ಕಾಸರಗೋಡು: ನಗರಸಭೆಯ ಒಂದು ಹಾಗೂ ಮೊಗ್ರಾಲ್ ಗ್ರಾಮ ಪಂಚಾಯಿತಿಯ ಎರಡು ಸೇರಿದಂತೆ ಒಟ್ಟು ಮೂರು ವಾರ್ಡುಗಳಿಗೆ ಮಂಗಳವಾರ ನಡೆದ ಉಪ ಚುನಾವಣೆಯಲ್ಲಿ ಎರಡರಲ್ಲಿ ಮುಸ್ಲಿಂಲೀಗ್ ಹಾಗೂ ಒಂದು ವಾರ್ಡಿನಲ್ಲಿ ಸವತಂತ್ರ ಅಭ್ಯರ್ಥಿ ಗೆಲುವು ಸಾಧಿಸಿದ್ದಾರೆ.
ಕಾಸರಗೋಡು ನಗರಸಭೆಯ ಖಾಸಿಲೆನ್ ವಾರ್ಡ್ನಲ್ಲಿ ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ ಅಭ್ಯರ್ಥಿ ಕೆ.ಎಂ.ಹನೀಫ್(447 ಮತ), ಇವರ ಎದುರಾಳಿ ಸ್ವತಂತ್ರ ಅಭ್ಯರ್ಥಿ ಪಿ.ಎಂ.ಉಮೈರ್ 128 ಮತ ಪಡೆದುಕೊಮಡಿದ್ದಾರೆ.
ಮೊಗ್ರಾಲ್ ಪುತ್ತೂರು ಪಂಚಾಯಿತಿಯ ಕಲ್ಲಂಗೈ ವಾರ್ಡ್ನಲ್ಲಿ ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ ಅಭ್ಯರ್ಥಿ ಧರ್ಮಪಾಲ್ ದಾರಿಲ್ಲತ್ 701 ಮತಗಳನ್ನು ಪಡೆದು ಜಯಗಳಿಸಿದ್ದಾರೆ. ಸೋಷಿಯಲಿಸ್ಟ್ ಡೆಮಾಕ್ರಟಿಕ್ ಪಾರ್ಟಿಯ ಅಭ್ಯರ್ಥಿ ಪದ್ಮನಾಭ ಕಲ್ಲಂಗೈ 606 ಮತ ಪಡೆದಿದ್ದಾರೆ.
ಮೊಗ್ರಾಲ್ ಪುತ್ತೂರು ಪಂಚಾಯಿತಿಯ ಕೋಟೆಕುಂಜ ವಾರ್ಡ್ನಲ್ಲಿ ಸ್ವತಂತ್ರ ಅಭ್ಯರ್ಥಿ ಅಸ್ಮಿನಾ ಶಾಫಿ 563 ಮತಗಳನ್ನು ಪಡೆದು ಗೆಲುವು ಸಾಧಿಸಿದ್ದಾರೆ. ಇನ್ನೊಬ್ಬ ಸ್ವತಂತ್ರ ಅಭ್ಯರ್ಥಿ ಕೆ.ಎಸ್.ಸಂಗೀತಾ 396 ಮತಗಳನ್ನು ಪಡೆದುಕೊಂಡಿದ್ದಾರೆ.
ಉಪಚುನಾವಣೆಯಲ್ಲಿ ಗೆಲುವು ಸಾಧಿಸಿದ ಅಭ್ಯರ್ಥಿಗಳನ್ನು ಅಭಿನಂದಿಸುತ್ತಿರುವ ಕಾರ್ಯಕರ್ತರು.