ಕೊಚ್ಚಿ: ಇಲ್ಲ ಎಂದು ಹೇಳುವ ಸ್ಥಿತಿಯಲ್ಲಿಲ್ಲದ ಮಹಿಳೆಯರು ನಿಮ್ಮ ತಪ್ಪಲ್ಲ ಎಂದು ವುಮೆನ್ ಇನ್ ಸಿನಿಮಾ ಕಲೆಕ್ಟಿವ್ ಫೇಸ್ ಬುಕ್ ಪೋಸ್ಟ್ ನಲ್ಲಿ ಹೇಳಿದೆ.
‘ಇಲ್ಲ ಎಂದು ಹೇಳುವ ಪರಿಸ್ಥಿತಿ ಇಲ್ಲದ ಮಹಿಳೆಯರಿಗೆ, ಇದು ನಿಮ್ಮ ತಪ್ಪಲ್ಲ ಎಂದು ಅವರಿಗೆ ಮನವರಿಕೆ ಮಾಡಿಕೊಡುತ್ತಿದ್ದೇವೆ. ಮತ್ತು ಇಲ್ಲ ಎಂದು ಹೇಳುವ ಅವಕಾಶ ಮತ್ತು ಸ್ಥಾನವನ್ನು ಹೊಂದಿರುವ ಮಹಿಳೆಯರಿಗೆ, ನಾವು ಒಟ್ಟಾಗಿ ಸುರಕ್ಷಿತ ಕೆಲಸದ ಸ್ಥಳವನ್ನು ರಚಿಸೋಣ ಎಂದು ಹೇಳಿದೆ.
ಡಬ್ಲ್ಯುಸಿಸಿಯ ಫೇಸ್‍ಬುಕ್ ಪೋಸ್ಟ್‍ನಲ್ಲಿ 'ಚೇಂಜ್ ದಿ ನೇರೇಟಿವ್' ಎಂಬ ಹ್ಯಾಶ್‍ಟ್ಯಾಗ್ ಇದೆ. ನ್ಯಾಯಮೂರ್ತಿ ಹೇಮಾ ಅವರ ಕಮಿಟ್ ರಿಪೋರ್ಟ್ ಬಿಡುಗಡೆಯಾದ ನಂತರ ಮಲಯಾಳಂ ಚಿತ್ರರಂಗದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಯಾದ ಬೆನ್ನಿಗೆ ಈ ಪೋಸ್ಟ್ ಮಾಡಲಾಗಿದೆ.