ಕಾಸರಗೋಡು: ಮುಂಬರುವ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಸಹ ಪ್ರಭಾರಿಯಾಗಿ ಪಕ್ಷದ ವತಿಯಿಂದ ಮಹಿಳಾ ಮೋರ್ಚಾ ರಾಷ್ಟ್ರೀಯ ಕಾರ್ಯಕಾರಣಿ ಸದಸ್ಯೆ ಹಾಗೂ ಮಂಜೇಶ್ವರ ಬ್ಲಾಕ್ ಪಂಚಾಯತ್ ಸದಸ್ಯೆ ಅಶ್ವಿನಿ ಎಂ.ಎಲ್ ಅವರನ್ನು ನೇಮಿಸಲಾಗಿದೆ. ಆಂಧ್ರಪ್ರದೇಶದ ಮಾಯಾ ನೆರೋಲಿಯಾ ಅವರನ್ನು ಪ್ರಭಾರಿ ಹಾಗೂ ಅಶ್ವಿನಿ ಎಂ.ಎಲ್ ಒಳಗೊಂಡಂತೆ ಒಟ್ಟು ಮೂರು ಮಂದಿಯನ್ನು ಸಹಪ್ರಬಾರಿಗಳಾಗಿ ಆಯ್ಕೆ ಮಾಡಲಾಗಿದೆ.