ನವದೆಹಲಿ: ಕೇರಳದ ಸಣ್ಣ ವ್ಯಾಪಾರಿಗಳನ್ನು ತುಳಿಯುವ ನೀತಿಯನ್ನು ರಾಜ್ಯ ಸರ್ಕಾರ ಅನುಸರಿಸುತ್ತಿದೆ. ಈ ನಿಟ್ಟಿಒನಲ್ಲಿ ರಾಜ್ಯ ಸ್ಥಳೀಯಾಡಳಿತ ಸಚಿವ ಎಂ.ಬಿ.ರಾಜೇಶ್ ಚುಕ್ಕಾಣಿ ಹಿಡಿದಿದ್ದಾರೆ ಎಂದು ಕೇರಳ ವ್ಯಾಪಾರಿ ವ್ಯವಸಾಯಿ ಏಕೋಪನ ಸಮಿತಿ ಆರೋಪಿಸಿದೆ.
ರಾಜ್ಯದ ವರ್ತಕರ ಸಮಸ್ಯೆಗಳನ್ನು ಈಡೇರಿಸಲು ಹಲವು ಬಾರಿ ಪ್ರಯತ್ನಿಸಿದರೂ ಎಂ.ಬಿ.ರಾಜೇಶ್ ಅನುಮತಿ ನೀಡಿರಲಿಲ್ಲ. ಆದರೆ ಈ ಬಗ್ಗೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಭೇಟಿ ಮಾಡಲು ದೆಹಲಿಗೆ ಬಂದಿರುವುದಾಗಿ ಏಕೋಪನ ಸಮಿತಿ ಅಧ್ಯಕ್ಷ ರಾಜು ಅಪ್ಸರಾ ಹೇಳಿದ್ದಾರೆ.
ರಾಜ್ಯ ಸರ್ಕಾರ ವರ್ತಕರ ಮೇಲೆ ದಬ್ಬಾಳಿಕೆ ನೀತಿ ಅನುಸರಿಸುತ್ತಿದೆ. ವ್ಯಾಪಾರಸ್ಥರನ್ನು ಭೇಟಿಯಾಗಲೂ ಸಚಿವರು ಸಿದ್ಧರಿಲ್ಲ. ವ್ಯಾಪಾರಸ್ಥರ ಸಮಸ್ಯೆಗಳನ್ನು ಆಲಿಸಲು ಆಸಕ್ತಿ ತೋರುತ್ತಿಲ್ಲ. ಸ್ಥಳೀಯಾಡಳಿತ ಇಲಾಖೆ ಕೈಗೊಂಡಿರುವ ಹಲವು ಕ್ರಮಗಳು ವ್ಯಾಪಾರಿಗಳ ವಿರೋಧಿಯಾಗಿದೆ. ಸಮಸ್ಯೆಗಳ ಬಗ್ಗೆ ಚರ್ಚಿಸಲು ಹಲವು ಬಾರಿ ಭೇಟಿ ಮಾಡಲು ಪ್ರಯತ್ನಿಸಲಾಗಿತ್ತು.
ಆದರೆ ಉದ್ದೇಶಪೂರ್ವಕವಾಗಿ ಭೇಟಿಯಾಗುವ ಅವಕಾಶವನ್ನು ನಿರಾಕರಿಸಿದ್ದಾರೆ. ರಾಜೇಶ್ ದುರಹಂಕಾರಿಯಾಗಿದ್ದು, ಯಾವುದೇ ರೀತಿಯ ಮಾತುಕತೆಗೆ ಸಿದ್ಧರಿಲ್ಲ ಎಂದು ರಾಜು ಅಪ್ಸರಾ ದೆಹಲಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದರು.