ತಿರುವನಂತಪುರಂ: ಕೇರಳದ ವಯನಾಡು ಜಿಲ್ಲೆಯ ಗುಡ್ಡಗಾಡು ಪ್ರದೇಶಗಳಲ್ಲಿ ಜುಲೈ 30 ರಂದು ಸಂಭವಿಸಿದ ಭೂಕುಸಿತದಿಂದಾಗಿ ನೂರಾರು ಜನರು ಮೃತಪಟ್ಟಿದ್ದಾರೆ. ಸಾವಿರಾರು ಮಂದಿಗೆ ಗಾಯಗಳಾಗಿದ್ದು, ಜನರ ಜೀವನ ಅಸ್ತವ್ಯಸ್ತಗೊಂಡಿದೆ. ಪ್ರಧಾನಿ ಮೋದಿ ಅವರು ಶನಿವಾರ(ಆಗಸ್ಟ್11) ವಯನಾಡಿಗೆ ಭೇಟಿ ನೀಡಿದ್ದರು.

ದಕ್ಷಿಣ ಭಾರತದ ಸೆಲಿಬ್ರಿಟಿಗಳು ಸಂತ್ರಸ್ತರಿಗೆ ಮತ್ತು ಸಂತ್ರಸ್ತ ಕುಟುಂಬಗಳಿಗೆ ನೆರವಾಗಲು ಮುಂದಾಗಿದ್ದಾರೆ. ಸಂತ್ರಸ್ತರ ಪುನರ್ವಸತಿ ಕಾರ್ಯಕ್ಕಾಗಿ ತಮಿಳು ನಟ ಧನುಷ್ ಕೇರಳ ಸಿಎಂ ಪರಿಹಾರ ನಿಧಿಗೆ 25 ಲಕ್ಷ ರೂಪಾಯಿ ದೇಣಿಗೆ ನೀಡಿರುವುದಾಗಿ ಶ್ರೀಧರ್ ಪಿಳ್ಳೈ ಅವರು ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
ಈ ಮೊದಲು ನಟರಾದ ಸೂರ್ಯ ಮತ್ತು ವಿಕ್ರಮ್, ಮಮ್ಮುಟ್ಟಿ , ದುಲ್ಕರ್ ಸಲ್ಮಾನ್, ಫಹದ್ ಫಾಸಿಲ್, ನಜ್ರಿಯಾ, ನಯನತಾರಾ ಮತ್ತು ವಿಘ್ನೇಶ್ ಶಿವನ್ ದಂಪತಿ, ಮೋಹನ್‌ಲಾಲ್, ಅಲ್ಲು ಅರ್ಜುನ್, ಚಿರಂಜೀವಿ ಮತ್ತು ರಾಮಚರಣ್ ಕೇರಳ ಮುಖ್ಯಮಂತ್ರಿಗಳ ಸಂಕಷ್ಟ ಪರಿಹಾರ ನಿಧಿಗೆ ದೇಣಿಗೆ ನೀಡಿದ್ದಾರೆ.
ನಟ ಧನುಷ್ ಅಭಿನಯಿಸಿದ ರಾಯನ್ ಸಿನಿಮಾ ಇತ್ತೀಚೆಗಷ್ಟೆ ಬಿಡುಗಡೆಗೊಂಡಿತ್ತು. ಇದು ಧನುಷ್ ಅವರ 50ನೇ ಸಿನಿಮಾವಾಗಿದ್ದು, ಅವರ ನಿರ್ದೇಶನದಲ್ಲೆ ಮೂಡಿ ಬಂದ ಚಿತ್ರ. ಶೇಖರ್ ಕಮ್ಮುಲ ಅವರ ಕುಬೇರ ಸಿನಿಮಾದಲ್ಲಿ ಧನುಷ್ ಪಾತ್ರವನ್ನು ನೋಡಲು ಅವರ ಅಭಿಮಾನಿಗಳು ಕಾಯುತ್ತಿದ್ದಾರೆ.