ತಿರುವನಂತಪುರಂ: ನಟ ಹಾಗೂ ‘ಅಮ್ಮಾ’ದ ಮಾಜಿ ಪ್ರಧಾನ ಕಾರ್ಯದರ್ಶಿ ಸಿದ್ದಿಕ್ ವಿರುದ್ಧದ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ತನಿಖಾ ತಂಡಕ್ಕೆ ಮಹತ್ವದ ಸಾಕ್ಷ್ಯ ಸಿಕ್ಕಿದೆ.
ದೂರಿನಲ್ಲಿ ಉಲ್ಲೇಖಿಸಿರುವ ದಿನಗಳಲ್ಲಿ ಸಿದ್ದಿಕ್ ಹಾಗೂ ಆರೋಪಿತೆ ನಟಿ ತಿರುವನಂತಪುರಂನ ಮಸ್ಕತ್ ಹೋಟೆಲ್ ನಲ್ಲಿದ್ದ ದಾಖಲೆಗಳನ್ನು ಪಡೆಯಲಾಗಿದೆ. ಹೋಟೆಲ್‍ನ ರಿಜಿಸ್ಟರ್‍ನಲ್ಲಿ ಇಬ್ಬರ ಹೆಸರೂ ಇದೆ.
ದೂರಿನಲ್ಲಿ ಉಲ್ಲೇಖಿಸಲಾದ ಕಾರ್ಯಕ್ರಮಕ್ಕೆ ಇಬ್ಬರೂ ಹಾಜರಾಗಿದ್ದರು. ಇದಾದ ನಂತರ ಇಬ್ಬರೂ ಹೋಟೆಲ್ ತಲುಪಿದ್ದರು. ರಿಜಿಸ್ಟರ್ ಬರೆದು ಸಹಿ ಮಾಡಿದ ನಂತರ, ನಟಿ ಸಿದ್ದಿಕ್ ಅವರ ಕೋಣೆಯನ್ನು ತಲುಪುತ್ತಾರೆ. ಇಬ್ಬರೂ ಒಂದೇ ಸಮಯದಲ್ಲಿ ಹೋಟೆಲ್‍ನಲ್ಲಿದ್ದರು. ಮೊದಲ ಮಹಡಿಯ ಕೊಠಡಿಯಲ್ಲಿ ಸಿದ್ದಿಕ್ ಇದ್ದರು. 2016ರಲ್ಲಿ ಹೋಟೆಲ್‍ನಲ್ಲಿ ಕಿರುಕುಳ ನೀಡಲಾಗಿತ್ತು ಎಂದು ನಟಿಯ ದೂರಿನಲ್ಲಿ ಹೇಳಲಾಗಿದೆ. ನಟಿಯ ಪ್ರಕಾರ, ಸಿದ್ದಿಕ್ ಸಿನಿಮಾ ಚರ್ಚೆಗೆಂದು ಹೇಳಿ ಕೋಣೆಗೆ ಕರೆದರು ಮತ್ತು ಕಿರುಕುಳ ನೀಡಿದ್ದರು.
ಕಂಟೋನ್ಮೆಂಟ್ ಎಸಿ ನೇತೃತ್ವದ ಪೆÇಲೀಸ್ ತಂಡ ಮಾಹಿತಿ ಸಂಗ್ರಹಿಸಿದೆ. ರಿಜಿಸ್ಟರ್ ಹಾಗೂ ಕಂಪ್ಯೂಟರ್ ನಲ್ಲಿದ್ದ ಮಾಹಿತಿ ಪತ್ತೆಯಾಗಿದೆ. ಇದೀಗ ಮ್ಯಾಜಿಸ್ಟ್ರೇಟ್ ಸಮ್ಮುಖದಲ್ಲಿ ನಟಿಯ ರಹಸ್ಯ ಹೇಳಿಕೆ ದಾಖಲಿಸಿಕೊಂಡು ಮುಂದುವರಿಯಲು ತನಿಖಾ ತಂಡ ನಿರ್ಧರಿಸಿದೆ.
ಹೇಮಾ ಸಮಿತಿ ವರದಿ ಬಿಡುಗಡೆಯಾದ ನಂತರ ಯುವ ನಟಿ ಸಿದ್ದಿಕ್ ವಿರುದ್ಧ ಲೈಂಗಿಕ ಆರೋಪಗಳನ್ನು ಮುಂದಿಟ್ಟರು. ವರ್ಷಗಳ ಹಿಂದೆ ನಟ ಸಿದ್ದಿಕ್‍ನಿಂದ ತನ್ನ ಮೇಲೆ ಲೈಂಗಿಕ ದೌರ್ಜನ್ಯ ನಡೆದಿತ್ತು ಮತ್ತು ಇತರ ಅನೇಕ ಸ್ನೇಹಿತರಿಗೆ ಸಿದ್ದಿಕ್‍ನಿಂದ ಅದೇ ಅನುಭವವಾಗಿತ್ತು ಎಂದು ಅವರು ಬಹಿರಂಗಪಡಿಸಿದ್ದರು.
ಬುಧವಾರ ಮಧ್ಯರಾತ್ರಿ 1.30ರ ಸುಮಾರಿಗೆ ಪೆÇಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಪ್ರಕರಣವು ಏಳು ವರ್ಷಗಳವರೆಗೆ ಜೈಲು ಶಿಕ್ಷೆ ನೀಡಬಹುದಾದ ಅಪರಾಧವಾಗಿದೆ.