HEALTH TIPS

ಆನ್‍ಲೈನ್ ಸಾಲ ಅಪ್ಲಿಕೇಶನ್ ಬೆದರಿಕೆ; ಪೆರುಂಬಾವೂರಿನಲ್ಲಿ ಗೃಹಿಣಿ ಆತ್ಮಹತ್ಯೆ

                  ಕೊಚ್ಚಿ: ಆನ್‍ಲೈನ್‍ನಲ್ಲಿ ಸಾಲ ನೀಡುವ ಆ್ಯಪ್ ಬೆದರಿಕೆಯಿಂದ ಮಹಿಳೆಯೊಬ್ಬರು ಮಂಗಳವಾರ ಮಧ್ಯಾಹ್ನ ಮನೆಯೊಳಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಕೊಚ್ಚಿಯ ಪೆರುಂಬಾವೂರಲ್ಲಿ ನಡೆದಿದೆ. 

                ಅತಿರಾ ಎಂಬವರು ಆತ್ಮಹತ್ಯೆಗೈದವರಾಗಿದ್ದು ಅವರ ಪತಿ ವಿದೇಶದಲ್ಲಿದ್ದಾರೆ. ಅವರಿಗೆ ಇಬ್ಬರು ಮಕ್ಕಳಿದ್ದಾರೆ. ಪೆÇಲೀಸರು ಅತಿರಾ ಅವರ ಫೆÇೀನ್ ಪರಿಶೀಲಿಸಿದಾಗ ಸಾಲದ ಆ್ಯಪ್ ನಿಂದ ಬೆದರಿಕೆ ಬಂದಿರುವುದು ಸ್ಪಷ್ಟವಾಗಿದೆ.

          ಮಹಿಳೆಯ ಪೋನ್‍ಗೆ ನಗ್ನ ಚಿತ್ರಗಳನ್ನು ಕಳುಹಿಸುವುದಾಗಿ ಬೆದರಿಕೆ ಹಾಕಿರುವುದು ಪತ್ತೆಯಾಗಿದೆ. ನಗ್ನ ಚಿತ್ರಗಳನ್ನು ಕಳುಹಿಸಿದರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಸಂದೇಶಗಳಿಗೆ ಮಹಿಳೆ ಉತ್ತರಿಸಿದ್ದಳು. ಮಹಿಳೆ ಆತ್ಮಹತ್ಯೆ ಮಾಡಿಕೊಂಡ ನಂತರವೂ ಪೋನ್‍ಗೆ ಸಂದೇಶಗಳು ಮತ್ತು ಕರೆಗಳು ಬಂದವು. ಪೋಲೀಸರು ಮಹಿಳೆಯ ಪೋನ್ ಅನ್ನು ವಶಕ್ಕೆ ಪಡೆದು ಅಸಹಜ ಸಾವು ಎಂದು ಪ್ರಕರಣ ದಾಖಲಿಸಿಕೊಂಡಿದ್ದಾರೆ.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries