ಕಾಸರಗೋಡು: ಆದೂರು ಪೊಲೀಸ್ ಠಾಣೆ ವ್ಯಾಪ್ತಿಯ ಮಲ್ಲಂಪಾರೆಯ ವ್ಯಕ್ತಿಯೊಬ್ಬರ ಹಿತ್ತಿಲಲ್ಲಿ ಹಂದಿಗೆ ಇರಿಸಿದ್ದ ಉರುಳಿಗೆ ಸಿಲುಕಿ ಚಿರತೆ ದಾರುಣವಾಗಿ ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿ ಅರಣ್ಯ ಇಲಾಖೆ ಬಂದಡ್ಕ ಸೆಕ್ಷನ್ ಕಚೇರಿ ಅಧಿಕಾರಿಗಳು ವನ್ಯ ಜೀವಿ ಸಂರಕ್ಷಣೆ ಕಾಯ್ದೆಯನ್ವಯ ಪ್ರಕಾರ ಕೇಸು ದಾಖಲಿಸಿಕೊಂಡಿದ್ದಾರೆ.
ಆದೂರು ಮಲ್ಲಂಪಾರೆಯ ನಿವಾಸಿ ಅಣ್ಣಪ್ಪ ನಾಯ್ಕ್ ಎಂಬವರ ರಬ್ಬರ್ ತೋಟದಲ್ಲಿ ಯಾರೋ ಹಂದಿ ಬೇಟೆಗಾಗಿ ಇರಿಸಿದ್ದ ಉರುಳಿಗೆ ಸಿಲುಕಿ ಚಿರತೆಯೊಂದು ಪ್ರಾಣ ಬಿಟ್ಟಿತ್ತು. ಹೊಟ್ಟೆಯ ಭಾಗಕ್ಕೆ ಕುಣಿಕೆ ಬಿಗಿದು ಚಿರತೆ ಸಾವಿಗೀಡಾಗಿತ್ತು.