ಮಂಜೇಶ್ವರ: ಕೋಳ್ಯೂರು ಶ್ರೀ ಶಂಕರನಾರಾಯಣ ದೇವಸ್ಥಾನಕ್ಕೆ ನುಗ್ಗಿ ಚಿನ್ನ, ಬೆಳ್ಳಿ ಆಭರಣ ಕಳವುಗೈದಿರುವುದಲ್ಲದೆ, ಕ್ಷೇತ್ರದ ಪಾವಿತ್ರö್ಯತೆಗೆ ಧಕ್ಕೆ ತಂದೊಡ್ಡಿರುವ ಸಮಾಜಘಾತುಕರನ್ನು ಬಂಧಿಸದಿರುವ ಪೊಲೀಸರ ಕ್ರಮ ಖಂಡಿಸಿ ಭಕ್ತಾದಿಗಳಿಂದ ಖಂಡನಾ ಸಭೆ ಆ. 4ರಂದು ಸಂಜೆ 4ಕ್ಕೆ ಸುಂಕದಕಟ್ಟೆ ಮಜೀರ್‌ಪಳ್ಳದಲ್ಲಿ ಜರಗಲಿದೆ.
ದೇವಸ್ಥಾನ ಹಾಗೂ ಆಸುಪಸಿನ ಮನೆಗಳಿಂದ ನಿರಂತರ ಕಳವು ಕೃತ್ಯಗಳು ನಡೆಯುತ್ತಾ ಬರುತ್ತಿದ್ದರೂ, ಕಳವುಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿ ಆರೋಪಿಗಳ ಪತ್ತೆನಡೆಸದಿರುವುದು ಹಾಗೂ ಶಾಂತಿ ಸುವ್ಯವಸ್ಥೆ ಕಾಪಾಡುವಲ್ಲಿ ವಿಫಲರಾಗಿರುವ ಪೊಲೀಸರ ನಡೆ ಖಂಡಿಸಿ ಸಭೆ ಆಯೋಜಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.