HEALTH TIPS

ದೇಶದಲ್ಲಿ ಇಂಟರ್ನೆಟ್ ವೇಗ ನಾಲ್ಕು ಪಟ್ಟು ಹೆಚ್ಚಳ: ಮೂರು ಟ್ರಾನ್ಸ್-ಓಸಿಯಾನಿಕ್ ಕೇಬಲ್ ಲೈನ್‍ಗಳು: ಡಿಜಿಟಲ್ ಲೀಪ್‍ನಲ್ಲಿ ಭಾರತ

ದೇಶದಲ್ಲಿ ಮೂರು ಜಲಾಂತರ್ಗಾಮಿ ಕೇಬಲ್ ಮಾರ್ಗಗಳು ಬರಲಿವೆ. ಇವುಗಳು ಸಾಕಾರಗೊಳ್ಳುವುದರೊಂದಿಗೆ, ಇಂಟರ್ನೆಟ್ ಇಂಡಿಯಾದ ಇಂಟರ್ನೆಟ್ ಸಾಮಥ್ರ್ಯವು ನಾಲ್ಕು ಪಟ್ಟು ಹೆಚ್ಚಲಿದೆ. 

  ಇವುಗಳು ಅಕ್ಟೋಬರ್ 2024 ಮತ್ತು ಮಾರ್ಚ್ 2025 ರ ನಡುವೆ ಕಾರ್ಯನಿರ್ವಹಿಸುವ ನಿರೀಕ್ಷೆಯಿದೆ.

 2 ಆಫ್ರಿಕಾ ಪಲ್ರ್ಸ್, ಇಂಡಿಯಾ-ಏಷ್ಯಾ-ಎಕ್ಸ್‍ಪ್ರೆಸ್ ಮತ್ತು ಇಂಡಿಯಾ-ಯುರೋಪ್-ಎಕ್ಸ್‍ಪ್ರೆಸ್ ಯೋಜನೆಗಳು ವೇಗದ ಡಿಜಿಟಲ್ ಸಂಪರ್ಕವನ್ನು ಖಚಿತಪಡಿಸುತ್ತವೆ. ಜಲಾಂತರ್ಗಾಮಿ ಕೇಬಲ್ ಗಳು ಸಮುದ್ರದ ಅಡಿಯಲ್ಲಿ ಖಂಡಗಳನ್ನು ಸಂಪರ್ಕಿಸುವ ಶಕ್ತಿಯುತ ಆಪ್ಟಿಕಲ್ ಕೇಬಲ್ ಗಳಾಗಿವೆ. ಜಾಗತಿಕ ಮಟ್ಟದಲ್ಲಿ ಹೆಚ್ಚಿನ ವೇಗದ ಡೇಟಾ ವರ್ಗಾವಣೆಯನ್ನು ಸಕ್ರಿಯಗೊಳಿಸಲು ಅವುಗಳನ್ನು ಬಳಸಲಾಗುತ್ತದೆ.

45,000 ಕಿ.ಮೀ ಗಿಂತಲೂ ಹೆಚ್ಚು ವ್ಯಾಪಿಸಿರುವ 2ಆಫ್ರಿಕಾ ಪಲ್ರ್ಸ್ ಕೇಬಲ್ ವ್ಯವಸ್ಥೆಯು ವಿಶ್ವದ ಅತಿದೊಡ್ಡ ಸಮುದ್ರದೊಳಗಿನ ಕೇಬಲ್ ವ್ಯವಸ್ಥೆಯಾಗಿದೆ. ಆಫ್ರಿಕಾ, ಮಧ್ಯಪ್ರಾಚ್ಯ ಮತ್ತು ಏಷ್ಯಾದ 33 ದೇಶಗಳನ್ನು ಸಂಪರ್ಕಿಸುವ ವ್ಯವಸ್ಥೆಯ ಮೂಲಕ 180 ಟೆರಾಬೈಟ್ ಡೇಟಾವನ್ನು ವರ್ಗಾಯಿಸಬಹುದು. ಅವುಗಳಲ್ಲಿ ಒಂದು ಮುಂಬೈನಲ್ಲಿರುವ ಭಾರ್ತಿ ಏರ್‍ಟೆಲ್‍ನ ಲ್ಯಾಂಡಿಂಗ್ ಸ್ಟೇಷನ್ ನಲ್ಲಿದೆ. ಈ ಯೋಜನೆಯು ಭಾರ್ತಿ ಏರ್‍ಟೆಲ್ ಮತ್ತು ಮೆಟಾದಂತಹ ಕಂಪನಿಗಳಿಂದ ಧನಸಹಾಯ ಪಡೆದಿದೆ.

