ಮುಂಬೈ: ಅಮೆರಿಕಾದಲ್ಲಿ ಆರ್ಥಿಕ ಹಿಂಜರಿತ ಹಾಗೂ ಮಧ್ಯಪ್ರಾಚ್ಯದಲ್ಲಿ ಯುದ್ಧ ಭೀತಿಯ ನಡುವೆ ಇಂದು ದೇಶೀಯ ಷೇರು ಮಾರುಕಟ್ಟೆ ಕುಸಿತ ಕಂಡಿದ್ದು ಸತತ ಎರಡನೇ ದಿನ ಸೆನ್ಸೆಕ್ಸ್ ಮತ್ತು ನಿಫ್ಟಿ ಇಳಿಕೆ ಕಂಡಿವೆ.
ಮುಂಬೈ: ಅಮೆರಿಕಾದಲ್ಲಿ ಆರ್ಥಿಕ ಹಿಂಜರಿತ ಹಾಗೂ ಮಧ್ಯಪ್ರಾಚ್ಯದಲ್ಲಿ ಯುದ್ಧ ಭೀತಿಯ ನಡುವೆ ಇಂದು ದೇಶೀಯ ಷೇರು ಮಾರುಕಟ್ಟೆ ಕುಸಿತ ಕಂಡಿದ್ದು ಸತತ ಎರಡನೇ ದಿನ ಸೆನ್ಸೆಕ್ಸ್ ಮತ್ತು ನಿಫ್ಟಿ ಇಳಿಕೆ ಕಂಡಿವೆ.
ಅಮೆರಿಕಾದಲ್ಲಿ ಉದ್ಯೋಗ ವರದಿಯ ನಿರೀಕ್ಷೆ ಹಾಗೂ ನಿರುದ್ಯೋಗ ಪ್ರಮಾಣ ಏರಿಕೆ ಹಾಗೂ ಆರ್ಥಿಕ ಹಿಂಜರಿತ ಆತಂಕದ ನಡುವೆಯೇ ಭಾರತದ ಷೇರು ಮಾರುಕಟ್ಟೆ ಇಳಿಕೆ ಕಂಡಿದೆ.
ಸೋಮವಾರ ಮುಂಜಾನೆಯ ಟ್ರೇಡಿಂಗ್‌ನಲ್ಲಿ ಸೆನ್ಸೆಕ್ಸ್ ಮತ್ತು ನಿಫ್ಟಿಯಲ್ಲಿ ಇಳಿಕೆಯು ಹೂಡಿಕೆದಾರರ ವ್ಯಾಪಕ ಷೇರು ಮಾರಾಟದಿಂದ ಉಂಟಾಗಿದೆ.
ಬಿಎಸ್‌ಇ ಸೆನ್ಸೆಕ್ಸ್ 2.95 ಶೇಕಡಾ ಅಥವಾ 2,393.76 ಅಂಕಗಳಷ್ಟು ಕುಸಿತ ಕಂಡರೆ ನಿಫ್ಟಿ ಶೇಕಡಾ 2ರಷ್ಟು ಅಥವಾ 414.85 ಅಂಕಗಳಷ್ಟು ಕುಸಿತ ಕಂಡಿದೆ.
ಕಳೆದ ಎರಡು ಟ್ರೇಡಿಂಗ್ ಸೆಷನ್‌ಗಳಲ್ಲಿ ಸೆನ್ಸೆಕ್ಸ್ ಒಟ್ಟು ಶೇಕಡಾ 4ರಷ್ಟು ಕುಸಿತ ಕಂಡಿದ್ದರೆ ನಿಫ್ಟಿ ಶೇ 3.27ರಷ್ಟು ಕುಸಿತ ಕಂಡಿದೆ.