HEALTH TIPS

ಧರ್ಮದ ಉಳಿವಿಗೆ ಧಾರ್ಮಿಕ ಕೇಂದ್ರಗಳು ಶಕ್ತಿಯುತವಾಗಿರಬೇಕು-ರವೀಶ ತಂತ್ರಿ: ಏತಡ್ಕ ಬ್ರಹ್ಮಕಲಶೋತ್ಸವಕ್ಕಾಗಿ `ಶಿವಾರ್ಪಣಂ'

             ಬದಿಯಡ್ಕ: ಹಿಂದೂ ಧರ್ಮ ಉಳಿಯಲು ಬೇಕಾದ ಶಕ್ತಿಯನ್ನು ಧಾರ್ಮಿಕ ಕೇಂದ್ರಗಳು ನೀಡುತ್ತವೆ. ಆದ ಕಾರಣ ಅದನ್ನು ಯಾರು ನಡೆಸುತ್ತಾರೆ ಎನ್ನುವುದು ಮುಖ್ಯ ಅಲ್ಲ. ದೇವಾಲಯಗಳು ವಿಶ್ವಾಸಿಗಳ ಸಂಪತ್ತು. ಈ ಸಂಪತ್ತಿನ ವೃದ್ಧಿಗೆ ಭಕ್ತರು ನಿರಂತರವಾಗಿ ದೇವಸ್ಥಾನಗಳ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವ ಅವಶ್ಯಕತೆ ಇದೆ. ನಮ್ಮ ಸಂಪ್ರದಾಯದ ಆಚರಣೆ ಮನೆಯೊಳಗೆ ಇರಿಸಿ ಬಾಹ್ಯವಾಗಿ ಒಂದೇ ಕುಟುಂಬದಂತೆ ಧರ್ಮ ರಕ್ಷಣೆ, ವೃದ್ಧಿಗೆ ತೊಡಗಿಸಿಕೊಳ್ಳಬೇಕು. ವೈಯ್ಯಕ್ತಿಕ ಪಾಪ ಕ್ಷಯವಾಗಿ ದೇವಾಲಯಗಳ ಆಂತರಿಕ ಶಕ್ತಿ ಹೆಚ್ಚುತ್ತದೆ. ಆ ಪ್ರದೇಶ ಸಮೃದ್ಧವಾಗುತ್ತದೆ ಎಂದು ಬ್ರಹ್ಮಶ್ರೀ ರವೀಶ ತಂತ್ರಿ ಕುಂಟಾರು ಹೇಳಿದರು.

              ಏತಡ್ಕ ಶ್ರೀ ಸದಾಶಿವ ದೇವಸ್ಥಾನದ ಬ್ರಹ್ಮಕಲಶೋತ್ಸವ 25ರ ಸಿದ್ಧತಾ ಸಭೆಯಲ್ಲಿ ಅವರು ಸಂದೇಶವನ್ನು ನೀಡಿದರು. 

               ಧಾರ್ಮಿಕ ಮುಂದಾಳು ಉದ್ಯಮಿ ವಸಂತ ಪೈ ಬದಿಯಡ್ಕ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಬ್ರಹ್ಮಕಲಶೋತ್ಸವ ಸಂದರ್ಭದ ವಿಶಿಷ್ಟ ಯೋಜನೆ `ಶಿವಾರ್ಪಣಂ' ಮನವಿ ಪತ್ರ ಬಿಡುಗಡೆ ಮಾಡಿ ಮಾತನಾಡಿ ದೇವರ ಕೆಲಸ ಯಾರು ಮಾಡುತ್ತಾರೋ ಅವರಿಗೆ ಸಕಲ ಶ್ರೇಯಸ್ಸು ಖಚಿತ. ಅಲ್ಲಿ ಎಚ್ಚರ ತಪ್ಪಿದರೆ ಅಪಾಯ, ಅಸುಖ ಕಟ್ಟಿಟ್ಟ ಬುತ್ತಿ. ದೇವರ ಸಾಮ್ರಾಜ್ಯದಲ್ಲಿ ಎಲ್ಲವು ನಮಗೆ ಉಚಿತವಾಗಿರುವಾಗ ಭಕ್ತರು ತಮ್ಮ ಸೇವೆಯು ಖಚಿತವಾಗಿದೆಯೇ ಎಂಬುದಾಗಿ ಆಗಾಗ ಪರೀಕ್ಷಿಸಿಕೊಳ್ಳಬೇಕು ಎಂದರು. 

