HEALTH TIPS

ಪ್ಯಾರಿಸ್‌: ಐಫೆಲ್ ಗೋಪುರ ಏರಿದ ಅಪರಿಚಿತ

 ಪ್ಯಾರಿಸ್‌: ಆಗಂತುಕನೊಬ್ಬ, ಇಲ್ಲಿನ ಹೆಗ್ಗುರುತಾದ ಐಫೆಲ್‌ ಟವರ್‌ ಏರುತ್ತಿರುವುದು ಕಂಡುಬಂದ ಕಾರಣ ಪೊಲೀಸರು ಈ ಸ್ಮಾರಕದ ಸುತ್ತಮುತ್ತಲಿನ ಜನರನ್ನು ತೆರವುಗೊಳಿಸಿದ್ದಾರೆ. ಭಾನುವಾರ ಸಂಜೆ ಉದ್ಘಾಟನಾ ಸಮಾರಂಭಕ್ಕೆ ಕೆಲವು ಗಂಟೆಗಳಿರುವಂತೆ ಶರ್ಟು ಹಾಕಿಲ್ಲದೇ ಇರುವ ವ್ಯಕ್ತಿ ಕಾಣಿಸಿಕೊಂಡಿದ್ದಾನೆ.

330 ಮೀ. ಎತ್ತರದ ಈ ಗೋಪುರವನ್ನು ವ್ಯಕ್ತಿ ಹತ್ತುತ್ತಿರುವುದು ಮಧ್ಯಾಹ್ನ ಗೋಚರವಾಗಿದೆ. ಈ ಸ್ಮಾರಕದ ಎರಡನೇ ಹಂತದಲ್ಲಿ (ಸೆಕ್ಷನ್‌ನಲ್ಲಿ) ಒಲಿಂಪಿಕ್‌ ಬಳೆಗಳನ್ನು ಜೋಡಿಸಲಾಗಿದ್ದು, ಅದಕ್ಕಿಂತ ಸ್ವಲ್ಪ ಮೇಲೆ ಕಾಣಿಸಿದ್ದಾನೆ.

ಮಧ್ಯಾಹ್ನ 3 ಗಂಟೆ ಸುಮಾರಿಗೆ ವ್ಯಕ್ತಿ ಕಾಣಿಸಿಕೊಂಡಾಗ ಪೊಲೀಸರು ಜನರನ್ನು ಅಲ್ಲಿಂದ ಖಾಲಿ ಮಾಡಿಸಿದ್ದಾರೆ. ಗೊಂದಲ ತಪ್ಪಿಸಲು 30 ನಿಮಿಷ ನಂತರ ಟವರ್‌ನ ಎರಡನೇ ಫ್ಲೋರ್‌ನಲ್ಲಿದ್ದ ಜನರಿಗೆ ಕೆಳಗಿಳಿಯಲು ಅವಕಾಶ ನೀಡಲಾಯಿತು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

src="https://blogger.googleusercontent.com/img/b/R29vZ2xl/AVvXsEik3hLMvgO1WDICUKu_VF5lQRG3CMZau_AmC5MorS73B9lRYpLdDKJGTnB8c-U47BHqrAJ7dkiQUqiUWGQ6qg9A5jtCXrPkzIP4GPJfI00HmwhHX-3VG35FjkD_MxxI10r2v4FqSQ8LuyjG/w640-h360/samarasa+new+add.JPG" width="500px" / />



Qries