HEALTH TIPS

ಛತ್ತೀಸಗಢ: ಮಹಾದೇವ್‌ ಬೆಟ್ಟಿಂಗ್‌ ಆಯಪ್‌ ಹಗರಣದ ತನಿಖೆ ಸಿಬಿಐಗೆ

           ರಾಯಪುರ: ದೇಶದಾದ್ಯಂತ ಸಂಚಲನ ಮೂಡಿಸಿದ್ದ ಕುಖ್ಯಾತ 'ಮಹಾದೇವ್‌ ಬೆಟ್ಟಿಂಗ್‌ ಆಯಪ್‌' ಪ್ರಕರಣದ ತನಿಖೆಯನ್ನು ಛತ್ತೀಸಗಢ ಸರ್ಕಾರ ಸಿಬಿಐಗೆ ವಹಿಸಿದೆ.

           ಈ ಸಂಬಂಧ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಛತ್ತೀಸಗಢ ಉಪಮುಖ್ಯಮಂತ್ರಿ ವಿಜಯ್‌ ಶರ್ಮಾ, 'ಮಹಾದೇವ್‌ ಬೆಟ್ಟಿಂಗ್‌ ಆಯಪ್‌ನಲ್ಲಿ ನಡೆದಿದೆ ಎನ್ನಲಾದ ಹಗರಣ ಸಂಬಂಧ ಛತ್ತೀಸಗಢದ ವಿವಿಧ ಠಾಣೆಗಳಲ್ಲಿ 70 ಪ್ರಕರಣ ಹಾಗೂ ಆರ್ಥಿಕ ಅಪರಾಧಗಳ ವಿಭಾಗದಲ್ಲಿ ಒಂದು ಪ್ರಕರಣ ದಾಖಲಾಗಿದೆ.

              ಈ ಎಲ್ಲ ಪ್ರಕರಣಗಳನ್ನು ಸಿಬಿಐಗೆ ವರ್ಗಾಯಿಸಲು ಸರ್ಕಾರ ನಿರ್ಧರಿಸಿದ್ದು, ಕಳೆದ ವಾರ ಅಧಿಸೂಚನೆಯನ್ನು ಹೊರಡಿಸಿದೆ' ಎಂದು ತಿಳಿಸಿದ್ದಾರೆ.

              ಈ ಹಗರಣವು ಛತ್ತೀಸಗಢಕ್ಕೆ ಸೀಮಿತವಾಗಿರದೆ, ಬಹುರಾಜ್ಯಗಳೊಂದಿಗೆ ಸಂಪರ್ಕ ಹೊಂದಿದೆ. ಅಲ್ಲದೆ ಹಗರಣದ ಕೆಲ ರೂವಾರಿಗಳು ವಿದೇಶದಲ್ಲಿ ನೆಲಸಿದ್ದಾರೆ. ಸಿಬಿಐ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ತಪ್ಪಿತಸ್ಥರ ಮೇಲೆ ಕಠಿಣ ಕ್ರಮ ಕೈಗೊಳ್ಳುವ ಭರವಸೆ ಇದೆ ಎಂದಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries