HEALTH TIPS

ಮಣಿಯೂರು: ಒಕ್ಕೂಟ ಸದಸ್ಯರಿಂದ ಶುಚೀಕರಣ

            ಮುಳ್ಳೇರಿಯ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಅಡೂರು ವಲಯದ ಮಣಿಯೂರು ಒಕ್ಕೂಟದ ವತಿಯಿಂದ ಮಣಿಯೂರು ಶ್ರೀ ಗಣೇಶ ಭಜನಾ ಮಂದಿರದ ಪರಿಸರ ಶುಚಿತ್ವ ಕಾರ್ಯಕ್ರಮ ನಡೆಯಿತು. 

                ಕೇರಳ ಜಾನಪದ ಅಕಾಡೆಮಿ ಪ್ರಶಸ್ತಿ ವಿಜೇತ ಎಂ.ನಾರಾಯಣ ಮಾಟೆ ಅವರು ಉದ್ಘಾಟಿಸಿ ಈ ರೀತಿಯಾದ ಕ್ಷೇತ್ರ ಪರಿಸರ ಶುಚೀಕರಣದಿಂದ ಶ್ರೀ ದೇವರ ಕೃಪೆಗೆ ಪಾತ್ರರಾಗುವುದರೊಂದಿಗೆ ನಮ್ಮ ಮನಸ್ಸಿಗೂ ಶ್ರೀ ದೇವರ ಸೇವೆ ಮಾಡಿದ ಆತ್ಮ ಸಂತೃಪ್ತಿ ದೊರೆಯುವುದಕ್ಕೂ ಅವಕಾಶವಾಗುತ್ತದೆ. ಈ ರೀತಿಯ ದೇವರ ಸೇವೆ ಮಾಡುವ ಅವಕಾಶ ಎಲ್ಲಿ ದೊರೆತರೂ ಅದನ್ನು ನಾವು ಅಲ್ಲಗಳೆಯದೆ ಶುಚೀಕರಣವೋ ಇನ್ನಿತರ ಸೇವಾ ಕಾರ್ಯಗಳನ್ನು ಮಾಡುತ್ತಾ ಬರೋಣ. ಅದರಿಂದಾಗಿ ನೆಮ್ಮದಿಯನ್ನು ಪಡೆಯೋಣ ಎಂದು ಶುಭಹಾರೈಸಿದರು. 

              ಸೇವಾ ಪ್ರತಿನಿಧಿ ರೇಣುಕಾ ಸ್ವಾಗತಿಸಿ, ವಂದಿಸಿದರು. ಆ ನಂತರ ಒಕ್ಕೂಟದ ಸದಸ್ಯರು ಶುಚೀಕರಣ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡರು. 



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries