ಕಾಸರಗೋಡು: ಕರ್ಕಾಟಕ ಅಮವಾಸ್ಯೆ ಹಿನ್ನೆಲೆಯಲ್ಲಿ ದಕ್ಷಿಣಕಾಶಿ ಎಂದು ಕರೆಯಲ್ಪಡುವ ಐತಿಹಾಸಿಕ ಬೇಕಲ ಸನಿಹದ ತ್ರಿಕ್ಕನ್ನಾಡು ಶ್ರೀ ತ್ರಯಂಬಕೇಶ್ವರ ದೇವಸ್ಥಾನದಲ್ಲಿ ಪಿತೃಬಲಿತರ್ಪಣ ಶನಿವಾರ ಜರುಗಿತು. ಕಾಸರಗೋಡು, ಕಣ್ಣೂರು ಅಲ್ಲದೆ ಇತರ ಜಿಲ್ಲೆಗಳಿಂದಲೂ ಪಿತೃಬಲಿ ತರ್ಪಣಕ್ಕಾಗಿ ತ್ರಿಕ್ಕನ್ನಾಡಿಗೆ ಆಗಮಿಸಿದ್ದರು.
ಬೆಳಗ್ಗೆ ಉಷಾಪೂಜೆಯ ನಂತರ 5.30ರಿಂದ ಬಲಿತಾರ್ಪಣ ಆರಂಭಗೊAಡಿತ್ತು. ದೇವಸ್ಥಾನದ ಮುಖ್ಯ ಅರ್ಚಕರಾದ ಬ್ರಹ್ಮಶ್ರೀ ನವೀನಚಂದ್ರ ಕಾಯರ್ತಾಯ ಹಾಗೂ ಅರ್ಚಕ ರಾಜೇಂದ್ರ ಅರಳಿತ್ತಾಯ ಅವರ ನೇತೃತ್ವದಲ್ಲಿ ದೇವಸ್ಥಾನದ ಎದುರು ಭಾಗದ ಸಮುದ್ರ ದಡದಲ್ಲಿ ವಿಶೇಷವಾಗಿ ನಿರ್ಮಿಸಲಾಗಿದ್ದ ವಿಶಾಲ ಚಪ್ಪರದಲ್ಲಿ ಪಿತೃಬಲಿತರ್ಪಣ ನಡೆಯಿತು. ಏಕಕಾಲದಲ್ಲಿ ಇಪ್ಪತ್ತಕ್ಕೂ ಹೆಚ್ಚುಮಂದಿ ಅರ್ಚಕರು ಬಲಿತರ್ಪಣ ನಡೆಸಿಕೊಟ್ಟ ಹಿನ್ನೆಲೆಯಲ್ಲಿ ಭಕ್ತಾದಿಗಳ ನೂಕುನುಗ್ಗಲು ಕಡಿಮೆಯಾಗಿತ್ತು. ದೇವಸ್ಥಾನಕ್ಕೆ ಆಗಮಿಸಿದ್ದ ಎಲ್ಲ ಭಕ್ತಾದಿಗಳಿಗೂ ಕುಡಿಯುವ ನೀರು, ಲಘು ಉಪಹಾರ ವಿತರಿಸಲಾಯಿತು.
ಸಮುದ್ರ ಪ್ರಕ್ಷÄಬ್ಧಗೊಂಡಿದ್ದ ಹಿನ್ನೆಲೆಯಲ್ಲಿ ರಕ್ಷಣಾಕಾರ್ಯ ಚುರುಕುಗೊಳಿಸಲಾಗಿತ್ತು. ಅಪಾರ ಸಂಕ್ಯೆಯಲ್ಲಿ ಆಗಮಿಸಿದ್ದ ಭಕ್ತಾದಿಗಳನ್ನು ನಿಯಂತ್ರಿಸಲು ಪೊಲೀಸ್, ಅಗ್ನಿಶಾಮಕ ದಳ, ಕರಾವಳಿ ಪೊಲೀಸ್ ಹಾಗೂ ಸಂಘ ಸಂಸ್ಥೆಗಳ ಸ್ವಯಂಸೇವಕರು ಸಹಕರಿಸಿದ್ದರು. ಬಲಿತರ್ಪಣಕ್ಕೆ ಆಗಮಿಸಿದ ಭಕ್ತಾದಿಗಳಿಗೆ ಪೊಲೀಸ್, ಕೋಸ್ಟ್ ಗಾರ್ಡ್, ಆರೋಗ್ಯ ಕಾರ್ಯಕರ್ತರ ಸೇವೆ ಒದಗಿಸಲಾಗಿತ್ತು.