ಮಂಜೇಶ್ವರ: ಬ್ರಿಟಿಷ್ ವಶಾಹತುಶಾಹೀ ವ್ಯವಸ್ಥೆ ನಮ್ಮನ್ನು ಗುಲಾಮಗಿರಿಗೆ ತಳ್ಳಿದ ವ್ಯವಸ್ಥೆ. ಈ ವ್ಯವಸ್ಥೆಯನ್ನು ವಿರೋಧಿಸಿದ ಎರಡು ಮಹಾನ್ ವ್ಯಕ್ತಿಗಳು ಮಹಾತ್ಮಗಾಂಧಿ ಮತ್ತು ಗೋವಿಂದ ಪೈ ಅವರು. ಆದರೆ ಅವರು ಆ ವ್ಯವಸ್ಥೆಯನ್ನು ವಿರೋಧಿಸಿದರು ಹೊರತು ಆ ಸಂಸ್ಕøತಿಯನ್ನು ವಿರೋಧಿಸಲಿಲ್ಲ. ಆ ಸಂಸ್ಕೃತಿಯಿಂದ ಬಂದ ಅನೇಕ ಮಹನೀಯರನ್ನು ವಿರೋದಿಸಲಿಲ್ಲ ಮತ್ತು ಎಲ್ಲದಕ್ಕಿಂತ ಮಿಗಿಲಾಗಿ ಆ ಸಂಸ್ಕøತಿಯನ್ನು ತಿರಸ್ಕರಿಸಲಿಲ್ಲ. ದೊಡ್ಡ ದೊಡ್ಡ ವಿಚಾರಗಳನ್ನು, ನಾಟಕಗಳನ್ನು, ಕಾವ್ಯಗಳನ್ನು ತಿರಸ್ಕರಿಸಲಿಲ್ಲ ಎಂದು ಹಿರಿಯ ರಂಗಭೂಮಿ ನಿರ್ದೇಶಕÀ ಪ್ರಸನ್ನಾ ಅವರು ಹೇಳಿದರು.
ಮಂಜೇಶ್ವರ ಗೋವಿಂದ ಪೈ ನಿವಾಸ ಗಿಳಿವಿಂಡಲ್ಲಿ ನಡೆದ ಕನ್ನಡ ಚಿಂತನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
. ಕನ್ನಡ ಅಭಿವೃದ್ಧಿ ಪ್ರಾಧಿಕಾರ ಹಾಗೂ ಮಹಾಕವಿ ಮಂಜೇಶ್ವರ ಗೋವಿಂದಪೈ ಸ್ಮಾರಕ ಗ್ರಂಥಾಲಯ ನೇತೃತ್ವದಲ್ಲಿ ನಡೆದ ಕನ್ನಡ ಚಿಂತನ ಕಾರ್ಯಕ್ರಮದಲ್ಲಿ ರಾಷ್ಟ್ರಪಿತ ಮಹಾತ್ಮಗಾಂಧಿ ರಾಷ್ಟ್ರಕವಿ ಗೋವಿಂದಪೈ “ಚಿಂತನ ಮಂಥನ “ ಕಾರ್ಯಕ್ರಮದಲ್ಲಿ ಪ್ರಸನ್ನ ಅವರು ವಿಷಯ ಮಂಡನೆ ಮಾಡಿದರು. ಗೋವಿಂದ ಪೈ ಸ್ಮಾರಕ ಗ್ರಂಥಾಲಯದ ಅಧ್ಯಕ್ಷ ಉಮೇಶ್ ಎಂ ಸಾಲಿಯಾನ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಉಮೇಶ್ ಮಾಸ್ತರ್, ಕಮಲಾಕ್ಷ ಡಿ, ಪ್ರದೀಪ್ ಮೊದಲದವರು ಉಪಸ್ಥಿತರಿದ್ದರು. ನಾಡೋಜ ಕಯ್ಯಾರ ಕಿಞ್ಞಣ್ಣ ರೈ ಅವರ ಕಥನಕಾವ್ಯವನ್ನು ಉದಯ ಸಾರಂಗ ನಿರ್ದೇಶಿಸಿದ “ಪಂಜರದ ಗಿಳಿ” ನಾಟಕ ವಿದ್ಯಾರ್ಥಿಗಳಿಂದ ಪ್ರದರ್ಶನಗೊಂಡಿತು. ಬಾಲಕೃಷ್ಣ ಶೆಟ್ಟಿಗಾರ್ ಸ್ವಾಗತಿಸಿ, ಜಯಂತ್ ಮಾಸ್ತರ್ ವಂದಿಸಿದರು.