HEALTH TIPS

ಬರವಣಿಗೆ ಸಮಸ್ಯೆಯೇ? ಗೂಗಲ್ ಕ್ರೋಮ್ ಎ.ಐ. ಈಗ ಏನು ಬೇಕಾದರೂ ಬರೆಯಬಲ್ಲದು

ಇಂದಿನ ಹೊಸ ತಲೆಮಾರು ಲೇಖನಿ ಕೈಗೆತ್ತಿಕೊಂಡು ಬರೆಯುವಲ್ಲಿ ಆಸಕ್ತಿ ವಹಿಸುತ್ತಿಲ್ಲ. ಈ ಬಗ್ಗೆ ಅಧ್ಯಯನಗಳೂ ದೃಢಪಡಿಸಿವೆ. ಈ ನಿಟ್ಟಿನಲ್ಲಿ ನಮಗೆ ಬೇಕಾದ ಭಾಷೆಯಲ್ಲಿ ಏನು ಬೇಕಾದರೂ ಬರೆಯಲು ತಂತ್ರಜ್ಞಾನ ಬಂದಿದೆ. ಉತ್ಪಾದಕ ಎಐ ನೊಂದಿಗೆ ಬರೆಯಲು ನಿಮಗೆ ಸಹಾಯ ಮಾಡುವ ಸುಖಕರವಾದ ವೈಶಿಷ್ಟ್ಯದೊಂದಿಗೆ ಗೂಗಲ್ ಮಾಮ ನೆರವಾಗುತ್ತದೆ. ಇದು ಮ್ಯಾಕ್, ವಿಂಡೋಸ್ ಸಿಸ್ಟಂಗಳಲ್ಲಿ ಲಭ್ಯವಿರುತ್ತದೆ. ಇದು ದೈನಂದಿನ ಜೀವನದಲ್ಲಿ ಬಹಳ ಉಪಯುಕ್ತ ವೈಶಿಷ್ಟ್ಯವಾಗಿದೆ. ವಿದ್ಯಾರ್ಥಿಗಳಿಗೂ ಇದು ತುಂಬಾ ಸಹಕಾರಿಯಾಗಲಿದೆ.

 ಕೆಲವರಿಗೆ ಸರಿಯಾಗಿ ಬರೆಯಲು ಅಕ್ಷರ, ವಾಕ್ಯ, ಪದ ವಿನ್ಯಾಸಗಳ ಅರಿವು ಇರದಿರಬಹುದು.  ಆದರಿನ್ನು ಬರವಣಿಗೆಗೆ ತೊಂದರೆ ಆಗುವುದಿಲ್ಲ. ಗೂಗಲ್ ನಿಮಗೆ ಸಹಾಯ ಮಾಡಲು ಸಿದ್ಧವಾಗಿದೆ. ವೆಬ್ ಬ್ರೌಸರ್ ಗೂಗಲ್ ಕ್ರೋಮ್ ನಲ್ಲಿ. ಗೂಗಲ್ ಹೆಲ್ಪ್ ಮಿ ರೈಟ್ ಎಂಬ ಹೊಸ ವೈಶಿಷ್ಟ್ಯವನ್ನು ಪರಿಚಯಿಸುತ್ತಿದೆ. ಇದು ಗೂಗಲ್ ನ ಉತ್ಪಾದಕ ಎಐ ನೊಂದಿಗೆ ಕಾರ್ಯನಿರ್ವಹಿಸುತ್ತದೆ. ಮ್ಯಾಕ್ ಮತ್ತು ವಿಂಡೋಸ್ ಸಿಸ್ಟಮ್‍ಗಳಲ್ಲಿ ಲಭ್ಯವಿದೆ. ಯು.ಎಸ್.ನಲ್ಲಿ, ಎಂ 122 ಆವೃತ್ತಿಯನ್ನು ಇಂಗ್ಲಿಷ್ ನಲ್ಲಿ ಬಳಸಲಾಗುತ್ತದೆ.

'ಹೆಲ್ಪ್ ಮಿ ರೈಟ್' ವೈಶಿಷ್ಟ್ಯವು ಇತರ ಹಲವು ವೈಶಿಷ್ಟ್ಯಗಳಂತೆ, ಜೆಮಿನಿ ಲಾರ್ಜ್ ಲ್ಯಾಂಗ್ವೇಜ್ ಮಾದರಿಯನ್ನು ಬಳಸುತ್ತದೆ. ಹೊಸದನ್ನು ಬರೆಯಲು ಅಥವಾ ಪ್ರಸ್ತುತ ಪಠ್ಯವನ್ನು ಮಾರ್ಪಡಿಸಲು ಈ ವೈಶಿಷ್ಟ್ಯವನ್ನು ಬಳಸಬಹುದು. ವಿಷಯವನ್ನು ಸಿದ್ಧಪಡಿಸಲು ನೀಡಿರುವ ವೆಬ್‍ಪುಟದ ಸಂದರ್ಭವನ್ನು ಅರ್ಥಮಾಡಿಕೊಳ್ಳುವ ಮೂಲಕ ಪಠ್ಯವನ್ನು ಸಿದ್ಧಪಡಿಸುವುದು. ನೀವು ಪುಟದ ಒಂದು ಭಾಗವನ್ನು ಮಾತ್ರ ಬರೆಯಬಹುದು ಅಥವಾ ಹೆಚ್ಚು ಸಂಬಂಧಿತ ವಿವರಗಳನ್ನು ತೆಗೆದುಕೊಳ್ಳಬಹುದು.

ಈ ವೈಶಿಷ್ಟ್ಯವನ್ನು ಹೇಗೆ ಬಳಸುವುದು:

1.ಗೂಗಲ್ ಕ್ರೋಮ್ ನಲ್ಲಿ 'ಹೆಲ್ಪ್ ಮಿ ವ್ರೈಟ್’ ಅನ್ನು ಸಕ್ರಿಯಗೊಳಿಸಲು,ಕ್ರೋಮ್ ಅನ್ನು ತೆರೆಯಿರಿ ಮತ್ತು ನಿಮ್ಮ ಗೂಗಲ್ ಖಾತೆಯೊಂದಿಗೆ ಸೈನ್ ಇನ್ ಮಾಡಿ

2. ಮುಂದೆ, ಮೂರು-ಡಾಟ್ ಮೆನುವಿನಲ್ಲಿ ಟ್ಯಾಪ್ ಮಾಡಿ.

3. 'ಪ್ರಾಯೋಗಿಕ ‘ಎಐ' ಪುಟಕ್ಕಾಗಿ ಹುಡುಕಿ.

4. ಇಲ್ಲಿ, 'ಹೆಲ್ಪ್ ಮಿ ರೈಟ್' ಆಯ್ಕೆಯನ್ನು ಸಕ್ರಿಯಗೊಳಿಸಿ

5. ಸಕ್ರಿಯಗೊಳಿಸಿದ ನಂತರ, ಕ್ರೋಮ್ ನ ಒಳಗಿನ ಪಠ್ಯ ಕ್ಷೇತ್ರದ ಮೇಲೆ ಬಲ ಕ್ಲಿಕ್ ಮಾಡಿ ಮತ್ತು 'ಹೆಲ್ಪ್ ಮಿ ವ್ರೈಟ್' ಆಯ್ಕೆಯನ್ನು ಆರಿಸಿ. ನೀವು ಯಾವುದೇ ವಿಷಯದ ಬಗ್ಗೆ ಸುಂದರವಾಗಿ ಬರೆಯಬಹುದು. ಪ್ರಬಂಧ ಅಥವಾ ಕಥೆಯನ್ನು ಸುಲಭವಾಗಿ ತಯಾರಿಸಬಹುದು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries