ಬದಿಯಡ್ಕ: ಎಡನೀರು ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಅವರ ನಾಲ್ಕನೇ ವರ್ಷದ ಚಾತುರ್ಮಾಸ್ಯ ವ್ರತಾಚರಣೆ ಅಂಗವಾಗಿ ಡಾ. ಕೀಲಾರು ಗೋಪಾಲಕೃಷ್ಣಯ್ಯ ಪ್ರತಿಷ್ಠಾನ ವತಿಯಿಂದ ಸೇವಾರೂಪದಲ್ಲಿ ನಡೆದುಬರುತ್ತಿರುವ ಶ್ರೀಮದ್ ದೇವೀ ಭಾಗವತ ಸಪ್ತಾಹ ಮತ್ತು ಯಕ್ಷಗಾನ ತಾಳಮದ್ದಳೆ ನವಾಹ ಕಾರ್ಯಕ್ರಮದ ಸಮಾರೋಪ ಸಮಾರಂಭ ಆ. 11ರಂದು ಮಧ್ಯಾಹ್ನ 2.30ಕ್ಕೆ ಶ್ರೀಮಠದ ಸಭಾಂಗಣದಲ್ಲಿ ಜರುಗಲಿರುವುದು.
2.30ಕ್ಕೆ ಕಾಸರಗೋಡು ಶ್ರೀಗೋಪಾಲಕೃಷ್ಣ ಯಕ್ಷಗಾನ ಬೊಂಬೆಯಾಟ ಸಂಘದ ವತಿಯಿಂದ ಮಹಿಷಾಸುರ ವಧೆ ಯಕ್ಷಗಾನ ಬೊಂಬೆಯಾಟ ನಡೆಯುವುದು. ಸಂಜೆ 4ಕ್ಕೆ 'ಶಾಂಭವೀ ವಿಲಾಸ'ಯಕ್ಷಗಾನ ತಾಳಮದ್ದಳೆ ನಡೆಯುವುದು. ಸಂಜೆ 6ಕ್ಕೆ ನಡೆಯುವ ಸಮಾರೋಪ ಸಮಾರಂಭದಲ್ಲಿ ಮಂಜೇಶ್ವರ ಶಾಸಕ ಎ.ಕೆ.ಎಂ ಅಶ್ರಫ್ ಅದ್ಯಕ್ಷತೆ ವಹಿಸುವರು. ಡಾ. ಟಿ. ಶ್ಯಾಮ ಭಟ್ ಐಎಎಸ್ ಸಮಾರೋಪ ಭಾಷಣ ಮಾಡುವರು. ಚಾತುರ್ಮಾಸ್ಯ ಸಮಿತಿ ಅದ್ಯಕ್ಷ ಬಲರಾಮ ಆಚಾರ್ಯ ಮುಖ್ಯ ಅತಿಥಿಯಾಗಿ ಭಾಗವಹಿಸುವರು.
ಈ ಸಂದರ್ಭ ಯಕ್ಷಗಾನದ ಹಿರಿಯ ಕಲಾವಿದ ಕುಂಬಳೆ ಶ್ರೀಧರ ರಾವ್ ಮತ್ತು ಹಿರಿಯ ಯಕ್ಷಗಾನ ಭಾಗವತ ಸುಬ್ರಹ್ಮನ್ಯ ಧಾರೇಶ್ವರ ಸಂಸ್ಮರಣೆ ನಡೆಯುವುದು. ಖ್ಯಾತ ಯಕ್ಷಗಾನ ಕಲಾವಿದ ವಾಸುದೇವ ರಂಗಭಟ್ಟ ಸಂಸ್ಮರಣಾ ಭಾಷಣ ಮಾಡುವರು. ಶ್ರೀ ಸಚ್ಚಿದಾನಂದ ಭಾರತಿ ಸ್ವಾಮೀಜಿ ಅವರು ಆಶೀರ್ವಚನ ನೀಡುವರು.