ಮಧೂರು: ಶ್ರಾವಣ ಹುಣ್ಣಿಮೆಯ ಅಂಗವಾಗಿ ವಿಶ್ವಕರ್ಮ ಸಮಾಜದ ನೂತನ ಬ್ರಹ್ಮೋಪದೇಶ ವಟುಗಳಿಗೆ ಉಪಾಕರ್ಮ ಸಂಸ್ಕಾರ ಮಧೂರು ಶ್ರೀ ಕಾಳಿಕಾಂಬಾ ಮಠದಲ್ಲಿ ನೆರವೇರಿತು. ಶ್ರೀ ಕಾಳಿಕಾಂಬಾ ಮಠದ ಪುರೋಹಿತ ಶ್ರೀ ವಾಸುದೇವ ಆಚಾರ್ಯ ಅವರ ಪೌರೋಹಿತ್ಯದಲ್ಲಿ ಕಾರ್ಯಖ್ರಮ ನಡೆಯಿತು.
ಕಾರ್ಯಕ್ರಮದ ಅಂಗವಾಗಿ ಮಧೂರು ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ದಏವಸ್ತನ ವಠಾರದಲ್ಲಿ ಹರಿಯುತ್ತಿರುವ ಮಧುವಾಹಿನಿ ಹೊಳೆಯಲ್ಲಿ ದಂಡು ಕೋಲು ವಿಸರ್ಜನೆ ಕಾರ್ಯಕ್ರಮ ನಡೆಸಲಾಯಿತು.
ಈ ಸಂದರ್ಭ ಆಡಳಿತ ಸಮಿತಿಯ ಉಪಾಧ್ಯಕ್ಷ ಜಗದೀಶ್ ಆಚಾರ್ಯ ಕಂಬಾರು, ಕಾರ್ಯದರ್ಶಿ ತಾರಾನಾಥ ಆಚಾರ್ಯ ಮಧೂರು, ಜತೆ ಕಾರ್ಯದರ್ಶಿ ರಾಜೇಶ್ ಆಚಾರ್ಯ ಮನ್ನಿಪ್ಪಾಡಿ, ವೆಂಕಟ್ರಮಣ ಆಚಾರ್ಯ ಮೀಪುಗುರಿ ಹಾಗೂ ಸಾಮಾಜ ಬಾಂಧವರು ಪಾಲ್ಗೊಂಡಿದ್ದರು.