ಶಿಕಾಗೋ: 'ತಾಯಿ ಶ್ಯಾಮಲಾ ಗೋಪಾಲನ್ ನನ್ನ ಜೀವನದಲ್ಲಿ ಮೌಲ್ಯಗಳನ್ನು ತುಂಬಿದ್ದು, ಅವರನ್ನು ಪ್ರತಿ ದಿನವೂ ನೆನಪಿಸಿಕೊಳ್ಳುತ್ತೇನೆ' ಎಂದು ಡೆಮಾಕ್ರಟಿಕ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ ಕಮಲಾ ಹ್ಯಾರಿಸ್ ತಿಳಿಸಿದ್ದಾರೆ.
ಶಿಕಾಗೋ: 'ತಾಯಿ ಶ್ಯಾಮಲಾ ಗೋಪಾಲನ್ ನನ್ನ ಜೀವನದಲ್ಲಿ ಮೌಲ್ಯಗಳನ್ನು ತುಂಬಿದ್ದು, ಅವರನ್ನು ಪ್ರತಿ ದಿನವೂ ನೆನಪಿಸಿಕೊಳ್ಳುತ್ತೇನೆ' ಎಂದು ಡೆಮಾಕ್ರಟಿಕ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ ಕಮಲಾ ಹ್ಯಾರಿಸ್ ತಿಳಿಸಿದ್ದಾರೆ.
ಡೆಮಾಕ್ರಟಿಕ್ ಪಕ್ಷವು ಅಧ್ಯಕ್ಷೀಯ ಅಭ್ಯರ್ಥಿಯಾಗಿ ತಮ್ಮನ್ನು ನಾಮನಿರ್ದೇಶನ ಮಾಡಿರುವುದನ್ನು ಕಮಲಾ ಅವರು ಶಿಕಾಗೋದಲ್ಲಿ ಅಧಿಕೃತವಾಗಿ ಒಪ್ಪಿಕೊಂಡ ಬೆನ್ನಲ್ಲೇ ತಾಯಿಯ ನೆನಪು ಮಾಡಿಕೊಂಡಿದ್ದಾರೆ.
ಜುಲೈ ತಿಂಗಳಲ್ಲಿ ಜೋ ಬೈಡನ್ ಅವರು ಅಧ್ಯಕ್ಷ ಸ್ಥಾನಕ್ಕೆ ಪುನಾರಾಯ್ಕೆ ಆಗುವುದರಿಂದ ಹಿಂದೆ ಸರಿದ ಬಳಿಕ ಡೆಮಾಕ್ರಟಿಕ್ ಪಕ್ಷದಿಂದ ಅಧ್ಯಕ್ಷೀಯ ಅಭ್ಯರ್ಥಿಯಾಗಿ ಆಯ್ಕೆಯಾಗಿದ್ದು 'ಅನಿರೀಕ್ಷಿತ' ಎಂದು ಬಣ್ಣಿಸಿದ ಹ್ಯಾರಿಸ್, 'ಇಂತಹ ಅನಿಶ್ಚಿತ ಪ್ರಯಾಣಗಳು ಹೊಸತೇನಲ್ಲ' ಎಂದರು.
'ತಾಯಿ ಶ್ಯಾಮಲಾ ಅವರು ತಮ್ಮದೇ ಆದ ವ್ಯಕ್ತಿತ್ವ ಹೊಂದಿದ್ದರು. ಇಂದು ಅವರು ಮೇಲಿನಿಂದ ನೋಡುತ್ತಿದ್ದು, ನಗೆ ಬೀರುತ್ತಿದ್ದಾರೆ. ಅವರು ಐದು ಅಡಿ ಎತ್ತರದ ಬೂದು ಬಣ್ಣದ ಅಸಾಧಾರಣ ಮಹಿಳೆಯಾಗಿದ್ದರು' ಎಂದು ವಿವರಿಸಿದರು.
' 19ನೇ ವಯಸ್ಸಿಗೆ ಭಾರತದಿಂದ ಕ್ಯಾಲಿಫೋರ್ನಿಯಾಕ್ಕೆ ಏಕಾಂಗಿಯಾಗಿ ಬಂದಿಳಿದ ಅವರು, ಸ್ತನ ಕ್ಯಾನ್ಸರ್ ಗುಣಪಡಿಸುವ ವಿಜ್ಞಾನಿಯಾಗುವ ದೃಢಸಂಕಲ್ಪ ತೊಟ್ಟಿದ್ದರು. ಅನ್ಯಾಯವಾದಾಗ ಯಾವಾಗಲೂ ದೂರುತ್ತಾ ಕೂರಬೇಡ. ಅದನ್ನು ಸರಿಪಡಿಸಲು ಪ್ರಯತ್ನಿಸು ಎಂದು ತಿಳಿಸಿಕೊಟ್ಟಿದ್ದರು' ಎಂದು ಹೇಳುವ ಮೂಲಕ ಹ್ಯಾರಿಸ್ ಭಾವುಕರಾದರು.
ಗುರುವಾರ 10ನೇ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಂಡ ಕಮಲಾ ಹ್ಯಾರಿಸ್ ಅವರು ತಮ್ಮ ಪತಿ ಡಗ್ಲಾಸ್ ಎಮ್‌ಹಾಫ್ ಅವರಿಗೂ ಶುಭಾಶಯ ಕೋರಿದರು.