ಕುಂಬಳೆ: ಕುಂಬಳೆ ಸನಿಹದ ಕಿದೂರು ನಿವಾಸಿ, ನಿವೃತ್ತ ಉಪಜಿಲ್ಲಾ ಶಿಕ್ಷಣಾಧಿಕಾರಿ ಶ್ರೀಕೃಷ್ಣ ವಿಶ್ವೇಶ್ವರ ಶರ್ಮ(72)ಗುರುವಾರ ಸ್ವಗೃಹದಲ್ಲಿ ನಿಧನರದರು. ಕಿದೂರು ಶ್ರೀ ಮಹಾದೇವ ದೇವಸ್ಥಾನದ ಪ್ರಧಾನ ಅರ್ಚಕ ಹಾಗೂ ಮೊಕ್ತೇಸರರಾಗಿದ್ದರು. ಉಪಜಿಲ್ಲಾ ಶಿಕ್ಷಣಾಧಿಕಾರಿಯಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು. ಅವರು ಪತ್ನಿ, ಪುತ್ರ, ಪುತ್ರಿಯನ್ನು ಅಗಲಿದ್ದಾರೆ.