ಕುಂಬಳೆ: ಕೇಂದ್ರ ಸರ್ಕಾರದ ಅಂಗೀಕೃತ ಸಂಘಟನೆಯಾದ ‘ಯೋಗಾಸನ ಭಾರತ’ ಆಯೋಜಿಸುವ ರಾಷ್ಟ್ರ ಮಟ್ಟದ ಯೋಗಾಸನ ಸ್ಪರ್ಧೆಗೆ ಯೋಗಪಟುಗಳನ್ನು ಆಯ್ಕೆ ಮಾಡುವ ಉದ್ದೇಶದಿಂದ ‘ಯೋಗಾಸನ ಕಾಸರಗೋಡು’ ಇವರ ನೇತೃತ್ವದಲ್ಲಿ ಜಿಲ್ಲಾ ಮಟ್ಟದ ಸ್ಪರ್ಧೆಯನ್ನು ಕಾಸರಗೋಡಿನಲ್ಲಿರುವ ಯುಗಪುರುಷ ನರೇಂದ್ರ ಮೋದಿ ವಿದ್ಯಾಲಯದಲ್ಲಿ ಆಗಸ್ಟ್ 18 ರಂದು ಆಯೋಜಿಸಲಾಗುತ್ತಿದೆ. 10 ವಷರ್Àದಿಂದ ಮೇಲ್ಪಟ್ಟ ಹಾಗೂ 55 ವರ್ಷದ ವರೆಗಿನ ಯೋಗಪಟುಗಳಿಗೆ ಸ್ಪರ್ಧೆಯಲ್ಲಿ ಭಾಗವಹಿಸುವ ಅವಕಾಶ ಇರುವುದು. ಜಿಲ್ಲಾ ಮಟ್ಟದ ಸ್ಪರ್ಧೆಯಲ್ಲಿ ಮೊದಲ 3 ಸ್ಥಾನಗಳಿಸುವ ಸ್ಪರ್ಧಾಳುಗಳಿಗೆ ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸುವ ಅವಕಾಶ ಕಲ್ಪಿಸಲಾಗುವುದು. ಟ್ರೆಡಿಶನಲ್ ಯೋಗಾಸನ, ಆರ್ಟಿಸ್ಟಿಕ್ ಸಿಂಗಲ್, ಆರ್ಟಿಸ್ಟಿಕ್ ಪೇರ್, ಆರ್ಟಿಸ್ಟಿಕ್ ಗ್ರೂಪ್ ಮತ್ತು ರಿದಮಿಕ್ ಪೇರ್ ಎಂಬ ಐದು ವಿಭಾಗಗಳಲ್ಲಿ ಸ್ಪರ್ಧೆ ನಡೆಯಲಿದೆ. ಆಸಕ್ತರು ವಿವರಗಳಿಗಾಗಿ ‘ಯೋಗಾಸನ ಭಾರತ’ ದ ವೆಬ್ ಸೈಟ್https://yogasanasport.in/ ನ್ನು ಸಂದರ್ಶಿಸಬಹುದು. ಹೆಚ್ಚಿನ ಮಾಹಿತಿಗಾಗಿ ಯೋಗಾಸನ ಕಾಸರಗೋಡಿನ ಜಿಲ್ಲಾ ಪದಾಧಿಕಾರಿಗಳನ್ನು 9995541436 ಎಂಬ ದೂರವಾಣಿ ಸಂಖ್ಯೆಯ ಮೂಲಕ ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.