಲಾವಣೆಗಳಿಂದಾಗಿ ಋತುಚಕ್ರದ ಸಮಯದಲ್ಲಿಯೂ ಸಹ ಸಂಭವಿಸಬಹುದು. ಇದನ್ನು ನಿವಾರಿಸಲು ಒಂದಷ್ಟು ಸಲಹೆಗಳು ಇಲ್ಲಿವೆ ತಿಳಿಯಿರಿ.

ಹೆಚ್ಚಿನ ಜನರಲ್ಲಿ ಹೊಟ್ಟೆಯಲ್ಲಿ ಗ್ಯಾಸ್ ತುಂಬಿ ಬೇರೆ ಯಾವ ಕೆಲಸ ಮಾಡಲು ಆಗದು ಮತ್ತು ಊಟ ಮಾಡಲು ಸಾಧ್ಯವಾಗದು. ಇದರಿಂದ ಇನ್ನಷ್ಟು ಸಮಸ್ಯೆಗಳು ಕಾಡುವುದು ಇದೆ. ಇದನ್ನು ನಿವಾರಣೆ ಮಾಡಲು ಕೆಲವೊಂದು ಮನೆಮದ್ದುಗಳು ತುಂಬಾ ಸಹಕಾರಿ ಆಗಿದೆ. ಅಂತಹ ಮನೆಮದ್ದುಗಳ ಬಗ್ಗೆ ತಿಳಿದು ಕೊಂಡು ಬಳಸಿದರೆ, ಹೊಟ್ಟೆಯ ಗ್ಯಾಸ್ ಸಮಸ್ಯೆಯನ್ನು ದೂರ ಮಾಡಬಹುದು…..

ಬೆಳಗ್ಗೆ ಖಾಲಿ ಹೊಟ್ಟೆಗೆ ಒಂದು ಲೋಟ ಉಗುರು ಬೆಚ್ಚಗಿನ ನೀರನ್ನು ಕುಡಿಯುವ ಅಭ್ಯಾಸ ಮಾಡಿಕೊಂಡರೆ ಈ ಸಮಸ್ಯೆ ಕ್ರಮೇಣ ವಾಗಿ ನಿವಾರಣೆಯಾಗುವುದು.
ಇದು ಜೀರ್ಣಕ್ರಿಯೆ ರಸವನ್ನು ಉತ್ತೇಜಿಸುವುದು ಹಾಗೂ ಗ್ಯಾಸ್ ಮತ್ತು ಹೊಟ್ಟೆ ಉಬ್ಬರ ಕಡಿಮೆ ಮಾಡುವುದು.ಒಂದು ಲೋಟ ಉಗುರು ಬೆಚ್ಚಗಿನ ನೀರಿಗೆ ಅರ್ಧ ಲಿಂಬೆಯನ್ನು ಹಿಂಡಿಕೊಳ್ಳಿ. ಇದನ್ನು ಸರಿಯಾಗಿ ಕಲಸಿಕೊಂಡು ಅದನ್ನು ಖಾಲಿ ಹೊಟ್ಟೆಯಲ್ಲಿ ಸೇವನೆ ಮಾಡಿ.

ಲಿಂಬೆಯು ಜೀರ್ಣಕ್ರಿಯೆ ಉತ್ತೇಜಿಸುವುದು ಮತ್ತು ಸ್ವಲ್ಪ ಮೂತ್ರವರ್ಧಕವಾಗಿಯೂ ಕೆಲಸ ಮಾಡುವುದು. ದೇಹದಲ್ಲಿ ಇರುವ ಅತಿಯಾದ ಗ್ಯಾಸ್ ಮತ್ತು ವಿಷಕಾರಿ ಅಂಶವನ್ನು ಇದು ಹೊರಗೆ ಹಾಕಲು ಸಹಕಾರಿ ಆಗಿದೆ. ಜೀರ್ಣಕ್ರಿಯೆ ಕಾರ್ಯವು ಸರಾಗವಾಗಿ ಆಗಲು ಇದು ತುಂಬಾ ಪರಿಣಾಮಕಾರಿ ಆಗಿದೆ.

ಜೀರಿಗೆ ನೀರು:-

ಭಾರತೀಯರು ತಮ್ಮ ಪ್ರತಿಯೊಂದು ಅಡುಗೆಗೂ ಹೆಚ್ಚಾಗಿ ಬಳಸಲ್ಪಡುವಂತಹ ಜೀರಿಗೆಯು ಕೂಡ ಜೀರ್ಣಕ್ರಿಯೆಗೆ ತುಂಬಾ ಸಹಕಾರಿ ಆಗಿರುವುದು. ಜೀರಿಗೆ ನೀರು ಹೊಟ್ಟೆ ಉಬ್ಬರ ಮತ್ತು ಗ್ಯಾಸ್ ನ್ನು ಕಡಿಮೆ ಮಾಡುವುದು.