ರಿಲಯನ್ಸ್ ಜಿಯೋ ಬೆಂಬಲದೊಂದಿಗೆ ಇಂಡಿಯಾ-ಏಷ್ಯಾ-ಎಕ್ಸ್‍ಪ್ರೆಸ್ ಮತ್ತು ಇಂಡಿಯಾ-ಯುರೋಪ್-ಎಕ್ಸ್‍ಪ್ರೆಸ್  ಕೇಬಲ್‍ಗಳ ವ್ಯವಸ್ಥೆಗಳನ್ನು ಸ್ಥಾಪಿಸಲಾಗುವುದು. ಇದು 200 ಟೆರಾಬೈಟ್ ಡೇಟಾವನ್ನು ವರ್ಗಾಯಿಸುವ ಸಾಮಥ್ರ್ಯವನ್ನು ಹೊಂದಿರುತ್ತದೆ. ಈ ಕೇಬಲ್ ಜಾಲವು ಮುಂಬೈ, ಸಿಂಗಾಪುರ, ಮಲೇಷ್ಯಾ, ಥೈಲ್ಯಾಂಡ್ ಮತ್ತು ಶ್ರೀಲಂಕಾವನ್ನು ಸಂಪರ್ಕಿಸುವ 16,000 ಕಿಮೀ ಉದ್ದವನ್ನು ಹೊಂದಿದೆ.

ಪ್ರಸ್ತುತ 17 ಅಂತಾರಾಷ್ಟ್ರೀಯ ಜಲಾಂತರ್ಗಾಮಿ ಕೇಬಲ್‍ಗಳು ಭಾರತದ ಐದು ನಗರಗಳಲ್ಲಿ 14 ನಿಲ್ದಾಣಗಳನ್ನು ತಲುಪುತ್ತಿವೆ. ಇದರ ಗರಿಷ್ಠ ಡೇಟಾ ವರ್ಗಾವಣೆ ಸಾಮಥ್ರ್ಯವು ಪ್ರತಿ ಸೆಕೆಂಡಿಗೆ 138.55 ಟಿಬಿ ಮತ್ತು ಸಕ್ರಿಯ ಸಾಮಥ್ರ್ಯವು ಪ್ರತಿ ಸೆಕೆಂಡಿಗೆ 111.11 ಟಿಬಿ ಆಗಿದೆ. ಹೊಸ ವ್ಯವಸ್ಥೆಯು ಸಾಕಾರಗೊಳ್ಳುತ್ತಿರುವಂತೆ , 5ಜಿ ವೀಡಿಯೊ ಸ್ಟ್ರೀಮಿಂಗ್, ಇಂಟರ್ನೆಟ್ ಆಫ್ ಥಿಂಗ್ಸ್ (ಐಒಟಿ) ಸಾಧನಗಳು, ಎಐ- ಆಧಾರಿತ ಸೇವೆಗಳು ಮತ್ತು ಕ್ಲೌಡ್ ಕಂಪ್ಯೂಟಿಂಗ್ ನಂತಹ ವಿಷಯಗಳನ್ನು ನೈಜ ಸಮಯದಲ್ಲಿ ಬಳಸಬಹುದು.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries