ಮಂಗಳೂರು : ಕರಾವಳಿ ಕರ್ನಾಟಕ ಭಾಗದಲ್ಲಿ ನಿರಂತರ ಮಳೆಯಿಂದಾಗಿ ರಾಷ್ಟ್ರೀಯ ಹೆದ್ದಾರಿಗೆ ಅಲ್ಲಲ್ಲಿ ಹಾನಿಯಾಗಿದ್ದು ಹೆಚ್ಚಿನ ವೇಗದ ಸಂಚಾರ ಅಸುರಕ್ಷಿತವಾಗಿದೆ. ರಾಷ್ಟ್ರೀಯ ಹೆದ್ದಾರಿಯ ಬಳಕೆದಾರರ ಸುರಕ್ಷತೆಯ ಹಿತದೃಷ್ಟಿಯಿಂದ, ರಾಷ್ಟ್ರೀಯ ಹೆದ್ದಾರಿ ಆಡಳಿತವು ಜಿಲ್ಲೆಯ ಎನ್‌ಎಚ್-66ನಲ್ಲಿ ಸುರತ್ಕಲ್‌ನಿಂದ ತೊಕ್ಕೊಟ್ಟು ಜಂಕ್ಷನ್‌ವರೆಗೆ ಮತ್ತು ಬಿ.ಸಿ ರೋಡ್ ನಿಂದ ನಂತೂರು ಜಂಕ್ಷನ್ ವರೆಗೆ ಎನ್‌ಎಟಚ್-73 ರಲ್ಲಿ ದ್ವಿಚಕ್ರ, ತ್ರಿಚಕ್ರ ಮತ್ತು ಘನ ವಾಹನಗಳನ್ನು ಗಂಟೆಗೆ 40 ಕಿ.ಮೀ.ಗೆ ನಿರ್ಬಂಧಿಸಲಾಗಿದೆ.