ಕಾಸರಗೋಡು: ವಯನಾಡು ಜಿಲ್ಲೆಯ ಮುಂಡಕೈ-ಚೂರಲ್‌ಮಲೆ ಭೂಕುಸಿತದಿಂದ ಸಂಕಷ್ಟ ಎದುರಿಸುತ್ತಿರುವವರಿಗಾಗಿ ಕಾಸರಗೋಡಿನ ಜನತೆ ಕೈಜೋಡಿಸುತ್ತಿದ್ದಾರೆ. ವಯನಾಡ್ ಜೊತೆಗೆ ಇಡೀ ದೇಶವೇ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಸಹಾಯಹಸ್ತ ಚಾಚುತ್ತಿದ್ದು, ಜಿಲ್ಲಾಧಿಕಾರಿ ಕೆ. ಇನ್ಬಾಶೇಖರ್ ಅವರನ್ನು ಕಾಸರಗೋಡು ಕಚೇರಿಯಲ್ಲಿ ಭೇಟಿ ಮಾಡಿ ಹಲವುಮಂದಿ ಸಿಎಂಡಿಆರ್‌ಎಫ್‌ಗೆ ದೇಣಿಗೆ ನೀಡಿದರು.
ಪೆರಿಯಾ ಸರ್ಕಾರಿ ಉನ್ನತ ಮಾಧ್ಯಮಿಕ ಶಾಲೆ 1995-96 ಎಸ್‌ಎಸ್‌ಎಲ್‌ಸಿ ಬ್ಯಾಚ್ ಪೂರ್ವವಿದ್ಯಾರ್ಥಿಗಳು30,500 ರೂಪಾಯಿಗಳನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ನೀಡಿದರು. ಸಂಘದ ಅಧ್ಯಕ್ಷ ರತೀಶ್ ಕುಮಾರ್ ನೇತೃತ್ವದಲ್ಲಿ ಜಿಲ್ಲಾಧಿಕಾರಿಗಳಿಗೆ ದೇಣಿಗೆ ಹಸ್ತಾಂತರಿಸಲಾಯಿತು.
ಕುತ್ತಿಕೋಲ್ ಕೃಷಿಕ ಕ್ಷೇಮಾಭಿವೃದ್ಧಿ ಸಹಕಾರ ಸಂಘದಿAದ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ 25000 ರೂ.ದೇಣಿಗೆಯನ್ನು ಅಧ್ಯಕ್ಷ ಸಿ. ಬಾಲನ್ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಕೆ.ಇನ್ಬಾಶೇಖರ್ ಅವರಿಗೆ ಹಸ್ತಾಂತರಿಸಲಾಯಿತು.
ಡಿವೈಎಫ್‌ಐ ಚೆನ್ನಿಕರ ಘಟಕ ಸಮಿತಿಯಿಂದ ಸಂಗ್ರಹಿಸಿದ 21000 ರೂ. ಮೊತ್ತವನ್ನು ಡಿವೈಎಫ್‌ಐ ಬ್ಲಾಕ್ ಅಧ್ಯಕ್ಷ ಮಿಥುನ್ ರಾಜ್ ಜಿಲ್ಲಾಧಿಕಾರಿಗಳಿಗೆ ಹಸ್ತಾಂತರಿಸಿದರು. ಚೆನ್ನಿಕರ ಆರ್ಟ್ಸ್ ಮತ್ತು ಸ್ಪೋರ್ಟ್ಸ್ ಕ್ಲಬ್ ಸಂಗ್ರಹಿಸಿದ 25000 ರೂ., ಕುತ್ತಿಕೋಲ್ ಶ್ರೀ ತಂಬುರಾಟಿ ಭಗವತಿಕ್ಷೇತ್ರ ಸಮಿತಿ ಸಂಗ್ರಹಿಸಿದ 25000 ರೂ. ಮೊತ್ತವನ್ನುಜಿಲ್ಲಾಧಿಕಾರಿ ಕೆ. ಮೊತ್ತವನ್ನು ಜಿಲ್ಲಾಧಿಕಾರಿಗೆ ಹಸ್ತಾಂತರಿಸಲಾಯಿತು.