ಒಂದು ಚಮಚ ಜೀರಿಗೆಯನ್ನು ಸ್ವಲ್ಪ ಹುರಿದುಕೊಳ್ಳಿ. ಇದರ ಬಳಿಕ ಒಂದು ಕಪ್ ನೀರನ್ನು ಬಿಸಿ ಮಾಡಲು ಇಡಿ. ಹುರಿದು ಕೊಂಡು ಜೀರಿಗೆ ಹಾಕಿ ಮತ್ತು 5 ರಿಂದ 7 ನಿಮಿಷಗಳ ವರೆಗೆ ಕುದಿಸಿ. ಇದರ ಬಳಿಕ ಸೋಸಿಕೊಂಡು ಬಿಸಿ ಇರುವಾಗಲೇ ಅದನ್ನು ಕುಡಿಯಿರಿ. ಜೀರಿಗೆ ಜೀರ್ಣಕ್ರಿಯೆ ಕಿಣ್ವಗಳನ್ನು ಉತ್ಪಾದಿಸುವುದು ಮತ್ತು ಜೀರ್ಣಕ್ರಿಯೆ ಸುಧಾರಣೆ ಮಾಡಿ ಗ್ಯಾಸ್ ಸಮಸ್ಯೆಯನ್ನು ದೂರ ಮಾಡುವುದು.

ಶುಂಠಿ ಮತ್ತ ತುಳಸಿ ಪಾನೀಯ:-

ಶುಂಠಿ ಹಾಗೂ ತುಳಸಿಯು ಜೀರ್ಣಕ್ರಿಯೆಲ್ಲಿ ಪ್ರಮುಖ ಪಾತ್ರ ವಹಿಸುವುದು ಎಂದು ನಮಗೆ ತಿಳಿದೇ ಇದೆ. ಇವುಗಳನ್ನು ಜತೆಯಾಗಿ ಸೇವನೆ ಮಾಡಿದರೆ, ಆಗ ಇದರಿಂದ ಗ್ಯಾಸ್ ಮತ್ತು ಹೊಟ್ಟೆ ಉಬ್ಬರ ದೂರ ಮಾಡಬಹುದು. ಸಣ್ಣ ತುಂಡು ಶುಂಠಿ ತೆಗೆದುಕೊಂಡು, ಇದನ್ನು ತೆಳುವಾಗಿ ಕತ್ತರಿಸಿಕೊಳ್ಳಿ.

ಒಂದು ಕಪ್ ನೀರನ್ನು ಬಿಸಿ ಮಾಡಿ ಅದಕ್ಕೆ ಈ ಶುಂಠಿ ತುಂಡುಗಳನ್ನು ಹಾಕಿ, ಅದೇ ರೀತಿ 5 ರಿಂದ 7 ತುಳಸಿ ಎಲೆಗಳನ್ನು ಕೂಡ ಹಾಕಿ. 10 ನಿಮಿಷ ಕಾಲ ಹಾಗೆ ಕುದಿಯಲಿ, ಇದರ ಬಳಿಕ ಸೋಸಿಕೊಂಡು, ಸ್ವಲ್ಪ ಬಿಸಿ ಇರುವಾಗಲೇ ಕುಡಿಯಿರಿ. ಶುಂಠಿಯು ಉರಿಯೂತ ಶಮನಕಾರಿ ಗುಣ ಹೊಂದಿದೆ ಮತ್ತು ಜೀರ್ಣಕ್ರಿಯೆ ಉತ್ತೇಜಿಸುವುದು. ಅದೇ ರೀತಿಯಲ್ಲಿ ತುಳಸಿಯು ಜೀರ್ಣಕ್ರಿಯೆ ವ್ಯವಸ್ಥೆಗೆ ಆರಾಮ ನೀಡುವುದು. ಇವೆರಡನ್ನು ಜತೆಯಾಗಿ ಮಿಶ್ರಣ ಮಾಡಿದರೆ, ಆಗ ಇದರಿಂದ ಗ್ಯಾಸ್ ನಿವಾರಣೆ ಆಗಿ, ಹೊಟೆ ಉಬ್ಬರ ಹೆಚ್ಚಾಗುವುದು.

ಹಿಂಗು ನೀರು:-

ಜೀರ್ಣಕ್ರಿಯೆಗೆ ಸಹಕಾರಿ ಆಗಿರುವ ಹಿಂಗನ್ನು ಹೆಚ್ಚಾಗಿ ಸಸ್ಯಾ ಹಾರ ಖಾದ್ಯಗಳಿಗೆ ಬಳಕೆ ಮಾಡಲಾಗುತ್ತದೆ. ಇದು ಕೂಡ ಗ್ಯಾಸ್ ಮತ್ತು ಹೊಟ್ಟೆ ಉಬ್ಬರ ನಿವಾರಣೆ ಮಾಡಲು ಸಹಕಾರಿ ಆಗಿದೆ. ಒಂದು ತುಂಡು ಹಿಂಗನ್ನು ಬಿಸಿ ನೀರಿಗೆ ಹಾಕಿ.
ಇದನ್ನು ವಾರದಲ್ಲಿ ಎರಡು ಸಲ, ಅದರಲ್ಲೂ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿದರೆ ಒಳ್ಳೆಯದು. ಹಿಂಗು ಗ್ಯಾಸ್ ಮತ್ತು ಹೊಟ್ಟೆ ಉಬ್ಬರ ನಿವಾರಣೆ ಮಾಡಲು ಸಹಕಾರಿ ಆಗಿದೆ. ಇದು ಸಂಪೂರ್ಣ ಜೀರ್ಣಕ್ರಿಯೆ ಸುಧಾರಣೆ ಮಾಡುವುದು.

ಮಜ್ಜಿಗೆ ಮತ್ತು ಶುಂಠಿ

ಮಜ್ಜಿಗೆಯು ಯಾವಾಗಲೂ ಜೀರ್ಣಕ್ರಿಯೆ ಸುಧಾರಣೆ ಮಾಡಲು ಸಹಕಾರಿ ಆಗಿರುವುದು. ಇದಕ್ಕೆ ಸ್ವಲ್ಪ ಶುಂಠಿ ಮತ್ತು ಕೊತ್ತಂಬರಿ ಹಾಕಿದರೆ, ಆಗ ಇದು ಗ್ಯಾಸ್ ನಿವಾರಣೆ ಮಾಡಲು ಇನ್ನಷ್ಟು ಪರಿಣಾಮಕಾರಿ ಆಗಿರುವುದು.

ಒಂದು ಕಪ್ ಮಜ್ಜಿಗೆಗೆ ಒಂದು ಚಮಚ ತುರಿದ ಶುಂಠಿ ಹಾಕಿ ಮತ್ತು ಒಂದು ಚಮಚ ಕೊತ್ತಂಬರಿ ಹಾಕಿಕೊಂಡು ಸರಿಯಾಗಿ ಮಿಶ್ರಣ ಮಾಡಿ. ಇದನ್ನು ಬೆಳಗ್ಗೆ ಅಥವಾ ಊಟವಾದ ಬಳಿಕ ಕುಡಿದರೆ ಒಳ್ಳೆಯದು. ಮಜ್ಜಿಗೆಯಲ್ಲಿ ಪ್ರೊಬಯೋಟಿಕ್ ಅಂಶವಿದ್ದು, ಇದು ಹೊಟ್ಟೆಯ ಆರೋಗ್ಯ ಕಾಪಾಡುವುದು. ಶುಂಠಿ ಮತ್ತು ಕೊತ್ತಂಬರಿಯು ಜೀರ್ಣಕ್ರಿಯೆ ಸುಧಾರಿಸಿ, ಉರಿಯೂತ ಕಡಿಮೆ ಮಾಡುವುದು. ಈ ಸಂಯೋಜನೆಯು ಜೀರ್ಣಕ್ರಿಯೆ ವ್ಯವಸ್ಥೆಯನ್ನು ಸರಿಪಡಿಸುವುದು ಮತ್ತು ಗ್ಯಾಸ್ ನಿವಾರಣೆ ಮಾಡುವುದು.

ಓಮಕಾಳು:-

ಓಮಕಾಳಿನಲ್ಲಿ ಕೂಡ ಜೀರ್ಣಕ್ರಿಯೆ ಸುಧಾರಿಸುವ ಗುಣಗಳು ಇವೆ ಮತ್ತು ಗ್ಯಾಸ್ ನಿವಾರಣೆಗೆ ಇದು ಪರಿಣಾಮಕಾರಿ ಆಗಿದೆ. ಒಂದು ಚಮಚ ಓಮಕಾಳನ್ನು ರಾತ್ರಿ ವೇಳೆ ನೀರಿನಲ್ಲಿ ಹಾಕಿ ನೆನೆಸಿಡಿ. ಇದನ್ನು ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವನೆ ಮಾಡಿದರೆ ಆಗ ಗ್ಯಾಸ್ ಮತ್ತು ಹೊಟ್ಟೆ ಉಬ್ಬರ ದೂರವಾಗು ವುದು. ಇದರಲ್ಲಿ ಇರುವ ಬ್ಯಾಕ್ಟೀರಿಯಾ ವಿರೋಧಿ ಗುಣವು ಹೊಟ್ಟೆಯ ಆರೋಗ್ಯ ಕಾಪಾಡುವುದು.

ಸೋಂಪು ಕಾಳು: ಊಟವಾದ ಬಳಿಕ ಹೋಟೆಲ್ ನಲ್ಲಿ ನೀಡುವಂತಹ ಸೋಂಪನ್ನು ಜಗಿದರೆ, ಅದರಿಂದ ಜೀರ್ಣಕ್ರಿಯೆ ಉತ್ತಮವಾಗುವುದು. ಇದು ಕೂಡ ಗ್ಯಾಸ್ ನಿವಾರಣೆಗೆ ಪರಿಣಾಮಕಾರಿ ಆಗಿದೆ. ಒಂದು ಚಮಚ ಸೋಂಪನ್ನು ನಿಧಾಣವಾಗಿ ಜಗಿದು ತಿನ್ನಬೇಕು. ಸೋಂಪು ಗ್ಯಾಸ್ ಮತ್ತು ಹೊಟ್ಟೆ ಉಬ್ಬರ ನಿವಾರಿಸಿ, ಜೀರ್ಣಕ್ರಿಯೆ ಸ್ನಾಯುಗಳಿಗೆ ಆರಾಮ ನೀಡುವುದು

ಬೆಳಗ್ಗೆ ಪುದೀನಾ ಚಹಾ ಕುಡಿಯುವ ಅಭ್ಯಾಸ ಮಾಡಿಕೊಂಡರೆ, ಗ್ಯಾಸ್ ಹಾಗೂ ಹೊಟ್ಟೆ ಉಬ್ಬರ ಕಡಿಮೆ ಮಾಡುವುದು. ಇದು ಅಜೀರ್ಣ ಸಮಸ್ಯೆಯನ್ನು ದೂರ ಮಾಡಲು ಸಹಕಾರಿ ಆಗಿದೆ. ಒಂದು ಕಪ್ ನೀರನ್ನು ಕುದಿಸಿ, ಅದಕ್ಕೆ ಕೆಲವು ಪುದೀನಾ ಎಲೆಗಳನ್ನು ಹಾಕಿ. 5-7 ನಿಮಿಷ ಕಾಲ ಹಾಗೆ ಕುದಿಸಿ ಮತ್ತು ಬಿಸಿ ಇರುವಾಗಲೇ ಕುಡಿಯಿರಿ. ಪುದೀನಾವು ಜೀರ್ಣಕ್ರಿಯೆ ಸ್ನಾಯುಗಳನ್ನು ಆರಾಮವಾಗಿಡುವುದು ಮತ್ತು ಗ್ಯಾಸ್ ಹಾಗೂ ಹೊಟ್ಟೆ ಉಬ್ಬರ ಕಡಿಮೆ ಮಾಡಲು ಸಹಕಾರಿ ಆಗಿದೆ.
ಮೆಂತ್ಯೆ ನೀರು: ಗ್ಯಾಸ್ ಹಾಗೂ ಹೊಟ್ಟೆ ಉಬ್ಬರ ಸಹಿತ ಜೀರ್ಣಕ್ರಿಯೆ ಸಮಸ್ಯೆಗಳನ್ನು ನಿವಾರಿಸಲು ಮೆಂತ್ಯೆ ತುಂಬಾ ಪರಿಣಾಮಕಾರಿ. ಒಂದು ಚಮಚ ಮೆಂತ್ಯೆಕಾಳನ್ನು ರಾತ್ರಿ ನೀರಿಗೆ ಹಾಕಿ ನೆನೆಸಿಡಿ. ಬೆಳಗ್ಗೆ ಇದನ್ನು ಕುಡಿದರೆ ಆಗ ಇದರಿಂದ ಹೊಟ್ಟೆ ಉಬ್ಬರ ಮತ್ತು ಗ್ಯಾಸ್ ದೂರವಾಗುವುದು.


Tags

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries