ಕಾಸರಗೋಡು: ಐಸಿಎಆರ್ ಅಭಿವೃದ್ಧಿಪಡಿಸಿದ 109 ವಿಧದ ಬೆಳೆ ತಳಿಗಳನ್ನು 2024ರ ಆಗಸ್ಟ್ 11ರಂದು ನವದೆಹಲಿಯ ಭಾರತ ರತ್ನ ಸಿ. ಸುಬ್ರಮಣ್ಯಂ ಆಡಿಟೋರಿಯಂನ ಎನ್‍ಎಎಸ್‍ಸಿ ಕಾಂಪ್ಲೆಕ್ಸ್‍ಲ್ಲಿಪ್ರಧಾನಮಂತ್ರಿ ನರೇಂದ್ರಮೋದಿ ಬಿಡುಗಡೆಗೊಳಿಸಲಿದ್ದಾರೆ.
ಈ ಸಂದರ್ಭ ಐಸಿಎಆರ್-ಸಿಪಿಸಿಆರ್‍ಐ ಕಾಸರಗೋಡು ಅಭಿವೃದ್ಧಿಪಡಿಸಿರುವ ಕಲ್ಪ ಸುವರ್ಣ ಮತ್ತು ಕಲ್ಪ ಶತಾಬ್ದಿ ಹೆಸರಿನ ಎರಡು ತೆಂಗು ಮತ್ತು ವಿಟಿಎಲ್ ಸಿಎಚ್1 ಮತ್ತು ವಿಟಿಎಲ್ ಸಿಎಚ್2 ಹೆಸರಿನ ಎರಡು ಕೊಕ್ಕೋ ತಳಿಗಳನ್ನು ಬಿಡುಗಡೆ ಮಾಡಲಾಗುವುದು.
ಕಲ್ಪ ಸುವರ್ಣ:
ಕುಬ್ಜ ತಳಿಯ ಹೆಚ್ಚಿನ ಇಳುವರಿ ನೀಡುವ, ಹಸಿರು ಬಣ್ಣದಿಂದ ಕೂಡಿದ ಕಾಯಿಗಳು, ಸಿಹಿಯಾದ ಎಳನೀರು ಮತ್ತು ಉತ್ತಮ ಗುಣಮಟ್ಟದ ಕೊಬ್ಬರಿ ಒದಗಿಸುವ ಗುಣಮಟ್ಟದ ತಳಿ ಇದಾಗಿದೆ. ನೆಟ್ಟು 30ರಿಂದ 36ತಿಂಗಳ ಕಾಲವಧಿಯಲ್ಲಿ ಇಳುವರಿ ನೀಡಲಿದ್ದು, ಕೇರಳ ಮತ್ತು ಕರ್ನಾಟಕದಲ್ಲಿ ಬೆಳೆಯಲು ಶಿಫಾರಸು ಮಾಡಲಾಗಿದೆ.
ಕಲ್ಪ ಶತಾಬ್ದಿ:
ಇದು ಎತ್ತರವಾಗಿ ಬೆಳೆಯುವ ತಳಿಯಾಗಿದ್ದು, ದೊಡ್ಡ ಕಾಯಿಗಳೊಂದಿಗೆ, ಕೊಪ್ಪರ ಮತ್ತು ಎಳನೀರಿನ ಉತ್ಪಾದನೆಗೆ ಸೂಕ್ತವಾಗಿದೆ. ಹಸಿರುಮತ್ತು ಹಳದಿ ಬಣ್ಣದ ಕಾಯಿಗಳನ್ನು ಹೊಂದಿರುತ್ತದೆ. ಇದು ಉತ್ತಮ ಕೊಬ್ಬರಿ ಅಂಶವನ್ನು (273 ಗ್ರಾಂ)ಒಳಗೊಂಡಿದ್ದು, ಕೇರಳ, ಕರ್ನಾಟಕ ಮತ್ತು ತಮಿಳುನಾಡಿನಲ್ಲಿ ಬೆಳೆಯಲು ಶಿಫಾರಸು ಮಾಡಲಾಗಿದೆ.
ವಿಟಿಎಲ್ ಸಿಎಚ್1 ತಳಿಯ ಕೊಕ್ಕೋ ಗಿಡ ಕೇರಳ, ಕರ್ನಾಟಕ ಮತ್ತು ತಮಿಳುನಾಡಿನಲ್ಲಿ ಹಾಗೂ ವಿಟಿಎಲ್ ಸಿಎಚ್2 ತಳಿಯನ್ನು ಕೇರಳ, ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶ ಮತ್ತು ಗುಜರಾತ್‍ನಲ್ಲಿ ಬೆಳೆಯಲು ಶಿಫಾರಸು ಮಾಡಲಾಗಿದೆ.