ಬದಿಯಡ್ಕ: ಕನ್ನೆಪ್ಪಾಡಿ ಆಶ್ರಯ ಆಶ್ರಮದಲ್ಲಿ ಶಾರದಾ ಶಿಶುಮಂದಿರ ಹಾಗೂ ಶ್ರೀ ಉದನೇಶ್ವರ ಬಾಲಗೋಕುಲ ಇದರ ವತಿಯಿಂದ ಶ್ರೀಕೃಷ್ಣ ಜನ್ಮಾಷ್ಟಮಿ ಉತ್ಸವವನ್ನು ಆಚರಿಸಲಾಯಿತು. ಬ್ಲಾಕ್ ಪಂಚಾಯಿತಿ ಸದಸ್ಯೆ ಅಶ್ವಿನಿ ಭಟ್ ನೀರ್ಚಾಲು ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಶಿಶುಮಂದಿರದ ಅಧ್ಯಕ್ಷೆ ಭುವನೇಶ್ವರಿ ಹಾಗೂ ಅಧ್ಯಾಪಿಕೆ ಸವಿತಾ ಉಪಸ್ಥಿತರಿದ್ದರು. ಶಿಶುಮಂದಿರದ ಮಕ್ಕಳಿಂದ ಶ್ರೀಕೃಷ್ಣ ವೇಷ ಪ್ರದರ್ಶನ, ವಿವಿಧ ಶಾರೀರಿಕ ಹಾಗೂ ಬೌದ್ಧಿಕ ಸ್ಪರ್ಧೆಗಳನ್ನು ಏರ್ಪಡಿಸಲಾಯಿತು. ಶಿವಶಂಕರ್ ಭಟ್ ಮತ್ತು ಗಣೇಶ್ ಪ್ರಸಾದ್ ಚುಳ್ಳಿಕಾನ ಬಹುಮಾನ ವಿತರಿಸಿದರು. ಪ್ರಾಸ್ತಾವಿಕ ನುಡಿಗಳೊಂದಿಗೆ ರಮೇಶ ಕಳೇರಿ ಸ್ವಾಗತಿಸಿದರು. ಅಶ್ವಿತಾ ನಿರೂಪಿಸಿ, ಭಾರತಿ ವಂದಿಸಿದರು.