ಕುಂಬಳೆ: ಕುಂಬಳೆ ಸಂತ ಮೋನಿಕಾ ಸಿಬಿಎಸ್‌ಇ ಆಂಗ್ಲ ಮಾಧ್ಯಮ ಶಾಲೆಗೆ ಕ್ಯಾಥೋಲಿಕ್ ಬೋರ್ಡ್ ಆಫ್ ಎಜುಕೇಶನ್ ಮಂಗಳೂರು ಇದರ ಕಾರ್ಯದರ್ಶಿ ವಂದನೀಯ ಡಾ. ಪ್ರವೀಣ್ ಲಿಯೋ ಲಸ್ರಾದೊ ಭೇಟಿ ನೀಡಿದರು. ಈ ಸಂದರ್ಭದಲ್ಲಿ ಶಾಲೆಯಲ್ಲಿ ಆಯೋಜಿಸಲಾದ ಕಾರ್ಯಕ್ರಮದಲ್ಲಿ ವಂದನೀಯ ಡಾ. ಪ್ರವೀಣ್ ಲಿಯೋ ಲಾಸ್ರದೊ ಅವರನ್ನು ಸಮ್ಮಾನಿಸಲಾಯಿತು. ಅವರು ಶಾಲೆಯ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿ, ವಿದ್ಯಾರ್ಥಿಗಳು ಜೀವನದಲ್ಲಿ ಪಾಲಿಸಬೇಕಾದ ಶಿಸ್ತಿನ ಬಗ್ಗೆ ತಿಳಿಸಿದರು.
ಕಾರ್ಯಕ್ರಮದ ವೇದಿಕೆಯಲ್ಲಿ ಶಾಲೆಯ ಪ್ರಬಂಧಕ ಫಾದರ್ ಮೆಲ್ವಿನ್ ಡಿ'ಸೋಜ, ಉಪಪ್ರಾಂಶುಪಾಲ ಫಾದರ್ ಸೂರಜ್ ಲೋಬೋ, ಶಾಲಾ ವಿದ್ಯಾರ್ಥಿ ನಾಯಕ ಶಾಶ್ವತ ಕುಮಾರ್ ಹಾಗೂ ಉಪ ನಾಯಕ ಶಮಕ್, ಉಪ ನಾಯಕಿ ಅನುಷಾ ಭಟ್ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು 7 ನೇ ತರಗತಿಯ ನುಝ ಫಾತಿಮ ನಿರೂಪಿಸಿ, 10 ನೇ ತರಗತಿಯ ಶಾಶ್ವತ ಕುಮಾರ್ ವಂದಿಸಿದರು.