ಕಾಸರಗೋಡು: ಪರಿಶಿಷ್ಟ ವರ್ಗ ಅಭಿವೃದ್ಧಿ ಕಾರ್ಯಾಲಯ ವಿನ್ಯಾಸಗೊಳಿಸಿ ಕಾರ್ಯಗತಗೊಳಿಸುವ ಯೋಜನೆ ಅಕ್ರೆಡಿಟೆಡ್ ಎಂಜಿನಿಯರ್, ಓವರ್ ಸಿಯರ್ ನೇಮಕಾತಿಗೆ ಪರಪ್ಪ ಟ್ರೈಬಲ್ ಡೆವಲಪ್ ಮೆಂಟ್ ಆಫೀಸ್ ಅಧೀನದಲ್ಲಿ ಬರುವ ಅರ್ಹರಾದ ಪರಿಶಿಷ್ಟ ವರ್ಗ ವಿಭಾಗಕ್ಕೆ ಸೇರಿದ ಯುವತಿ ಯುವಕರಿಂದ ಅರ್ಜಿ ಆಹ್ವಾನಿಸಲಾಗಿದೆ.
ಪರಿಶಿಷ್ಟ ವರ್ಗ ಅಭಿವೃದ್ಧಿ ಕಾರ್ಯಾಲಯ ಹಾಗೂ ಸ್ಥಳೀಯಾಡಳಿತ ಸಂಸ್ಥೆಗಳ ಮತ್ತು ವಿವಿಧ ಪ್ರಾದೇಶಿಕ ಮೂಲಭೂತ ಸೌಕರ್ಯ ಅಭಿವೃದ್ಧಿ ಯೋಜನೆಗಳ ಅನುಷ್ಠಾನದಲ್ಲಿ ಭಾಗವಹಿಸುವ ಮೂಲಕ ಕೆಲಸದ ಅನುಭವ ಒದಗಿಸುವುದು ಈ ನೇಮಕಾತಿಯ ಉದ್ದೇಶ. ಸಿವಿಲ್ ಇಂಜಿನಿಯರಿಂಗ್‍ನಲ್ಲಿ ಬಿ. ಟೆಕ್, ಡಿಪೆÇ್ಲಮಾ, ಐ ಟಿ ಐ ಅರ್ಹತೆಯುಳ್ಳವರಿಗೆ ಅರ್ಜಿ ಸಲ್ಲಿಸಬಹುದು.
ಪರಿಶಿಷ್ಟ ವರ್ಗ ಅಭಿವೃದ್ಧಿ ಕಾರ್ಯಾಲಯದ ಅಧೀನದಲ್ಲಿ ಬರುವ ಸಂಸ್ಥೆಗಳಲ್ಲಿ ಇ-ಕಛೇರಿಗೆ ಸಂಬಂಧಿಸಿದವುಗಳನ್ನು ಜ್ಯಾರಿಗೊಳಿಸುವುದು, ಐ ಟಿ ಸೆಲ್ ಮತ್ತು ಇ-ಗ್ರಾಂಟ್ಸ್ ಮೂಲಕ ಲಭ್ಯವಿರುವ ಸೇವೆಗಳ ಹೆಚ್ಚು ಪರಿಣಾಮಕಾರಿ ಅನುಷ್ಠಾನಕ್ಕಾಗಿ, ಕಂಪ್ಯೂಟರ್ ಸಾಕ್ಷರತಾ ಸಿಬ್ಬಂದಿ ಸೇವೆಯನ್ನು ಒದಗಿಸುವುದಕ್ಕಾಗಿ ಅಕ್ರೆಡಿಟೆಡ್ ಎಂಜಿನಿಯರ್, ಓವರ್ ಸಿಯರ್ ಗಳನ್ನು ನೇಮಕ ಮಾಡಲಾಗುವುದು. ಐ ಟಿ, ಬಿ. ಟೆಕ್ ಕಂಪ್ಯೂಟರ್ ಸಯನ್ಸ್, ಬಿ. ಸಿ. ಎ, ಕಂಪ್ಯೂಟರ್ ಸಯನ್ಸ್ ಡಿಪೆÇ್ಲಮಾ ಅರ್ಹತೆಯುಳ್ಳವರು ಆಗಸ್ಟ್ 19ರ ಸಂಜೆ 5 ಗಂಟೆಯೊಳಗೆ ಅರ್ಜಿ ಸಲ್ಲಿಸಬೇಕು. ಅರ್ಜಿ ನಮೂನೆಗಳು ಟ್ರೈಬಲ್ ಡೆವಲಪ್ ಮೆಂಟ್ ಆಫೀಸ್ ಪರಪ್ಪ ,ಟ್ರೈಬಲ್ ಎಕ್ಸ್ ಟೆನ್ಶನ್ ಆಫೀಸ್ ಪನತ್ತಡಿ, ಭೀಮನಡಿ ಎಂಬೆಡೆಗಳಲ್ಲಿ ಹಾಗೂ www.stdd.kerala.gov.in ಎಂಬ ವೆಬ್ ಸೈಟ್ ಮೂಲಕವೂ ಲಭಿಸುವುದು. ಈ ಬಗ್ಗೆ ಮಾಹಿತಿಗಾಗಿ ದೂರವಾಣಿ ಸಂಖ್ಯೆ(0467 2960111)ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.