ಮಂಜೇಶ್ವರ :ಮನೆಯಿಂದ ಗೋಟಡಕೆ ಕಳವುಗೈದ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರನ್ನು ಮಂಜೇಶ್ವರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬಾಯಾರು ಪ್ರದೇಶದ ನಿವಾಸಿಗಳಾದ ಮಹಮ್ಮದ್ ಸಾಲಿ ಹಾಗೂ ಮನಾಫ್ ಬಂಧಿತರು.
ಬಾಯಾರು ನಿವಾಸಿ, ಅಡಕೆ ವ್ಯಾಪಾರಿ ಅಬ್ದುಲ್ ಖಾದರ್ ಅವರ ಮನೆಯಿಂದ ಅಡಕೆ ಕಳವು ನಡೆಸಿದ್ದು, ಮನೆ ಸಿಟೌಟ್‍ನಲ್ಲಿರಿಸಿದ್ದ ಒಂದು ಕ್ವಿಂಟಾಲ್‍ಗೂ ಹೆಚ್ಚು ಸುಲಿದ ಅಡಕೆಯನ್ನು ಕಳವುಗೈಯಲಾಗಿತ್ತು. ಹಮ್ಮದ್ ಸಾಲಿ ಹಾಗೂ ಮನಾಫ್ ತಮ್ಮ ಸಕೂಟರಲ್ಲಿ ಗೋಟಡಕೆ ಸಾಗಿಸುತ್ತಿರುವ ಬಗ್ಗೆ ಸಂಶಯಗೊಂಡ ಸ್ಥಳೀಯರು ಇವರನ್ನು ತಡೆದು ನಿಲ್ಲಿಸಿ ವಿಚಾರಿಸಿದಾಗ ಅಬ್ದುಲ್ ಖಾದರ್ ಅವರ ಮನೆಯಿಂದ ಅಡಕೆ ಕಳವು ನಡೆಸಿರುವ ಬಗ್ಗೆ ಮಾಹಿತಿ ಲಭಿಸಿತ್ತು. ನಂತರ ಊರವರು ಸಏರಿ ಇವರನ್ನು ಸಎರೆಹಿಡಿದು ಪೊಲೀಸರಿಗೊಪ್ಪಿಸಿದ್ದರು. ಬಂಧಿತರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಇವರಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.