ಕಾಸರಗೋಡು: ಗಡಿನಾಡು ಕಾಸರಗೋಡಿನ ಬಹುಮುಖ ಪ್ರತಿಭೆ, ಧಾರ್ಮಿಕ, ಸಾಂಸ್ಕøತಿಕ, ಶೈಕ್ಷಣಿಕ ಕ್ಷೇತ್ರದ ಸಾಧಕ ದಿ.ನೀರಾಳ ಕೆ.ಎಸ್.ನಾರಾಯಣ ಹೊಳ್ಳ ಮತ್ತು ಪದ್ಮಾವತಿ ದಂಪತಿಗಳ ಪುತ್ರ ಕೆ.ಎನ್.ವೆಂಕಟ್ರಮಣ ಹೊಳ್ಳ ಅವರಿಗೆ ಗೌರವ ಡಾಕ್ಟರೇಟ್ ಪ್ರಶಸ್ತಿಯನ್ನು ಚೆನ್ನೈ ಗ್ಲೋಬಲ್ ಹ್ಯೂಮನ್ ಫೀಸ್ ಯುನಿವರ್ಸಿಟಿ ವರ್ಚುವಲ್ ಇನ್‍ಸ್ಟಿಟ್ಯೂಟ್(ಆರ್) ದೆಲ್ವೆರೆ ಸ್ಟೇಟ್, ಯು.ಎಸ್.ಎ. ಘೋಷಿಸಿದೆ. ಪ್ರತಿಷ್ಠಿತ ಪ್ರಶಸ್ತಿಪ್ರದಾನ ಸಮಾರಂಭ ಸೆಪ್ಟೆಂಬರ್ 1 ರಂದು ಚೆನ್ನೈ ಮೈಲಾಪುರದ ಭಾರತೀಯ ವಿದ್ಯಾಭವನದಲ್ಲಿ ಜರಗಲಿದೆ.
ಆಡು ಮುಟ್ಟದ ಸೊಪ್ಪಿಲ್ಲ ಎನ್ನುವ ಮಾತಿಗೆ ಅನ್ವರ್ಥವಾಗುವ ಹಾಗೆ ಕೆ.ಎನ್.ವೆಂಕಟ್ರಮಣ ಹೊಳ್ಳರು ಕೈಯಾಡಿಸದ ಕ್ಷೇತ್ರವಿಲ್ಲ. ಕರಾವಳಿಯ ಸರ್ವಾಂಗ ಸುಂದರ ಕಲೆ ಯಕ್ಷಗಾನದ ಅಭ್ಯುದಯಕ್ಕಾಗಿ 1982 ರಲ್ಲಿ ಸಹೋದರರ ಜೊತೆಯಾಗಿಸಿ ಕಾಸರಗೋಡಿನಲ್ಲಿ ಶ್ರೀ ವೆಂಕಟ್ರಮಣಸ್ವಾಮಿ ಕೃಪಾಶ್ರಿತ ಯಕ್ಷಗಾನ ಕಲಾಸಂಘವನ್ನು ಸ್ಥಾಪಿಸಿ ನಾಲ್ಕು ದಶಕಗಳ ಕಾಲಾವಧಿಯಲ್ಲಿ ಅವರು ಅನೇಕ ಪ್ರತಿಭೆಗಳನ್ನು ಬೆಳಕಿಗೆ ತಂದಿದ್ದಾರೆ. ವೇಷಧಾರಿಯಾಗಿ, ಹಿಮ್ಮೇಳ ಕಲಾವಿದರಾಗಿ, ವೇಷಭೂಷಣ ವಿನ್ಯಾಸಕಾರರಾಗಿ ಜನಪ್ರಿಯರಾಗಿದ್ದಾರೆ. ಕ್ರೀಡಾ ರಂಗದಲ್ಲೂ ಸಾಧನೆ ಮಾಡಿ ಗುರುತಿಸಿಕೊಂಡಿದ್ದಾರೆ. ಸುಮಾರು ನೂರಕ್ಕೂ ಹೆಚ್ಚು ಧಾರ್ಮಿಕ ಕ್ಷೇತ್ರಗಳ ಜೀರ್ಣೋದ್ಧಾರ, ಪ್ರತಿಷ್ಠಾ ಬ್ರಹ್ಮಕಲಶೋತ್ಸವಗಳಲ್ಲಿ ನಿಸ್ವಾರ್ಥ ಸೇವೆ ಮನೋಭಾವದಿಂದ ದುಡಿದಿರುವ, ಈಗಲೂ ದುಡಿಮೆಯೇ ದೇವರೆಂದು ನಂಬಿರುವ ವೆಂಕಟ್ರಮಣ ಹೊಳ್ಳರು ಅರ್ಧ ಶತಕದಷ್ಟು ಭಜನಾ ಸಂಕೀರ್ತನೆ, ಕಮ್ಮಟ, ಸತ್ಸಂಗ ನಡೆಸಿದ್ದಾರೆ.
ಕಾಸರಗೋಡು ನಗರ ಮಧ್ಯದ ಪೇಟೆ ಶ್ರೀ ವೆಂಕಟರಮಣ ದೇವಾಲಯವನ್ನು ಕೇಂದ್ರೀಕರಿಸಿ ಎಡನೀರು ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ, ಶ್ರೀ ಕ್ಷೇತ್ರ ತಂತ್ರಿವರ್ಯ ಬ್ರಹ್ಮಶ್ರೀ ಉಳಿಯತ್ತಾಯ ವಿಷ್ಣು ಅಸ್ರ ಅವರ ಅನುಗ್ರಹ ಆಶೀರ್ವಾದದಿಂದಲೂ ಕಾಸರಗೋಡು ನಗರದಲ್ಲಿ ಎಲ್ಲಾ ಕ್ಷೇತ್ರಗಳಲ್ಲಿ ಮುಂಚೂಣಿಯಲ್ಲಿರುವ ಸ್ವತ: ಹೊಳ್ಳರು ಸ್ಥಾಪಿಸಿದ ಸಂಸ್ಥೆ ಎಸ್.ವಿ.ಟಿ. ಫ್ರೆಂಡ್ಸ್ ಸರ್ಕಲ್ ಇದರ ಎಲ್ಲಾ ಕಾರ್ಯಕರ್ತರ ಸಹಕಾರ ಇವರ ಸಹೋದರ ಕೆ.ಎನ್.ರಾಮಕೃಷ್ಣ ಹೊಳ್ಳ ಇವರು ಧಾರ್ಮಿಕ, ಸಾಂಸ್ಕøತಿಕ ಚಟುವಟಿಕೆಗಳಿಗೆ ಹೆಗಲಿಗೆ ಹೆಗಲು ಕೊಡುತ್ತಾ ನಿತ್ಯನಿರಂತರ ಕಾರ್ಯ ನಡೆಸಲು ಸಹಕರಿಸುತ್ತಾ ಬಂದಿದ್ದಾರೆ. ಮದ್ಯ ವರ್ಜನ ಶಿಬಿರ, ರೋಗ ನಿರ್ಣಯ ಶಿಬಿರ, ವೈದ್ಯಕೀಯ ಶಿಬಿರಗಳನ್ನು ನಡೆಸುತ್ತಾ ಸ್ವಸ್ಥ ಸಮಾಜ ನಿರ್ಮಾಣಕ್ಕೆ ಪ್ರಯತ್ನಿಸುತ್ತಿದ್ದಾರೆ. ಅಶಕ್ತರ ಆಶಾಕಿರಣವಾಗಿರುವ ವೆಂಕಟ್ರಮಣ ಹೊಳ್ಳರು ಕೊಡುಗೈದಾನಿ.
ಕೋವಿಡ್ ಮಹಾಮಾರಿ ಅವಧಿಯಲ್ಲಿ ಸಂತ್ರಸ್ತರ ಮನೆಗಳಗೆ ನಿತ್ಯೋಪಯೋಗಿ ವಸ್ತು, ಔಷಧಗಳನ್ನು ತಲುಪಿಸಿದ್ದಾರೆ. ಈ ಪುಣ್ಯಕಾರ್ಯಕ್ಕೆ ಅವರಿಗೆ ನೆರವಾದದ್ದು ಜನಮೈತ್ರಿ ಪೆÇೀಲಿಸರು. ಜನಮೈತ್ರಿ ಪೆÇೀಲೀಸ್ ಕಾಸರಗೋಡು ಟ್ರೋಮಾ ಕೇರ್ ಪೆÇೀಲೀಸ್ ವೋಲಿಂಟಿಯರ್ ಅಧ್ಯಕ್ಷರು. ವೆಂಕಟ್ರಮಣ ಹೊಳ್ಳರು ಟ್ರೋಮಾ ಕೇರ್‍ನ ಉಪಾಧ್ಯಕ್ಷರು ಅಲ್ಲದೆ ಬಿ.ಇ.ಎಂ. ಹೈಸ್ಕೂಲಿನ ಸಾರ್ವಜನಿಕ ಶಿಕ್ಷಣ ಸಂರಕ್ಷಣ ಯಜÐದ ಅಧ್ಯಕ್ಷರು, ಬಾಲಭವನ ಆಂಗ್ಲ ಮಾಧ್ಯಮ ಶಾಲೆಯ ಅಕಾಡಿಮಿಕಲ್ ಸಲೆಹೆಗಾರರಾಗಿದ್ದಾರೆ. ಅವರ ಸಮಗ್ರ ಸಾಧನೆಯನ್ನು ಗುರುತಿಸಿ ನೂರಾರು ಸಂಘಗಳು ಪ್ರಶಸ್ತಿ, ಪುರಸ್ಕಾರ, ಸಮ್ಮಾನ ನೀಡಿ ಗೌರವಿಸಿದೆ.