HEALTH TIPS

ಬಾಂಗ್ಲಾದೇಶ: ಜಮಾತ್-ಎ-ಇಸ್ಲಾಮಿ ನಿಷೇಧ

           ಢಾಕಾ: ಬಾಂಗ್ಲಾದೇಶವು ಭಯೋತ್ಪಾದನಾ ವಿರೋಧಿ ಕಾನೂನಿನಡಿ ಜಮಾತ್-ಎ-ಇಸ್ಲಾಮಿ ಮತ್ತು ಅದರ ವಿದ್ಯಾರ್ಥಿ ಘಟಕವಾದ ಇಸ್ಲಾಮಿ ಛಾತ್ರಾ ಶಿಬಿರವನ್ನು ಗುರುವಾರ ನಿಷೇಧಿಸಿದೆ.

           ಮೂಲಭೂತವಾದಿ ಪಕ್ಷವು ಸಾರ್ವಜನಿಕ ಭದ್ರತೆಗೆ ಒಡ್ಡಿರುವ ಬೆದರಿಕೆಯನ್ನು ಉಲ್ಲೇಖಿಸಿ, ಗೃಹ ಸಚಿವಾಲಯದ ಸಾರ್ವಜನಿಕ ಭದ್ರತಾ ವಿಭಾಗವು ಗುರುವಾರ ಜಮಾತ್-ಎ-ಇಸ್ಲಾಮಿ ಮೇಲಿನ ನಿಷೇಧವನ್ನು ತನ್ನ ಅಧಿಸೂಚನೆಯಲ್ಲಿ ದೃಢಪಡಿಸಿದೆ.

          ಸರ್ಕಾರಿ ಉದ್ಯೋಗಗಳಲ್ಲಿ ಕೋಟಾ ನೀಡುವಂತೆ ಕೋರಿ ದೇಶದಾದ್ಯಂತ ನಡೆದ ವಿದ್ಯಾರ್ಥಿಗಳ ಪ್ರತಿಭಟನೆಯಲ್ಲಿ ಕನಿಷ್ಠ 150 ಜನರ ಸಾವಿನ ನಂತರ, ಪ್ರತಿಭಟನೆಯನ್ನು ದುರ್ಬಳಕೆ ಮಾಡಿಕೊಂಡಿದೆ ಎಂದು ಆರೋಪಿಸಿ, ಜಮಾತ್-ಎ-ಇಸ್ಲಾಮಿಯನ್ನು ನಿಷೇಧಿಸಲು ಬಾಂಗ್ಲಾದೇಶ ಸರ್ಕಾರವು ಮಂಗಳವಾರ ನಿರ್ಧರಿಸಿತ್ತು.

               ಪ್ರಧಾನಿ ಶೇಖ್ ಹಸೀನಾ ಅವರ ಅವಾಮಿ ಲೀಗ್ ನೇತೃತ್ವದ 14 ಪಕ್ಷಗಳ ಮೈತ್ರಿಕೂಟದ ಸಭೆಯು ಜಮಾತ್ ಅನ್ನು ರಾಜಕೀಯದಿಂದ ನಿಷೇಧಿಸಬೇಕು ಎಂಬ ನಿರ್ಣಯವನ್ನು ಅಂಗೀಕರಿಸಿದ ನಂತರ ಈ ಬೆಳವಣಿಗೆ ನಡೆದಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries