ಕಾಸರಗೋಡು: ನಾಯರ್ಸ್ ಸರ್ವೀಸ್ ಸೊಸೈಟ(ಎನ್‍ಎಸ್‍ಎಸ್)ಕಾಸರಗೋಡು ತಾಲೂಕು ಕರಯೋಗ ಯೂನಿಯನ್ ಮಾನವ ಸಂಪನ್ಮೂಲ ಕೇಂದ್ರ ವತಿಯಿಂದ ಎರಡು ದಿನಗಳ ವಿವಾಹ ಪೂರ್ವ ಮಾಹಿತಿ ಕಾರ್ಯಾಗಾರ ಕಾಸರಗೋಡು ಎನ್ ಎಸ್ ಎಸ್ ಕಾರ್ಯಯೋಗ ಮಂದಿರದಲ್ಲಿ ಜರುಗಿತು.
ಕೇರಳ ಕೇಂದ್ರೀಯ ವಿಶ್ವವಿದ್ಯಾನಿಲಯದ ಕುಲಸಚಿವ ಎಂ.ಮುರಳೀಧರನ್ ನಂಬಿಯಾರ್ ಉದ್ಘಾಟಿಸಿದರು. ಒಕ್ಕೂಟದ ಅಧ್ಯಕ್ಷ ಅಡ್ವ.ಎ.ಬಾಲಕೃಷ್ಣನ್ ನಾಯರ್ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ಪತ್ರಕರ್ತ ವಿ.ವಿ.ಪ್ರಭಾಕರನ್, ಪಿ.ಗೋಪಾಲ ಮಾಸ್ಟರ್ ಕುಟ್ಟಿಕ್ಕೋಲ್, ಪಿ.ವಿ.ಸುಜಾತಾ, ಡಾ. ವಿನೀತಾ ನಂಬಿಯಾರ್, ವಕೀಲೆ ಪಿ.ಪಿ.ಶ್ಯಾಮಲಾದೇವಿ, ಅನೂಪ್ ಕುಮಾರ್, ಎ. ಶಂಕರನ್ ನಾಯರ್ ವಿವಿಧ ವಿಷಯಗಳ ಬಗ್ಗೆ ತರಗತಿ ನಡೆಸಿದರು. ಒಕ್ಕೂಟದ ಕಾರ್ಯದರ್ಶಿ ಇ.ಅರವಿಂದಾಕ್ಷನ್ ಸ್ವಾಗತಿಸಿದರು. ಕಾಸರಗೋಡು ತಾಲೂಕು ಮಹಿಳಾ ವಿಭಾಗದ ಅಧ್ಯಕ್ಷೆ ಸ್ಮಿತಾ ಬಾಲಕೃಷ್ಣನ್ ವಂದಿಸಿದರು. ಎರಡು ದಿನಗಳ ಕಾರ್ಯಾಗಾರ ಆಯೋಜಿಸಲಾಗಿತ್ತು. ಸಮಾರೋಪ ಸಮಾರಂಭದಲ್ಲಿ ಪಿ. ಪಿ ಬಾಲಕೃಷ್ಣನ್ ನಾಯರ್ ಪ್ರಮಾಣ ಪತ್ರ ವಿತರಿಸಿದರು.