ಗಾಜಾ: ಪ್ಯಾಲೆಸ್ತೀನ್ ಭಯೋತ್ಪಾದಕ ಸಂಘಟನೆ ಹಮಾಸ್‌ನ ರಾಜಕೀಯ ಬ್ಯೂರೋ ಮುಖ್ಯಸ್ಥ ಇಸ್ಮಾಯಿಲ್ ಹನಿಯಾ ಹತ್ಯೆಗೆ ಕೇರಳದಲ್ಲೂ ಪ್ರತಿಭಟನೆ ನಡೆದಿದೆ.
ಕೋಝಿಕ್ಕೋಡ್‌ನ ಎಡವನ್ನಾಪರ ಮತ್ತು ಮಲಪ್ಪುರಂನ ಕುನ್ನುಮಲದಲ್ಲಿ ಹನಿಯಾ ಸಾವನ್ನು ವಿರೋಧಿಸಿ ಮಹಿಳೆಯರೂ ಸೇರಿದಂತೆ ರ್ಯಾಲಿಗಳು ನಡೆದವು.
ಅಕ್ಟೋಬರ್ 7 ರ ಭಯೋತ್ಪಾದಕ ದಾಳಿಯ ಮಾಸ್ಟರ್‌ಮೈಂಡ್‌ಗಳಲ್ಲಿ ಒಬ್ಬನಾದ ಹನಿಯಾನನ್ನು ಪ್ರತಿಭಟನಾಕಾರರು ಹುತಾತ್ಮ ಎಂದು ಕರೆದರು. ಇಸ್ಮಾಯಿಲ್ ಹನಿಯಾ ನನ್ನು ಕೊಂದ ಇಸ್ರೇಲ್ ಕ್ರಮ ತಪ್ಪು ಎಂದು ಘೋಷಣೆ ಕೂಗಲಾಯಿತು. ಮತ್ತು ಹನಿಯಾ ಪ್ಯಾಲೆಸ್ತೀನ್‌ಗಾಗಿ ರಕ್ತ ಮತ್ತು ಜೀವ ನೀಡಿದ ಮಹಾನ್ ವ್ಯಕ್ತಿ ಎಂದು ಪ್ರತಿಭಟನಾಕಾರರು ಘೋಷÀಣೆ ಕೂಗಿದರು.
ವಜಕಾಡ್ ಏರಿಯಾ ಐಕ್ಯತಾ ಯುವ ಸಂಘಟನೆ ಎಡವಣ್ಣಪರ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿತು. ಜಮಾ ಅತೆ ಇಸ್ಲಾಮಿ, ಏರಿಯಾ ಅಧ್ಯಕ್ಷ ಅಬ್ದುರ್ರಹ್ಮಾನ್, ಉಪಾಧ್ಯಕ್ಷ ರೋಶಿಕ್ ಎಳಮರಮ್, ಸಾಲಿಡಾರಿಟಿ ಅಧ್ಯಕ್ಷ ಅಮನ್ ಮುಂಡುಮುಳಿ, ಶೌಕತಲಿ, ಬಶೀರ್ ಪಿ, ನಾಸರ್ ಒಲವತ್ತೂರು, ಲತ್ವೀಫ್ ಪಿ ಮತ್ತಿತರರು ನೇತೃತ್ವ ವಹಿಸಿದ್ದರು.
ವಯನಾಡಿನಲ್ಲಿ ಪ್ರಕೃತಿ ವಿಕೋಪದಲ್ಲಿ ನೂರಾರು ಜನ ಸಾಯುತ್ತಿದ್ದರೂ ಸಹ ಜನರೊಂದಿಗೆ ಬೆಂಬಲವಾಗಿರದೆ, ಹನಿಯಾನಂತಹ ಭಯೋತ್ಪಾದಕನಿಗಾಗಿ ನಡೆಸಿದ ಪ್ರತಿಭಟನೆ ವಿರುದ್ಧ ತೀವ್ರ ಟೀಕೆ ವ್ಯಕ್ತವಾಗಿದೆ.