ಕಾಸರಗೋಡು: ಬಾಲಗೋಕುಲ ನಗರ ಸಮಿತಿ ವತಿಯಿಂದ 44ನೇ ಶ್ರೀ ಕೃಷ್ಣ ಜನ್ಮಾಷ್ಟಮಿ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದ ರಾಜಾಂಗಣದಲ್ಲಿ ಸಮಿತಿ ಅಧ್ಯಕ್ಷ ನ್ಯಾಯವಾದಿ ಸುರೇಶ್ ಕುಮಾರ್ ದೀಪ ಪ್ರಜ್ವಲಿಸಿ ಉತ್ಸವಕ್ಕೆ ಚಾಲನೆ ನೀಡಿದರು.
ಕಾರ್ಯಕ್ರಮಕ್ಕೆ ಮೊದಲು ಶ್ರೀ ಸುಬ್ರಹ್ಮಣ್ಯ ದೇವಸ್ಥಾನ ನೆಲ್ಲಿಕುಂಜೆಯಿಂದ ಆಕರ್ಷಕ ಶೋಭಯಾತ್ರೆ ಹೊರಟು ಬೀಚ್ ರಸ್ತೆ, ಬ್ಯಾಂಕ್ ರಸ್ತೆ, ಕೆ.ಪಿ.ಆರ್.ರಾವ್ ರಸ್ತೆ, ಹಳೆ ಬಸ್ ಸ್ಟಾಂಡ್, ಎಂ.ಜಿ ರಸ್ತೆಯಾಗಿ ಶ್ರೀ ಮಲ್ಲಿಕಾರ್ಜುನ ದೇವಸ್ಥಾನ ತಲುಪಿತು. ಶ್ರೀ ಕೃಷ್ಣ ರಾಧೆ ವೇಷಧಾರಿ ಮಕ್ಕಳು, ಚೆಂಡೆ ಮೇಳ, ವಿವಿಧ ಬಾಲಗೋಕುಲದ ಮಕ್ಕಳಿಂದ ಕುಣಿತ ಭಜನೆ, ಕೋಲಾಟ, ವೈವಿಧ್ಯಮಯ ನೃತ್ಯ ಪ್ರದರ್ಶನ, ಕೊರಕ್ಕೋಡು ಆರ್ಯಕಾತ್ಯಾಯಿನಿ ಬಾಲಗೋಕುಲದ ವತಿಯಿಂದ ಹುಲಿವೇಷ ಕುಣಿತ ವಿಶೇಷ ಮೆರುಗನ್ನು ನೀಡಿತು. ಶೋಭಯಾತ್ರೆಯಲ್ಲಿ ವಿಶ್ವ ಹಿಂದೂ ಪರಿಷತ್ ಕಾಸರಗೋಡು ನಗರ ನೇತಾರರು, ಜನ್ಮಾಷ್ಟಮಿ ಸಮಿತಿ ಪದಾಧಿಕಾರಿಗಳು, ಬಾಲಗೋಕುಲಗಳ ಪ್ರಮುಖರು ಹೆಚ್ಚಿನ ಸಂಖ್ಯೆಯಲ್ಲಿ ಮಾತೆಯರು ಮಹನೀಯರು ಮಕ್ಕಳು ಭಾಗವಹಿಸಿದರು. ಬಳಿಕ ನಡೆದ ಸಭೆಯಲ್ಲಿ ಛದ್ಮವೇಷ ಸ್ಪರ್ಧೆಯ ಮಕ್ಕಳಿಗೆ ಹಾಗೂ ವಿವಿಧ ಆಟೋಟ ಸ್ಪರ್ಧೆಯ ವಿಜೇತರಿಗೆ ಮುಖ್ಯ ಅತಿಥಿಗಳಾದ ಉದ್ಯಮಿ ಕೃಷ್ಣ ಪ್ರಸಾದ್ ಕೋಟೆಕಣಿ ಅವರು ಬಹುಮಾನ ವಿತರಿಸಿದರು.