ಕೊಚ್ಚಿ: ತೆಲಂಗಾಣದಲ್ಲಿ ಮಾವೋವಾದಿ ನಾಯಕನ ಬಂಧನಕ್ಕೆ ಸಂಬಂಧಿಸಿದಂತೆ ಕೊಚ್ಚಿಯಲ್ಲಿ ಎನ್‍ಐಎ ದಾಳಿ ನಡೆಸಿದೆ. ಮಾವೋವಾದಿ ಮುಖಂಡ ಮುರಳಿ ಕನ್ನಂಬಿಳ್ಳಿಯ ಕಾಕ್ಕನಾಡು ತೆವಕಲ್‍ನಲ್ಲಿರುವ ಮನೆಯಲ್ಲಿ ಶೋಧ ನಡೆದಿದೆ. ಮಾವೋವಾದಿ ನಾಯಕ ಸಂಜಯ್ ದೀಪಕ್ ರಾವ್ ಬಂಧನಕ್ಕೆ ಸಂಬಂಧಿಸಿದಂತೆ ತನಿಖೆ ನಡೆದಿದೆ.
ತೆಲಂಗಾಣದಿಂದ ಎನ್‍ಐಎಯ ಎಂಟು ಸದಸ್ಯರ ತಂಡ ತನಿಖೆಗಾಗಿ ಕೊಚ್ಚಿ ತಲುಪಿತ್ತು. ವಾರಂಟ್‍ನೊಂದಿಗೆ ತಂಡ ಆಗಮಿಸಿತ್ತು. ಮುರಳಿ ಬಾಗಿಲು ತೆರೆಯಲು ಕೇಳಿದರು, ಆದರೆ ಅವರು ತಮ್ಮ ವಕೀಲರ ಬಳಿಗೆ ಹೋಗಬೇಕೆಂದು ಒತ್ತಾಯಿಸಿದರು. ನಂತರ ಅಧಿಕಾರಿಗಳು ಬಾಗಿಲು ಒಡೆದು ಒಳ ಪ್ರವೇಶಿಸಿದರು. ಮುರಳಿ ತನ್ನ ಮಗನೊಂದಿಗೆ ಈ ಮನೆಯಲ್ಲಿ ವಾಸವಾಗಿದ್ದ. ದಾಳಿ ಬಳಿಕ ಮುರಳಿ ಅವರನ್ನು ಎನ್‍ಐಎ ಬಂಧಿಸಿತು. ವಿಚಾರಣೆ ಬಳಿಕ ಬಂಧನ ಸೇರಿದಂತೆ ಕ್ರಮಗಳಿಗೆ ಎನ್.ಐ.ಎ. ಕ್ರಮ ಕೈಗೊಳ್ಳುವುದು.
ನಾಲ್ಕು ವರ್ಷಗಳ ಕಾಲ ಪುಣೆ ಯರವಾಡ ಜೈಲಿನಲ್ಲಿದ್ದ ಮುರಳಿ ಕನ್ನಂಬಿಳ್ಳಿ 2019ರಲ್ಲಿ ಜೈಲಿನಿಂದ ಬಿಡುಗಡೆಯಾಗಿದ್ದರು. ಕೊಚ್ಚಿಯ ಇರುಂಬನಂ ಮೂಲದ ಮುರಳಿ 1976ರಲ್ಲಿ ನಡೆದ ಕಾಯಣ್ಣ ಪೆÇಲೀಸ್ ಠಾಣೆ ದಾಳಿ ಪ್ರಕರಣದ ಆರೋಪಿ.
2023ರಲ್ಲಿ ಮಾವೋವಾದಿ ನಾಯಕ ಸಂಜಯ್ ದೀಪಕ್ ರಾವ್ ಅವರನ್ನು ತೆಲಂಗಾಣದಲ್ಲಿ ಬಂಧಿಸಲಾಗಿತ್ತು. ಮಹಾರಾಷ್ಟ್ರ, ಕೇರಳ, ತಮಿಳುನಾಡು ಮತ್ತು ಕರ್ನಾಟಕದ ಅಧಿಕಾರಿಗಳ ಕೆಂಗಣ್ಣಿಗೆ ಗುರಿಯಾಗಿದ್ದ.