ಆಗಸ್ಟ್ 1ನ್ನು ಶ್ವಾಸಕೋಶದ ಕ್ಯಾನ್ಸರ್ ದಿನವನ್ನಾಗಿ ಆಚರಿಸಲಾಗುವುದು, ಶ್ವಾಸಕೋಶದ ಕ್ಯಾನ್ಸರ್ ಬಗ್ಗೆ ಜಾಗ್ರತೆ ಮೂಡಿಸಲು ಈ ದಿನವನ್ನು ಆಚರಿಸಲಾಗುವುದು.
ಇತ್ತೀಚೆಗಷ್ಟೇ ಖ್ಯಾತ ನಿರೂಪಕಿ, ನಟಿ ಅಪರ್ಣಾ ಅವರು ಶ್ವಾಸಕೋಶದ ಕ್ಯಾನ್ಸರ್‌ಗೆ ಬಲಿಯಾಗಿದ್ದರು, ಈ ಶ್ವಾಸಕೋಶದ ಕ್ಯಾನ್ಸರ್ ಎಂಬುವುದು ಧೂಮಪಾನಿಗಳಲ್ಲದವರಲ್ಲಿಯೂ ಕಂಡು ಬರುತ್ತಿದೆ.
ಈ ಶ್ವಾಸಕೋಶದ ಕ್ಯಾನ್ಸರ್ ಅಪಾಯಕಾರಿಯಾಗಿದ್ದು ಧೂಮಪಾನಿಗಳಲ್ಲದಿದ್ದರೂ ಈ ಕ್ಯಾನ್ಸರ್ ಬರಲು ಕಾರಣವೇನು ಎಂಬ ಪ್ರಶ್ನೆ ಮೂಡುವುದು ಅಲ್ವಾ? ಧೂಮಪಾನಿಗಳಲ್ಲಿ ಆದರೆ ಅವರು ಧೂಮಪಾನ ಮಾಡಿ ಬಂದಿರುವುದು ಎಂದು ಹೇಳಬಹದು, ಅದೇ ಧೂಮಪಾನ ಮಾಡದವರಲ್ಲಿಯೂ ಈ ಸಮಸ್ಯೆ ಕಂಡು ಬರಲು ಕಾರಣವೇನು? ಎಂದು ನೋಡೋಣ ಬನ್ನಿ:
ಧೂಮಪಾನಿಗಳಲ್ಲದಿದದ್ದರೂ ಶ್ವಾಸಕೋಶದ ಕ್ಯಾನ್ಸರ್‌ಗೆ ಕಾರಣಗಳು:
ರೇಡಾನ್: ಕೆಲವೊಂದು ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದರೆ ಅದರ ಹೊಗೆ, ಕೆಲವೊಂದು ಹೊಗೆ ಮನೆಯೊಳಗಡೆಯೇ ಇದ್ದರೆ ಅದರ ನಿರಂತರ ಸೇವನೆಯಿಂದ ಶ್ವಾಸಕೋಶದ ಕ್ಯಾನ್ಸರ್ ಉಂಟಾಗುವುದು.
ಧೂಮಪಾನ ಮಾಡುವವರ ಬಳಿ ನಿಂತಾಗ: ಕೆಲವರು ಧೂಮಪಾನ ಮಾಡುವಾಗ ನಾವು ಅಲ್ಲಿ ನಿಂತರ ಅವರು ಎಳೆದು ಬಿಟ್ಟ ಹೊಗೆ ನಾವು ಉಸಿರಾಡುವಾಗ ನಮ್ಮ ಶ್ವಾಸಕೋಶವನ್ನು ಸೇರುತ್ತದೆ, ಹಾಗಾಗಿಯೇ ಧೂಮಪಾನ ಎಳೆಯುವುದು ಮಾತ್ರವಲ್ಲ ಬೇರೆಯವರು ಎಳಿದು ಬಿಟ್ಟ ಹೊಗೆ ಸೇವಿಸಬಾರದು. ಮಕ್ಕಳ ಇರುವಾಗ ಮನೆಯೊಳಗಡೆ, ಕಾರಿನೊಳಗಡೆ ಧೂಮಪಾನ ಮಾಡಬಾರದು ಎಂದು ಹೇಳುವುದು.
ವಾಯು ಮಾಲಿನ್ಯ: ಹೆಚ್ಚು ವಾಯು ಮಾಲಿನ್ಯ ಇರುವ ಪ್ರದೇಶದಲ್ಲಿ ಒಡಾಡುವವರೆಗೆ ಈ ಶ್ವಾಸಕೋಶದ ಅಪಾಯ ಹೆಚ್ಚು. ಅದರಲ್ಲಿಯೂ ವಯಸ್ಸಾಗುತ್ತಿದ್ದಂತೆ ಈ ಬಗೆಯ ಅಪಾಯ ಹೆಚ್ಚಾಗುವುದು. ರೋಗ ನಿರೋಧಕ ಶಕ್ತಿ ಕಡಿಮೆ ಇರುವವರಲ್ಲಿ ಈ ಅಪಾಯ ಹೆಚ್ಚು.
ಶ್ವಾಸಕೋಶದ ಸಮಸ್ಯೆ ಇರುವವರಿಗೆ
ಶ್ವಾಸಕೋಶದ ಸೋಂಕು ಇರುವವರೆಗೆ ಈ ಅಪಾಯ ಹೆಚ್ಚು. ಅದರಲ್ಲಿಯೂ ಅವರ ಜೀವನಶಯಲಿ ಆರೋಗ್ಯಕರ ಇಲ್ಲದಿದ್ದರೆ, ಧೂಮಪಾನಿಗಳಾಗಿದ್ದರೆ ಅತವಾ ಅತ್ಯಧಿಕ ವಾಯು ಮಾಲಿನ್ಯ ಇರುವ ಕಡೆಗೆ ವಾಸಿಸುತ್ತಿರುವವರೆಗೆ ಈ ಅಪಾಯ ಹೆಚ್ಚು.
ಈ ಶ್ವಾಸಕೋಶದ ಕ್ಯಾನ್ಸರ್ ತಡೆಗಟ್ಟುವುದು ಹೇಗೆ?
ಮನೆಯಲ್ಲಿ ಹೊಗೆ ತುಂಬಿಕೊಳ್ಳದಂತೆ ನೋಡಿಕೊಳ್ಳುವುದು, ಸೌತೆ ಒಲೆ ಅಥವಾ ಇತರ ಗ್ಯಾಸ್ ಲೀಕ್ ಇವುಗಳ ಬಗ್ಗೆ ಗಮನಹರಿಸಬೇಕು.
ವಾಯು ಮಾಲಿನ್ಯ ಅಧಿಕ ಇರುವ ಕಡೆ ವಾಸ ಮಾಡದಿರುವದು
ಧೂಮಪಾನ ಮಾಡದಿರುವುದು
ಬೇರೆಯವರು ಸೇದಿದ ಸಿಗರೇಟ್‌ನ ಹೊಗೆ ತೆಗೆದುಕೊಳ್ಳದಿರುವುದು
ಶ್ವಾಸಕೋಶದ ಕ್ಯಾನ್ಸರ್ ಲಕ್ಷಣಗಳೇನು?
ವಿಪರೀತ ಕೆಮ್ಮು, ಕೆಮ್ಮು ಕಡಿಮೆಯಾಗದೆ ಇರುವುದು
ಕಫದಲ್ಲಿ ರಕ್ತ
ಎದೆನೋವು
ಉಸಿರಾಟದಲ್ಲಿ ತೊಂದರೆ
ದಮ್ಮು
ಗಂಟಲು ಕೆರೆತ
ಇದ್ದಕ್ಕಿದ್ದಂತೆ ತೂಕ ಕಡಿಮೆಯಾಗುವುದು
ತಲೆಸುತ್ತು
ಆಗಾಗ ಶ್ವಾಸಕೋಶದ ಸೋಂಕು ಉಂಟಾಗುವುದು.
ಈ ಬಗೆಯ ಲಕ್ಷಣಗಳು ಕಂಡು ಬಂದಾಗ ಈ ತಜ್ಞರನ್ನು ಭೇಟಿಯಾಗಿ ಅವರ ಸಲಹೆ ಸೂಚನೆ ಪಡೆಯಿರಿ
Pulmonologist (ಶ್ವಾಸಕೋಶ ತಜ್ಞ)
Thoracic surgeon (ಎದೆಗೂಡಿನ ತಜ್ಞ)
Medical oncologist (ಮೆಡಿಕಲ್ ಆಂಕೊಲಾಜಿಸ್ಟ್)
Radiation oncologist(ರೇಡಿಯೇಷನ್ ಆಂಕೊಲಾಜಿಸ್ಟ್)