ಬದಿಯಡ್ಕ: "ಗಮಕ ಕಲೆ ಅತ್ಯಂತ ಪ್ರಾಚೀನವಾದುದು. ಹಿಂದೆ ರಾಜಾಶ್ರಯವಿದ್ದ ಕಾಲದಲ್ಲಿ ಇದು ಅತ್ಯಂತ ಉಚ್ಛ್ರಾಯ ಸ್ಥಿತಿಯಲ್ಲಿತ್ತು. ಭಾರತೀಯ ಸಂಸ್ಕøತಿಯನ್ನು ಜನರಿಗೆ ಯಥಾವತ್ತಾಗಿ ಪರಿಚಯಿಸುವುದಕ್ಕೆ ಇದು ಬಹಳ ಉತ್ತಮವಾದ ಮಾಧ್ಯಮ. ಗಮಕ ಕಲಾಪರಿಷತ್ತು ಮತ್ತು ಸಿರಿಗನ್ನಡ ವೇದಿಕೆಯ ಕೇರಳ ಗಡಿನಾಡ ಘಟಕಗಳು ಸಂಯುಕ್ತ ಆಶ್ರಯದಲ್ಲಿ ಶ್ರಾವಣ ಮಾಸದ ಪರ್ವಕಾಲದಲ್ಲಿ ವಿಶೇಷವಾಗಿ ರಾಮಾಯಣದ ಪುಣ್ಯಕಥೆಯನ್ನು ಪ್ರಚಾರಗೊಳಿಸಿ ಜನರಲ್ಲಿ ಸಚ್ಚಾರಿತ್ರ್ಯವನ್ನು ಬೆಳೆಸುವುವ ಮಹತ್ಕಾರ್ಯವನ್ನು ಮಾಡುತ್ತಿರುವುದು ಸ್ತುತ್ಯರ್ಹವಾಗಿದೆ. ಇದು ಭಾರತೀಯ ಸಂಸ್ಕøತಿಯ ಜೀವಾಳವೂ ಹೌದು" ಎಂದು ಎಡನೀರು ಮಠಾಧೀಶ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರು ಅಭಿಪ್ರಾಯಪಟ್ಟರು.
ಅವರು ದೀಪಬೆಳಗಿಸಿ "ಗಮಕ ಶ್ರಾವಣ" ದ ಸರಣಿ ಕಾರ್ಯಕ್ರಮಗಳ ಉದ್ಘಾಟನೆಯನ್ನು ಶ್ರೀ ಮಠದ ಚಾತುರ್ಮಾಸ್ಯ ಸಭಾಂಗಣದಲ್ಲಿ ನೆರವೇರಿಸಿ ಆಶೀರ್ವಚನ ನೀಡಿದರು.
ಸಮಾರಂ`Àದ ಅಧ್ಯಕ್ಷತೆಯನ್ನು ಗಮಕಕಲಾ ಪರಿಷತ್ತಿನ ಅಧ್ಯಕ್ಷ ಟಿ.ಶಂಕರನಾರಾಯಣ ಭಟ್ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ನಿವೃತ್ತ ಪ್ರಾಂಶುಪಾಲರೂ ಶ್ರೀಮಠದ ಆಡಳಿತಾಧಿಕಾರಿಗಳೂ ಆದ ರಾಜೇಂದ್ರ ಕಲ್ಲೂರಾಯರು "ಭಾರತೀಯ ಸಂಸ್ಕøತಿಯನ್ನು ಸಾರುವ ಮಹಾಕಾವ್ಯಗಳನ್ನು ಸಾಧ್ಯವಿದ್ದಷ್ಟೂ ಪ್ರಚಾರಗೊಳಿಸಬೇಕು" ಎಂದು ಕರೆಯನ್ನಿತ್ತರು.