         ಎಣ್ಮಕಜೆ ಗ್ರಾಮಪಂಚಾಯಿತಿ ಸದಸ್ಯ ನರಸಿಂಹ ಪೂಜಾರಿ `ಹುಂಡಿ ಕರಂಡಕ' ಬಿಡುಗಡೆಗೊಳಿಸಿದರು. ಸೆಪ್ಟೆಂಬರ್ 1ರಂದು ನಡೆಯಲಿರುವ ಮನೆ ಮನೆ ಭೇಟಿ ಮಹಾ ಅಭಿಯಾನದ ಕುರಿತು ಬ್ರಹ್ಮ ಕಲಶೋತ್ಸವ ಸಮಿತಿಯ ಸುಮಿತ್ ರಾಜ್ ಮಾಹಿತಿ ನೀಡಿದರು. ಹಿರಿಯರಾದ ಪತ್ತಡ್ಕ ಗಣಪತಿ ಭಟ್ ಶುಭಾಶಂಸನೆಗೈದರು.  ಸಮಿತಿ ಅಧ್ಯಕ್ಷ ಮತ್ತು ಆಡಳಿತ ಮೊಕ್ತೇಸರ ವೈ.ಶಾಮ ಭಟ್, ಶ್ರೀಕ್ಷೇತ್ರದ ಬ್ರಹ್ಮಕಲಶೋತ್ಸವಕ್ಕೆ ಭಗವದ್ಭಕ್ತರ ಸಹಕಾರವನ್ನು ಕೋರಿದರು. ಸಮಿತಿಯ ಗೌರವ ಅಧ್ಯಕ್ಷ ಡಾ.ಸುಬ್ರಾಯ ಭಟ್ ಉಪಸ್ಥಿತರಿದ್ದರು. ಶಶಿಪ್ರಭಾ ವರುಂಬುಡಿ ಪ್ರಾರ್ಥನೆ ಮಾಡಿದರು. ಸಮಿತಿಯ ಖಜಾಂಜಿ ವೈ.ವಿ ಸುಬ್ರಹ್ಮಣ್ಯ ಸ್ವಾಗತಿಸಿದರು. ಡಾ.ವೈ.ವಿ.ಕೃಷ್ಣಮೂರ್ತಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಚಂದ್ರಶೇಖರ ಏತಡ್ಕ ಕಾರ್ಯಕ್ರಮ ನಿರೂಪಿಸಿದರು. ಸಮಿತಿಯ ಪ್ರಧಾನ ಕಾರ್ಯದರ್ಶಿ ಡಾ.ಪ್ರಕಾಶ್ ವೈ ಎಚ್ ವಂದಿಸಿದರು.

ಶಿವಾರ್ಪಣಂ :

            ಬ್ರಹ್ಮಕಲಶೋತ್ಸವದ ಸಂದರ್ಭದಲ್ಲಿ ಭಗವದ್ಭಕ್ತರಿಗೆ ಅರ್ಪಣೆಗಾಗಿ ಈ ವಿಶಿಷ್ಟ ಯೋಜನೆಯಿದೆ. ನೇರವಾಗಿ ಶಿವನನ್ನು ಧ್ಯಾನಿಸಿ, ಸಂಕಲ್ಪಿಸಿ ಅರ್ಪಿಸುವ ಸರಳ ಯೋಜನೆ ಇದಾಗಿದೆ. ಶಿವ ಪಂಚಾಕ್ಷರಿ ಜಪಲಿಪಿ ಯಜ್ಞ, ಪ್ರಸಾದ ವಿತರಣೆಗೆ ಬಟ್ಟೆಯ ಚೀಲ ಮಾಡುವುದು, ಹೂ ಮಾಲೆ ರಚನೆ, ತರಕಾರಿ ಬೆಳೆ ಯೋಜನೆ, ಶುದ್ಧ ಬೆರಣಿಯಿಂದ ಭಸ್ಮ ತಯಾರಿ ಮುಂತಾದ ಚಟುವಟಿಕೆಯೇ `ಶಿವಾರ್ಪಣಂ'.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries