HEALTH TIPS

ಮೊಳಗಿದ ಅಲರಾಂ-ಮೊಗ್ರಾಲ್ ಎಟಿಎಂ ಯಂತ್ರದಿAದ ಹಣ ದೋಚಲು ನಡೆಸಿದ ಕಳ್ಳರ ಯತ್ನ ವಿಫಲ

               ಕಾಸರಗೋಡು: ರಾಷ್ಟಿçÃಯ ಹೆದ್ದಾರಿ ಮೊಗ್ರಾಲ್ ಪೇಟೆಯಲ್ಲಿನ ಎ.ಟಿಎಂ ಯಂತ್ರದಿAದ ಹಣ ದೋಚಲು ಯತ್ನಿಸಲಾಗಿದ್ದು, ಈ ಸಂದರ್ಭ ಅಲರಾಮ್ ಮೊಳಗಿದ ಹಿನ್ನೆಲೆಯಲ್ಲಿ ಕಳ್ಳರು ಕಾರ್ಯಾಚರಣೆ ಉಪೇಕ್ಷಿಸಿ ಪರಾರಿಯಾಗಿದ್ದಾರೆ.

               ಮೊಗ್ರಾಲ್‌ನ ಸೌತ್ ಇಂಡಿಯನ್ ಬ್ಯಾಂಕಿಗೆ ಸೇರಿದ ಎಟಿಎಂನಲ್ಲಿ ಗುರುವಾರ ನಸುಕಿನ 3.30ಕ್ಕೆ ಕಳವಿಗೆ ಯತ್ನ ನಡೆದಿದ್ದು, ಯಂತ್ರವನ್ನು ಒಡೆಯಲು ಯತ್ನಿಸುತ್ತಿದ್ದಂತೆ ಅಲರಾಂ ಮೊಳಗಿದೆ. ಈ ಸಂದರ್ಭ ಎಟಿಎಂ ಕೊಠಡಿಯಿಂದ ಧಾವಿಸಿದ ಕಳ್ಳರು ತಮ್ಮ ವಆಃನದಲ್ಲಿ ಪರಾರಿಯಗಿದ್ದಾರೆ. ಇದೇ ಸಂದರ್ಭ ಮೊಗ್ರಾಲ್ ಜಂಕ್ಷನ್‌ನಿAದ ಅಲ್ಪ ದೂರ ಪೆಟ್ರೋಲಿಂಗ್ ನಡೆಸುತ್ತಿದ್ದ ಪೊಲೀಸರು ತಕ್ಷಣ ಸ್ಥಳಕ್ಕೆ ಧಾವಿಸಿದ್ದು, ಅಷ್ಟರಲ್ಲಿ ಕಳ್ಳರು ಪರಾರಿಯಾಗಿದ್ದಾರೆ. ಕುಂಬಳೆ ಠಾಣೆ ಇನ್ಸ್ಪೆಕ್ಟರ್ ಕೆ.ಪಿ ವಿನೋದ್, ಎಸ್.ಐ ಕೆ.ಶ್ರೀಜಿತ್  ನೇತೃತ್ವದ ಪೊಲಿಸರ ತಂಡ ಸ್ಥಳಕ್ಕಾಗಮಿಸಿ  ತಪಾಸಣೆ ನಡೆಸಿದ್ದಾರೆ. ಆಸುಪಾಸಿನ ಸಿಸಿ ಕ್ಯಾಮರಾ ತಪಾಸಣೆ ನಡೆಸಿದಾಗ ಕಳ್ಳರದ್ದೆಂದು ಸಂಶಯಿಸಲಾಗಿರುವ ದೃಶ್ಯಾವಳಿ ವಶಪಡಿಸಿಕೊಂಡು ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಶ್ವಾನದಳ, ಫೋರೆನ್ಸಿಕ್ ತಜ್ಞರೂ ಸ್ಥಳಕ್ಕಾಗಮಿಸಿ ಮಾಹಿತಿ ಸಂಗ್ರಹಿಸಿದ್ದಾರೆ. ಬ್ಯಾಂಕ್ ಪ್ರಬಂಧಕ ಜಸ್ಟಿನ್ ಅವರತ ದೂರಿನ ಮೇರೆಗೆ ತನಿಖೆ ನಡೆಯುತ್ತಿದೆ.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries