ಕೋಲ್ಕತಾ: ನೆರೆಯ ರಾಷ್ಟ್ರದ ಪ್ರಸ್ತುತ ಪರಿಸ್ಥಿತಿಯಿಂದಾಗಿ ಭಾರತಕ್ಕೆ ಬರಲು ಅನೇಕರು ಗಡಿ ಭಾಗದಲ್ಲಿ ಕಾಯುತ್ತಿದ್ದಾರೆ. ಬಾಂಗ್ಲಾದ ಗಡಿ ರಾಜ್ಯವಾದ ಪಶ್ಚಿಮ ಬಂಗಾಳವನ್ನು ಪ್ರವೇಶಿಸಲು ಪ್ರಯತ್ನಿಸುತ್ತಿದ್ದ ಅನೇಕ ಬಾಂಗ್ಲಾದೇಶದ ನಾಗರಿಕರನ್ನು ಗಡಿಯಲ್ಲಿ ಕರ್ತವ್ಯದಲ್ಲಿರುವ ಗಡಿ ಭದ್ರತಾ ಪಡೆ (ಬಿಎಸ್‌ಎಫ್) ಜವಾನ್ ದಯವಿಟ್ಟು ನನ್ನ ಮಾತು ಕೇಳು..
ಜೋರಾಗಿ ಕೂಗಿದರೆ ಏನೂ ಆಗುವುದಿಲ್ಲ ಎಂದು ಭಾವನಾತ್ಮಕವಾಗಿ ಮನವಿ ಮಾಡಿದ್ದಾರೆ.
ಪಶ್ಚಿಮ ಬಂಗಾಳದ ಕೂಚ್‌ಬೆಹರ್‌ನ ಗಡಿಯಲ್ಲಿ ಬಾಂಗ್ಲಾದೇಶದ ನಾಗರಿಕರು ಭಾರತಕ್ಕೆ ಪ್ರವೇಶಿಸಲು ಮನವಿ ಮಾಡಿದರು. ಅದಕ್ಕೆ ಪ್ರತಿಕ್ರಿಯಿಸಿದ ಬಿಎಸ್‌ಎಫ್ ಜವಾನ್, ನೀವು ಎದುರಿಸುತ್ತಿರುವ ಸಮಸ್ಯೆಗಳು ನಮಗೆಲ್ಲರಿಗೂ ತಿಳಿದಿದೆ, ಇಡೀ ಜಗತ್ತಿಗೆ ತಿಳಿದಿದೆ. ಆದರೆ ಈ ವಿಷಯಕ್ಕೆ ಚರ್ಚೆಯ ಅಗತ್ಯವಿದೆ. ಅಂತಹ ಸಮಸ್ಯೆಗಳನ್ನು ನಾವು ಪರಿಹರಿಸಲು ಸಾಧ್ಯವಿಲ್ಲ. ಈ ರೀತಿ ಗಡಿ ದಾಟಲು ನಾವು ಬಿಡುವುದಿಲ್ಲ. ಇಂತಹ ಸಮಯದಲ್ಲಿ ನನ್ನ ಮಾತು ಕೇಳಿ. ಜೋರಾಗಿ ಕೂಗಿದರೆ ಪ್ರಯೋಜನವಿಲ್ಲ ಎಂದು ಭಾವುಕರಾಗಿ ಹೇಳಿರುವುದನ್ನು ಇಂಡಿಯನ್ ಎಕ್ಸ್ಪ್ರೆಸ್ ವರದಿ ಮಾಡಿದೆ.
ಗಡಿಯಲ್ಲಿನ ಪರಿಸ್ಥಿತಿಯನ್ನು ನಿಭಾಯಿಸುವ ಕುರಿತು ತಮ್ಮ ಭಾರತೀಯ ಸಹವರ್ತಿಗಳೊಂದಿಗಿನ ಚರ್ಚೆಯ ಸಂದರ್ಭದಲ್ಲಿ ಬಾಂಗ್ಲಾದೇಶದ ಅಧಿಕಾರಿಗಳ ಸೂಚನೆಯಂತೆ ನೂರಾರು ಜನರನ್ನು ಹಿಂದಿರುಗುವಂತೆ ಜವಾನ್ ಕೇಳಿಕೊಂಡರು.
ನೆರೆಯ ದೇಶದಿಂದ ಯಾವುದೇ ವ್ಯಕ್ತಿಯನ್ನು ಅಕ್ರಮವಾಗಿ ಪ್ರವೇಶಿಸಲು ಅವಕಾಶ ನೀಡಬಾರದು ಎಂದು ಕೇಂದ್ರವು ನಿರ್ದೇಶನ ನೀಡಿದೆ. ಭಾರತದ ಪಾಸ್‌ಪೋರ್ಟ್ ಹೊಂದಿರುವವರು, ವಿದ್ಯಾರ್ಥಿಗಳು ಮತ್ತು ವ್ಯಾಪಾರಿಗಳು ತಮ್ಮ ದಾಖಲೆಗಳ ಪರಿಶೀಲನೆಯ ನಂತರ ಮಾನ್ಯವೆಂದು ಕಂಡುಕೊಂಡರೆ ಪ್ರವೇಶಿಸಲು ಅನುಮತಿಸಲಾಗುವುದು ಎಂದು ಅಸ್ಸಾಂ ಪೊಲೀಸ್ ಮಹಾನಿರ್ದೇಶಕ ಜಿಪಿ ಸಿಂಗ್ ತಿಳಿಸಿದ್ದಾರೆ.
ಬಾಂಗ್ಲಾದೇಶದ ರಾಜಕೀಯ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಬಿಎಸ್‌ಎಫ್ ವಿಶೇಷವಾಗಿ ಬಾಂಗ್ಲಾದೇಶದ ಗಡಿ ರಾಜ್ಯಗಳಲ್ಲಿ ಜಾಗರೂಕತೆಯನ್ನು ಹೆಚ್ಚಿಸಿದೆ. , ಪಶ್ಚಿಮ ಬಂಗಾಳ, ತ್ರಿಪುರ ಮತ್ತು ಮೇಘಾಲಯದ ಗಡಿಗಳ ಮೂಲಕ ನುಸುಳಲು ಯತ್ನಿಸುತ್ತಿದ್ದ ಹನ್ನೊಂದು ಬಾಂಗ್ಲಾದೇಶಿ ಪ್ರಜೆಗಳನ್ನು ಭದ್ರತಾ ಪಡೆ ಭಾನುವಾರ (ಆಗಸ್ಟ್ 11) ಬಂಧಿಸಿದೆ.