ಉಪ್ಪಳ: ಯಕ್ಷಗಾನ ಕ್ಷೇತ್ರದ ಮಹಾನ್ ಮನೆತನವಾದ ಪ್ಯೆವಳಿಕೆ ಕುರುಡಪದವು ಸಮೀಪದ
ಕುರಿಯದ ವಿಠಲ ಶಾಸ್ತ್ರಿಗಳ ಸಹೋದರನ ಪುತ್ರ, ಭಾಗವತ ಕುರಿಯ ಗಣಪತಿ ಶಾಸ್ತ್ರಿಗಳ ಕಿರಿಯ ಸಹೋದರ ಕುರಿಯ ಗೋಪಾಲಕೃಷ್ಣ ಭಟ್ ಇಂದು(21.8.24) ನಿಧನ ಹೊಂದಿದರು. ಕುರಿಯ ಮೂಲ ಮನೆಯ ಸಮೀಪಲ್ಲಿದ್ದು ಮನೆಯ ವ್ಯವಹಾರ ನೋಡಿಕೊಳ್ಳುತ್ತಿದ್ದ ಇವರು ಅಣ್ಣ ಗಣಪತಿ ಶಾಸ್ತ್ರಿಗಳ ಕಲಾಬದುಕಿಗೆ ಆಸರೆಯಾಗಿದ್ದರು. ಕುರಿಯ ವಿಠಲ ಶಾಸ್ತ್ರಿ ಸ್ಮಾರಕ ಪ್ರೌಢಶಾಲೆಯಲ್ಲಿ ಕಛೇರಿ ಅಧೀಕ್ಷಕರಾಗಿದ್ದ ಇವರು ಪುತ್ರ ಹಾಗೂ ಪುತ್ರಿಯನ್ನು ಅಗಲಿದ್ದಾರೆ. ಸಹೃದಯಿ ಕಲಾಪೋಷಕರಾಗಿದ್ದ ಇವರ ನಿಧನಕ್ಕೆ ಉಡುಪಿ ಯಕ್ಷಗಾನ ಕಲಾರಂಗದ ಅಧ್ಯಕ್ಷ ಎಂ.ಗಂಗಾಧರ ರಾವ್ ಹಾಗು ಕಾರ್ಯದರ್ಶಿ ಮುರಲಿ ಕಡೆಕಾರ್, ಪ್ಯೆವಳಿಕೆಯ ಗಣೇಶ ಕಲಾವೃಂದ ಸಹಿತ ವಿವಿಧ ಸಂಘಟನೆಗಳು ಸಂತಾಪ ವ್ಯಕ್ತಪಡಿಸಿದ್ದಾರೆ.