ಕುಂಬಳೆ : ಕುಂಬಳೆ ಸೇವಾ ಸಹಕಾರಿ ಬ್ಯಾಂಕ್ ಪೆರುವಾಡ್ ಶಾಖೆಯ ಕಿಟಿಕಿ ಗ್ರಿಲ್ಸ್ ವಿದ್ಯುತ್ ಕಟ್ಟರ್ ಬಳಸಿ ತುಂಡರಿಸಿ ನುಗ್ಗಿದ ಕಳ್ಳರು ಕಳವಿಗೆ ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿ ಬ್ಯಾಂಕ್‍ನ ಸಿಸಿ ಕ್ಯಾಮರಾ ಪರಿಶೀಲಿಸಿದ ಪೊಲೀಸರು, ಇದರಲ್ಲಿ ಇಬ್ಬರ ದೃಶ್ಯ ಪತ್ತೆಹಚ್ಚಿದ್ದಾರೆ. ಈಗಾಘಲೇ ಮೂರು ಬೆರಳಚ್ಚು ಪತ್ತೆಹಚ್ಚಲಾಗಿದ್ದು, ಇದರ ಆಧಾರದಲ್ಲಿ ಆರೋಪಿಗಳ ಪತ್ತೆಗೆ ಪೊಲೀಸರು ಪ್ರಕ್ರಿಯೆ ಆರಂಭಿಸಿದ್ದಾರೆ.
ಪ್ರಸಕ್ತ ಶಿಕ್ಷೆ ಅನುಭವಿಸಿ ಹೊರಬಂದಿರುವವರು ಹಾಗೂ ಅಂತಾರಾಜ್ಯ ಕಳ್ಳರ ಮೇಲೆ ನಿಗಾಯಿರಿಸಿದ್ದು, ಇನ್ಸ್‍ಪೆಕ್ಟರ್ ಕೆ.ಪಿ ವಇನೋದ್ ಕುಮಾರ್ ನೇತೃತ್ವದಲ್ಲಿ ತನಿಖಡ ನಡೆಯುತ್ತಿದೆ. ರಾಷ್ಟ್ರೀಯ ಹೆದ್ದಾರಿ ಪೆರುವಾಡ್‍ನ ಬಹು ಅಂತಸ್ತಿನ ಕಟ್ಟಡದ ತಳಭಾಗದ ಕಟ್ಟಡದಲ್ಲಿ ಕಾರ್ಯಾಚರಿಸುತ್ತಿರುವ ಶಾಖಾ ಕೊಠಡಿಯ ಹಿಂಭಾಗದ ಗ್ರಿಲ್ಸ್ ತುಂಡರಿಸಿ ನುಗ್ಗಿ ಕಳವಿಗೆ ಯತ್ನಿಸಲಾಗಿತ್ತು .