ಮರ್ಯಾದಾ ಪುರುಷೋತ್ತಮ ಶ್ರೀರಾಮಚಂದ್ರನ ಅವಳಿ ಪುತ್ರರಾದ ಕುಶ ಲವರು ಜನಿಸಿದುದು ಶ್ರಾವಣ ಮಾಸದಲ್ಲಿ. ಅವರು ಆದಿ ಗಮಕಿಗಳು ಎಂಬ ನಂಬಿಕೆ ನಮ್ಮದು. ಆದುದರಿಂದ ಅವರ ದಿವ್ಯಸ್ಮರಣೆಗೋಸ್ಕರವಾಗಿ ಶ್ರಾವಣ ಮಾಸದಲ್ಲಿ ನಾಡಿನ ವಿವಿಧ ಸಾಂಸ್ಕøತಿಕ ಕೇಂದ್ರಗಳಲ್ಲಿ ಗಮಕ ಶ್ರಾವಣ ಎಂಬ ಹೆಸರಿನಲ್ಲಿ ರಾಮಾಯಣ ಮಹಾಕಾವ್ಯದಿಂದಾಯ್ದ ಭಾಗಗಳ ವಾಚನ ವ್ಯಾಖ್ಯಾನಗಳನ್ನು ನಡೆಸುತ್ತಾ ಬರುತ್ತಿದ್ದೇವೆ" ಎಂದು ಸಿರಿಗನ್ನಡ ವೇದಿಕೆಯ ಅಧ್ಯಕ್ಷರೂ ಗಮಕ ಪರಿಷತ್ತಿನ ಕಾರ್ಯದರ್ಶಿ ವಿ.ಬಿ.ಕುಳಮರ್ವ ಪ್ರಸ್ತಾವನೆಯಲ್ಲಿ ತಿಳಿಸಿದರು. ಈ ಸಂದರ್ಭದಲ್ಲಿ ತೊರವೆ ರಾಮಾಯಣದಿಂದಾಯ್ದ ಶ್ರೀರಾಮ ಜನನದ ಭಾಗವನ್ನು ಗಮಕಿಗಳಾದ ನಿವೃತ್ತ ಮುಖ್ಯೋಪಾಧ್ಯಾಯ ಡಾ.ಶಶಿರಾಜ ನೀಲಂಗಳ ಸುಶ್ರಾವ್ಯವಾಗಿ ವಾಚನ ಮಾಡಿದರು. ನಿವೃತ್ತ ಶಿಕ್ಷಕ ಗಮಕಿ ಶ್ರೀಹರಿ ಭಟ್ ಪೆಲ್ತಾಜೆ ಮನೋಜ್ಞವಾಗಿ ವ್ಯಾಖ್ಯಾನ ಮಾಡಿದರು. ನಿವೃತ್ತ ಸರ್ಕಾರಿ ಅಧಿಕಾರಿ ಜಯನಾರಾಯಣ ತಾಯನ್ನೂರು ಸ್ವಾಗತಿಸಿ ವಂದಿಸಿದರು. ವಿ.ಬಿ.ಕುಳಮರ್ವರು ಭಾಮಿನೀ ಷಟ್ಪದಿಯಲ್ಲಿ ರಚಿಸಿದ ಗಮಕ ಗೀತೆಯನ್ನು ಡಾ.ಶಶಿರಾಜ ನೀಲಂಗಳ ಹಾಡಿ ಪ್ರಾರ್ಥನೆ ಮಾಡಿದರು.
ನಿವೃತ್ತ ಜಿಲ್ಲಾವಿದ್ಯಾಧಿಕಾರಿ ಲಲಿತಾಲಕ್ಷ್ಮೀ ಕುಳಮರ್ವ, ನಿವೃತ್ತ ಸÀರ್ಕಾರಿ ಅಧಿಕಾರಿ ಗಣೇಶ ಪ್ರಸಾದ ಪಾಣೂರು, ಶಾಮ ಭಟ್ ಪೇರಡ್ಕ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.